ಕೋಲಾರದಲ್ಲಿ ಶಾಂತಿಯುತ, ಶೇಕಡ ೭೮ರಷ್ಟು ಮತದಾನ
ಕೋಲಾರ, ೨೬ ನವೆಂಬರ್ (ಹಿ.ಸ) : ಆ್ಯಂಕರ್ : ಹದಿನೆಂಟನೇ ಲೋಕಸಭ ಚುನಾವಣೆಗೆ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಶುಕ್
ಕೋಲಾರ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಲು ಮಹಿಳೆಯರು ಸಾಲಿನಲ್ಲಿ ನಿಂತಿರುವ ದೃಶ್ಯ.


ಶತಾಯುಶಿ ಮುನಿವೆಂಕಟಮ್ಮ ಸ್ಕೂಟಿಯಲ್ಲಿ ಮೊಮ್ಮಗನೊಂದಿಗೆ ಮತಗಟ್ಟೆಗೆ ಮತ ಚಲಾಯಿಸಲು ಆಗಮಿಸಿದರು.


ಕೋಲಾರ ತಾಲ್ಲೂಕಿನ ಕುಂಬಾರಹಳ್ಳಿ ಮತಗಟ್ಟೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಮತ ಚಲಾಯಿಸಿದರು.


ಕೋಲಾರ, ೨೬ ನವೆಂಬರ್ (ಹಿ.ಸ) :

ಆ್ಯಂಕರ್ : ಹದಿನೆಂಟನೇ ಲೋಕಸಭ ಚುನಾವಣೆಗೆ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ಯಾವುದೇ ಗೊಂದಲಗಳು ಇಲ್ಲದೆ ಶಾಂತಿಯುತ ಮತದಾನ ನಡೆಯಿತು.

ಬೆಳಗ್ಗೆ ಮಂದವಾಗಿ ಆರಂಬವಾದ ಮತದಾನ ಮಧ್ಯಾಹ್ನವಾಗುತ್ತಿದ್ದಂತೆ ಬಿರುಸುಗೊಂಡಿತು. ಸಂಜೆ ನಾಲ್ಕು, ಐದು ಗಂಟೆಯ ವೇಳೆಗೆ ಬಹುತೇಕ ಮತಗಟ್ಟೆಗಳು ಬಿಕೋ ಎನ್ನುತ್ತಿದ್ದವು, ಕಡೇ ಗಳಿಗೆಯಲ್ಲಿ ಮತಗಟ್ಟೆಗಳಿಗೆ ತೆರಳಿ ಧಾವಂತದಲ್ಲಿ ಮತ ಚಲಾಯಿಸಿದ ದೃಶ್ಯಗಳು ಕಂಡು ಬ0ದವು.

ಕಳೆದ ನಾಲ್ಕೈದು ದಿನಗಳಿಂದ ತಾಪಮಾನ ಏರಿಕೆ ಆಗುತ್ತಿದ್ದು ಬಿಸಿ ಗಾಳಿ ಬಿಸುತ್ತಿದೆ. ನೆತ್ತಿಯ ಮೇಲೆ ಸುಡುವ ಬಿಸಿಲು ಹಾಗೂ ಬಿಸಿ ಗಾಳಿಯ ನಡುವೆಯೂ ಜನರು ಮತಗಟ್ಟೆಗಳಿಗೆ ತೆರಳಿ ಉತ್ಸಾಹದಿಂದ ಮತ ಚಲಾಯಿಸಿದರು.

ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಒಟ್ಟು ೧೭೨೬೯೧೪ ಮತದಾರರಿದ್ದು, ೮೫೩೮೨೯ ಪುರುಷ ಮತದಾರರು, ೮೭೨೮೭೪ ಮಹಿಳಾ ಮತದಾರರು ೨೧೧ ಇತರೆ ಮತದಾರರಿದ್ದು, ಈ ಪೈಕಿ ೧೩೪೭೦೬೨ ಮತದಾರರು ಮತ ಚಲಾಯಿಸಿದ್ದು ೩೭೯೮೫೨ ಮತಚಾಯಿಸದೇ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡಿಲ್ಲ ಕಳೆದ ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಶೇ.೭೧.೧೫ ರಷ್ಟು ಮತದಾನ ನಡೆದಿತ್ತು ಈ ಬಾರಿ ಶೇ ೭೮ ಮತನಾದಾನ ನಡೆದಿದ್ದು ಶೇ.೭.೮೫ ರಷ್ಟು ಮತದಾನ ಹೆಚ್ಚಾಗಿದೆ.

