ಉತ್ಸಾಹದಿಂದ ಮತ ಚಲಾಯಿಸಿದ ಹಿರಿಯ ನಾಗರಿಕರು
ಕೋಲಾರ, ೨೬ ನವೆಂಬರ್ (ಹಿ.ಸ) : ಆ್ಯಂಕರ್ : ಕೋಲಾರ ಮೀಸಲು ಲೋಕಸಭ ಕ್ಷೇತ್ರಕ್ಕೆ ನಡೆದ ಮತದಾನ ಕೋಲಾರ ಸೇರಿದಂತೆ ವಿವಿದ
ಕೋಲಾರ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಹಿರಿಯ ನಾಗರೀಕರು ಉತ್ಸಾಹದಿಂದ ಮತ ಚಲಾಯಿಸಿದರು.


ಕೋಲಾರ, ೨೬ ನವೆಂಬರ್ (ಹಿ.ಸ) :

ಆ್ಯಂಕರ್ : ಕೋಲಾರ ಮೀಸಲು ಲೋಕಸಭ ಕ್ಷೇತ್ರಕ್ಕೆ ನಡೆದ ಮತದಾನ ಕೋಲಾರ ಸೇರಿದಂತೆ ವಿವಿದೇ ಶಾಂತಿಯುತವಾಗಿ ನಡೆಯಿತು. ಕೆಲ ಸಣ್ಣ ಪುಟ್ಟ ಗೊಂದಲಗಳ ನಡುವೆ ಸಂಜೆ ೭ ಗಂಟೆ ವೇಳೆಗೆ ಶೇ.೭೭.೬೬ ರಷ್ಟು ಮತದಾನ ನಡೆದಿದೆ.

ಶ್ರೀನಿವಾಸಪುರದ ರಾಜಗುಂಡ್ಲಹಳ್ಳಿ ಮತಗಟ್ಟೆಯಲ್ಲಿ ಪ್ರಾರಂಭದಲ್ಲಿ ಇವಿಎಂ ಕೈಕೊಟ್ಟು ತಡವಾಗಿ ಮತದಾನ ಪ್ರಾರಂಭವಾಯಿತು. ಕೋಲಾರ ತಾಲ್ಲೂಕಿನ ಬೆಟ್ಟಬೆಣಜೇನಹಳ್ಳಿ ಗ್ರಾಮದಲ್ಲಿ ಎಂ.ಎಸ್.ಐ.ಎಲ್ ಮದ್ಯದ ಮಳಿಗೆ ಸ್ಥಳಾಂತರಕ್ಕೆ ಒತ್ತಾಯಿಸಿ ಗ್ರಾಮದ ಕೆಲವರು ಮತದಾನ ಬಹಿಷ್ಕರಿಸಿದರು ವಿಷಯ ತಿಳಿದ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗಿ ಅಂತಿಮವಾಗಿ ಗ್ರಾಮಸ್ಥರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಕೋಲಾರ ತಾಲ್ಲೂಕಿನ ಬಸವನತ್ತ ಗ್ರಾಮದ ೧೦೭ ವರ್ಷದ ವೃದ್ದ ಮುನಿವೆಂಕಟಪ್ಪ ಮತಗಟ್ಟೆಗೆ ದಾವಿಸಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಮಾದರಿಯಾಗಿದ್ದಾರೆ, ನಗರದ ಕಠಾರಿಪಾಳ್ಯ ೨೦ ನೇ ವಾರ್ಡಿನ ಮಾಸ್ತಿ ಠಾಣೆಯ ಮುಖ್ಯ ಪೇದೆ ಮುರಳಿಧರ್ ತಾಯಿಗೆ ಮುನಿವೆಂಕಟಮ್ಮ ೧೦೦ ವರ್ಷವಾಗಿದ್ದು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

ಕೋಲಾರ ತಾಲ್ಲೂಕಿನ ನರಸಾಪುರ ಗ್ರಾಮದ ೯೮ ವರ್ಷದ ಸುಶೀಲಮ್ಮ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ. ಶ್ರೀನಿವಾಸಪುರದ ಕಲ್ಲೂರು ಗ್ರಾಮದ ಮತಗಟ್ಟೆ ಸಂಖ್ಯೆ ೧೩೩ ರಲ್ಲಿ ಬೂತ್ ಏಜೆಂಟರ ನಡುವೆ ಮಾತಿನ ಚಕಮಕಿ ನಡೆದು ಸುಮಾರು ಒಂದು ಗಂಟೆಗಳ ಕಾಲ ಮತದಾತ ಪ್ರಕ್ರಿಯೆ ಸ್ಥಳಗಿತಗೊಂಡಿತ್ತು ಪೋಲೀಸರು ಮಧ್ಯ ಪ್ರವೇಶಿಸಿ ಎರಡು ಗುಂಪುಗಳನ್ನು ಸಮಾಧಾನ ಪಡಿಸಿ ಮತದಾನ ಆರಂಬಿಸಲು ಅವಕಾಶ ಕಲ್ಪಿಸಿದರು.