ಮತದಾನ ೭ ಗಂಟೆಗೆ ಮಂದಗತಿಯಿ0ದ ಪ್ರಾರಂಭಗೊ0ಡ ಮತದಾತನ ೯ ಗಂಟೆ ಹೊತ್ತಿಗೆ ಶೇ೮.೩೫ ರಷ್ಟು ಮತದಾನಗೊಂಡಿದ್ದು, ೧೧ ಗಂಟೆಗೆ ಶೇ. ೨೦.೯೯ ರಷ್ಟು, ಮದ್ನಾಹ್ನ ೧ ಗಂಟೆ ಸುಮಾರಿಗೆ ಶೆ.೩೮.೯೮ ರಷ್ಟು, ೩ ಗಂಟೆ ಸುಮಾರಿಗೆ ಶೇ.೫೪.೭೪ ರಷ್ಟು, ಸಂಜೆ ೫ ಗಂಟೆಗೆ sಶೇ.೭೧.೨೬ ರಷ್ಟು ಮತದಾನ ನಡೆದಿದ್ದು ಅಂತಿಮವಾಗಿ ೭೮ ರಷ್ಟು ಮತದಾನ ನಡೆದಿದೆ.

ಈ ಬಾರಿ ಚುನಾವಣಾ ಆಯೋಗ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿತ್ತು ಪ್ರತಿ ಮತಗಟ್ಟೆಯಲ್ಲಿ ಶಾಮಿಯಾನ ಹಾಕಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು, ಬಿಸಿ ಗಾಳಿಯಿಂದ ಆಘಾತ ಆಗುವ ಸಂಭವವಿದೆ ಎಂದು ವಿಪತ್ತು ನಿರ್ವಹಣ ಘಟಕ ಮುನ್ಸೂಚನೆ ನೀಡಿತ್ತು ಈ ಹಿನ್ನೆಲೆಯಲ್ಲಿ ಪ್ರತೀ ಮತಗಟ್ಟೆಗೆ ಆಶಾ ಕಾರ್ಯಕರ್ತೆಯರನ್ನು ನಿಯೋಜನೆ ಮಾಡಲಾಗಿತ್ತು ಅವರಿಗೆ ವೈದ್ಯಕೀಯ ಕಿಟ್ಟುಗಳನ್ನು ಒದಗಿಸಲಾಗಿತ್ತು.

ಹಿಂದಿನ ಚುನಾವಣೆಗಳಲ್ಲಿ ಮತಗಟ್ಟೆಗೆ ಹೋದ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಹುಡುಕಲು ಪರದಾಡಬೆಕಿತ್ತು ಆದರೆ ಈ ಬಾರಿ ಚುನಾವಣಾ ಆಯೋಗದ ನಿರ್ದೇಶನ ಮೇರೆಗೆ ಹೆಲ್ಪ್ ಡೆಸ್ಕ್ ತೆರೆಯಲಾಗಿತ್ತು ್ಲ ಮತಗಟ್ಟೆಗೆ ಪ್ರವೇಶ ಮಾಡುತ್ತಿದ್ದಂತೆ ಹೆಲ್ಪ್ ಡೆಸ್ಕ್ ನಲ್ಲಿ ಮತಗಟ್ಟೆ ಅಧಿಕಾರಿ ಮತದಾರರ ಕ್ರಮ ಸಂಖ್ಯೆಯನ್ನು ಪತ್ತೆ ಹಚ್ಚಿ ಮತದಾರರಿಗೆ ಸ್ಲಿಪ್ ನೀಡಿದರು.

ಇದರಿಂದಾಗಿ ಮತಗಟ್ಟೆಗೆ ತೆರಳಿಗೆ ಮತದಾರ ಗೊಂದಲವಿಲ್ಲದೆ ಮತ ಚಲಾಯಿಸಲು ಅನುಕೂಲವಾಯಿತು ಮತದಾರರನ್ನು ಆಕರ್ಷಿಸಲು ೪೦ ವಿಶೇಷ ಮತಗಟ್ಟೆ ಜಿಲ್ಲೆಯಾದ್ಯಂತ ಸ್ಥಾಪನೆ ಮಾಡಲಾಗಿತ್ತು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ೫ ಮತಗಟ್ಟೆಗೊಂದರAತೆ ೪೦ ಸಖಿ ಬೂತ್ಗಳು ೦೮ ದಿವ್ಯಾಂಗರ ಮತಗಟ್ಟೆಗಳು, ೦೮ ಯುವ ಮತದಾರರ ಮತಗಟ್ಟೆ, ೧೧ ಪಾರಂಪರಿಕ s ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿತ್ತು ದಿವ್ಯಾಂಗರಿಗೆ ಮತಗಟ್ಟಿಗಳಿಗೆ ತೆರಳಿ ಮತ ಚಲಾಯಿಸ ವಾಪಸ್ ತೆರಳಲು ವಾಹನದ ವ್ಯವಸ್ಥೆ ಮಾಡಲಾಗಿತ್ತು