ಕೋಲಾರ ನಗರದ ಮಾಸ್ತಿ ಬಡಾವಣೆಯ ನಿವಾಸಿ ಅನುಪಮಾ ಜಯಕುಮಾರ್ ಎಂಬುವವರು ಅಮೇರಿಕಾದ ಚಿಕಾಗೋದಲ್ಲಿ ಉದ್ಯೋಗ ಮಾಡುತ್ತಿದ್ದು, ಇಂದು ಲೋಕಸಭ ಚುನಾವಣೆ ಮತದಾನ ಹಿನ್ನೆಲೆ ಕೋಲಾರಕ್ಕೆ ಆಗಮಿಸಿ ಮತಗಟ್ಟೆ ಸಂಖ್ಯೆ ೧೧೩ ರಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಮಾಲೂರು ತಾಲ್ಲೂಕಿನ ತೊರ್ನಹಳ್ಳಿ ಗ್ರಾಮದ ಕೆರೆಗೆ ಕೆಸಿ ನೀರು ಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದಾರೆ ಸುಮಾರು ೨೨೦೦ ಮತಗಳನ್ನು ಹೊಂದಿರುವ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿದ್ದು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದರು ನಂತರ ಮಾಲೂರು ತಾಹಶಿಲ್ದಾರ್ ಹಾಗೂ ಶಾಸಕ .ಕೆವೈ ನಂಜೇಗೌಡ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿ ಮತದಾನ ಮಾಡಿಸಿದರು.

ಕೋಲಾರ ತಾಲ್ಲೂಕಿನ ಕೆಬಿ ಹೊಸಹಳ್ಳಿ ಗ್ರಾಮದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಮತದಾನ ಬಹಿಷ್ಕರಿಸಲಾಗಿತ್ತು ನಂತರ ಅಧಿಕಾರಿಗಳ ಮನವೊಲಿಕೆ ನಂತರ ಮತದಾನ ಆರಂಬವಾಯಿತು, ಜಿಲ್ಲೆಯಾದ್ಯಂತ ಯುವ ಮತದಾರರು ತಮ್ಮ ಮೊದಲ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಸಂತಸ ವ್ಯಕ್ತಪಡಿಸಿದ್ದು ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡಿದ್ದು ತಮಗೆ ಹೊಸ ಅನುಭವನ ಹಾಗೂ ದೇಶಕ್ಕಾಗಿ ಮತ ಚಲಾಯಿಸಿದ್ದೇವೆ ಎಂದು ಅಬಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಜೆಡಿಎಸ್ ಹಾಗೂ ಬಿಜೆಪಿಯ ಎನ್.ಡಿ.ಎ ಅಭ್ಯರ್ಥಿ ಮಲ್ಲೇಶ್ ಬಾಬು ತಮ್ಮ ಸ್ವಂತ ಗ್ರಾಮವಾದ ಕುಂಬಾರಹಳ್ಳಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು, ಇನ್ನು ಕಾಂಗ್ರೇಸ್ ಅಭ್ಯರ್ಥಿ ಗೌತಮ್ ಬೆಂಗಳೂರು ನಿವಾಸಿಯಾಗಿರೋದ್ರಿಂದ ಬೆಂಗಳೂರಿನಲ್ಲೇ ಮತಚಲಾಯಿಸಿದರು.

ಸಚಿವ ಕೆಹೆಚ್ ಮುನಿಯಪ್ಪ ಕೋಲಾರ ನಗರದ ಹಾರೋಹಳ್ಳಿಯರಲ್ಲಿರುವ ಮತಗಟ್ಟೆ ೧೨೭ ರಲ್ಲಿ ಪತ್ನಿ ನಾಗರತ್ನ ಜೊತೆಯಲ್ಲಿ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು ನಂತರ ಪ್ರತಿಕ್ರಯೆ ನೀಡಿದ ಸಚಿವರು ಪ್ರಜಾಪ್ರಭುತ್ವ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಮಾಲೂರಿನ ಕಾಂಗ್ರೇಸ್ ಶಾಸಕ ಕೆವೈ ನಂಜೇಗೌಡ ತಮ್ಮ ಸ್ವಂತ ಗ್ರಾಮವಾದ ಕೊಮ್ಮನಹಳ್ಳಿಯಲ್ಲಿ ಪತ್ನಿ ರತ್ನಮ್ಮ ಮತಗಟ್ಟೆಗೆ ಜೊತೆಯಲ್ಲಿ ತೆರಳಿ ಮತದಾನ ಮಾಡಿದರು. ಮಾಲೂರಿನ ಹೂಡಿ ವಿಜಯ್ ಕುಮಾರ್, ಪತ್ನಿ ಶ್ವೇತಾ ವಿಜಯ್ ಕುಮಾರ ರೊಂದಿಗೆ ಮತಗಟ್ಟೆಗೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.

ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಬಂಗಾರಪೇಟೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಪತ್ನಿ ಶಶಿಕಲ ಜೊತೆಗೂಡಿ ಮತಚಲಾಯಿಸಿದರು. ಜಿಲ್ಲಾಧಿಕಾರಿ ಅಕ್ರಂ ಪಾಷಾ, ಹಾಗೂ ಜಿಲ್ಲಾ ರಕ್ಷಣಾಧೀಕಾರಿ ಎಂ.ನಾರಾಯಣ್ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

ಮುಳಬಾಗಿಲು ಶಾಸಕ ಸಂಮೃದ್ದಿ ಮಂಜುನಾಥ್ ಕುಟುಂಬಸ್ಥರೊAದಿಗೆ ಮುಳಬಾಗಿಲು ತಾಲ್ಲೂಕನ ದೇವರಾಯ ಸಮುದ್ರ ಗ್ರಾಮದ ಮತಗಟ್ಟೆಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಮಾಜಿ ಶಾಸಕರಾದ ವರ್ತೂರು ಪ್ರಕಾಶ್ ಅವರು ಕುಟುಂಬ ಸಮೇತ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಾಲಾಯಿಸಿದರು ಮತಚಲಾಯಿಸಿ ಹೊರ ಬಂದ ನಂತರ ನನ್ನ ಹಕ್ಕನ್ನು ನಾನು ಚಲಾಯಿಸಿದ್ದೇನೆ ನೀವು ನಿಮ್ಮ ಹಕ್ಕನ್ನು ಚಾಲಾಯಿಸಿ ಎಂದು ಮನವಿ ಮಾಡಿದರು.

ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾದ ಎಸ್.ಮುನಿಸ್ವಾಮಿ ತಮ್ಮ ಬೆಂಬಲಿಗರೊAದಿಗೆ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮತದಾರರೊಟ್ಟಿಗೆ ಸೌಹಾರ್ದಯುತ ಮಾತುಕಥೆ ನಡೆಸಿದರು. ಕೆಜಿಎಫ್ ಶಾಸಕಿ ರೂಪಕಲಾ ಶಶಿದರ್ ತಾಲ್ಲೂಕಿನ ಕೇಂಪಾಪುರ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಜಿಲ್ಲೆಯಲ್ಲಿ ಇಂದು ಬೆಳಗ್ಗೆ ೭ ರಿಂದ ಆರಂಭಗೊAಡ ಮತದಾನ ಸಣ್ಣ ಪುಟ್ಟ ಅವಗಡಗಳು ಹೊರತು ಪಡಿಸಿ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದೆ ಇನ್ನು ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ನಡೆಸಿದ ನಾನ ಕಸರತ್ತು ಒಂದು ಹಂತದಲ್ಲಿ ಯಶಸ್ವಿಗೊಂಡಿದ್ದು, ಮತದಾನ ಪೂರ್ಣಗೊಂಡ ನಂತರ ಮತಗಟ್ಟೆ ಸಿಬ್ಬಂದಿಗಳು ಇವಿಎಂ ಗಳನ್ನು ಹೊತ್ತು ಕೋಲಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಸ್ಟಾçಂಗ್ ರೂಂನಲ್ಲಿ ಭದ್ರಪಡಿಸಲಾಗಿದ್ದು ಜೂ.೪ ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರಗೊಳ್ಳಲಿದ್ದು ಅಲಿಯವರೆಗೂ ಸ್ಟಾçಂಗ್ ರೂಂಗೆ ಮೂರು ಹಂತದಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿನ ನಡುವೆ ಸಿಸಿ ಕ್ಯಾಮೆರಾ ಕಂಣ್ಗಾವಲಿನಲ್ಲಿ ಇರಿಸಲಾಗಿದೆ.

ಮತದಾನ ನಮ್ಮ ಹಕ್ಕು ದೇಶದ ಅಭಿವೃದ್ದಿಗಾಗಿ ನಿಮ್ಮ ಮತ ಅತ್ಯವಶ್ಯಕತ ಯಾರು ಸಹ ಮತದಾನಿಂದ ಹೊರಗುಳಿಯಬೇಡಿ ನಿಮ್ಮ ಮತ ಮತವನ್ನು ನೀವು ಚಲಾಯಿಸಿ, ಅಚ್ಚುಕಟ್ಟಾಗಿ ಎಲ್ಲಿಯೂ ಗಲಭೆ ಉಂಟಾಗದೆ ಶಾಂತಿಯುತವಾಗಿ ಮತದಾನ ನಡೆದಿದೆ, ಗೆಲ್ಲುವ ಮುನ್ಸೂಚನೆ ನಮಗೆ ಕಾಣುತ್ತಿದೆ ಎಂದು ಮುಳಬಾಗಿಲು ಶಾಸಕ ಸಂಮೃದ್ದಿ ಮಂಜುನಾಥ್ ತಿಳಿಸಿದರು.

ಚಿತ್ರಗಳು : ಕೋಲಾರ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಹಿರಿಯ ನಾಗರಿಕರು ಉತ್ಸಾಹದಿಂದ ಮತ ಚಲಾಯಿಸಿದರು.


 rajesh pande