ಕೋಲಾರ ಜಿಲ್ಲೆ ರೇಷ್ಮೆ ಬೆಳೆಯಲು ಖ್ಯಾತಿಯಾಗಿದೆ ರೇಷ್ಮೆ ಕೋಲಾರ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ರೇಷ್ಮೆ ಮತ್ತು ಮಣ್ಣು ವಿಷಯಾಧಾರಿತ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು. ರೇಷ್ಮೆ ಬೆಳೆಯನ್ನು ಮತಗಟ್ಟೆಯಲ್ಲಿ ಬಿಂಬಿಸಿ ಆಕರ್ಷಣೆ ಮಾಡಲಾಗಿತ್ತು.

ಮತದಾನದ ಶೇ.ವಾರು ಸಂಖ್ಯೆಯನ್ನು ಹೆಚ್ಚಿಸಲು ಕೋಲಾರ ಜಿಲ್ಲೆಯಾದ್ಯಂತ ಸ್ಪೀಪ್ ಸಮಿತಿಯಿಂದ ನಿರಂತವಾಗಿ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು ಮತದಾರರಲ್ಲಿ ಜಾಗೃತಿ ಮೂಡಿಸಲು ಪಂಜಿನ ಮೆರವಣಿಗೆ ಬೈಕ್ ರ್ಯಾಲಿ ಮಹಿಳೆಯರಿಗೆ ರಂಗೋಲಿ ಸ್ಪರ್ದೆ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ದೆಗಳು, ಕೆಜಿಎಫ್ ನಲ್ಲಿ ಫ್ಯಾಷನ್ ಶೋ, ನೃತ್ಯ, ಬೀದಿ ನಾಟಕ ಬಸ್ ನಿಲ್ದಾಣಗಳಲ್ಲಿ ಜಾಗೃತಿ ಕಾರ್ಯಕ್ರಮ ಆಟೋ ಚಾಲಕರಿಗೆ ಮತದಾನದ ಹಕ್ಕು ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸುವ ಮೂಲಕ ವಿವಿದ ಹಂತಗಳಲ್ಲಿ ಸ್ವೀಪ್ ಸಮಿತಿ ಉತ್ತಮ ಕಾರ್ಯನಿರ್ವಹಣೆ ಮಾಡಿತ್ತು.

ಚುನಾವಣೆ ಕರ್ತವ್ಯದಲ್ಲಿ ಭಾಗಿಯಾಗಿದ್ದ ಎಲ್ಲಾ ಚುನಾವಣಾ ಅಧಿಕಾರಿಗಳಿಗೆ ಪೋಲಿಸ್ ಇಲಾಖೆಗೆ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷಾ ಜಿಲ್ಲಾಧಿಕಾರಿಗಳ ಕಛೇರಿ ಬಳಿ ತಮ್ಮ ಚುನಾವಣಾ ತಂಡದೊ0ದಿಗೆ ಪೋಟೊ ಕ್ಲಿಕ್ಕಿಸಿಕೊಂಡು ಧನ್ಯವಾದ ಅರ್ಪಿಸಿದ್ದಾರೆ.

ಚಿತ್ರಗಳು

೧) ಕೋಲಾರ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಲು ಮಹಿಳೆಯರು ಸಾಲಿನಲ್ಲಿ ನಿಂತಿರುವ ದೃಶ್ಯ.

೨) ಶತಾಯುಶಿ ಮುನಿವೆಂಕಟಮ್ಮ ಸ್ಕೂಟಿಯಲ್ಲಿ ಮೊಮ್ಮಗನೊಂದಿಗೆ ಮತಗಟ್ಟೆಗೆ ಮತ ಚಲಾಯಿಸಲು ಆಗಮಿಸಿದರು.

೩) ಕೋಲಾರ ತಾಲ್ಲೂಕಿನ ಕುಂಬಾರಹಳ್ಳಿ ಮತಗಟ್ಟೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಮತ ಚಲಾಯಿಸಿದರು.


 rajesh pande