Custom Heading

ಗೈಡ್ಸ್ ಗೆ ಶೀಘ್ರ ಗುರುತಿನ ಚೀಟಿ ನೀಡಿ - ಸಚಿವ ಅನಂದ ಸಿಂಗ್
, 27 ಅಕ್ಟೋಬರ್ (ಹಿ.ಸ): ರಾಜ್ಯದ ಪಾರಂಪರಿಕ ಹಾಗೂ ಪ್ರವಾಸಿ ಸ್ಥಳಗಳಲ್ಲಿರುವ ಪ್ರವಾಸಿ ಗೈಡ್ ಗಳಿಗೆ (ಮಾರ್ಗದರ್ಶಿ) ಕ
ಗೈಡ್ಸ್ ಗೆ ಶೀಘ್ರ ಗುರುತಿನ ಚೀಟಿ ನೀಡಿ - ಸಚಿವ ಅನಂದ ಸಿಂಗ್


, 27 ಅಕ್ಟೋಬರ್ (ಹಿ.ಸ): ರಾಜ್ಯದ ಪಾರಂಪರಿಕ ಹಾಗೂ ಪ್ರವಾಸಿ ಸ್ಥಳಗಳಲ್ಲಿರುವ ಪ್ರವಾಸಿ ಗೈಡ್ ಗಳಿಗೆ (ಮಾರ್ಗದರ್ಶಿ) ಕೂಡಲೇ ಗುರುತಿನ ಚೀಟಿ ವಿತರಣೆ ಮಾಡುವಂತೆ ಪ್ರವಾಸೋದ್ಯಮ ಸಚಿವರೂ ಆದ ಪರಿಸರ ಮತ್ತು ಜೀವಿ ಶಾಸ್ತ್ರ ಸಚಿವ ಆನಂದ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ದಕ್ಷಿಣ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನದ ಹಿನ್ನಲೆಯಲ್ಲಿ ಖನಿಜ ಭವನದಲ್ಲಿರುವ ಅರಣ್ಯ ವಸತಿ ಮತ್ತು ವಿಹಾರ ಧಾಮ ಸಂಸ್ಥೆಯ ಸಭಾಂಗಣಲ್ಲಿ ಬುಧವಾರ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತಾನಾಡಿದರು. ಪ್ರವಾಸಿ ಮಾರ್ಗದರ್ಶಿಗಳ ಗುರುತಿನ ಚೀಟಿ ವಿತರಣೆ ಹಾಗೂ ನವೀಕರಣ ಆಗದ ಬಗ್ಗೆ ಪ್ರವಾಸಿ ಮಾರ್ಗದರ್ಶಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ನಿತ್ಯ ಹಂಪಿಗೆ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಗುರುತಿನನ ಚೀಟಿ ಇಲ್ಲದೇ ಅವರು ಪ್ರವಾಸಿಗರನ್ನು ಹೇಗೆ ಪರಿಚಯಿಸಿಕೊಂಡು ಅವರ ಕೆಲಸ ಮಾಡಲು ಸಾಧ್ಯವಾಗುತ್ತದೆ. ಕೂಡಲೇ ಗುರುತಿನ ಚೀಟಿಗಳನ್ನು ವಿತರಿಸಬೇಕು ಎಂದು ತಾಕೀತು ಮಾಡಿದರು. ರಾಜ್ಯದ ಎಲ್ಲಾ ಮಾರ್ಗದರ್ಶಿಗಳಿಗೂ ಒಂದೇ ರೀತಿಯಾದ ಗುರುತಿನ ಚೀಟಿ ನೀಡಲಾಗುತ್ತಿದ್ದು, ಹೀಗಾಗಿ ತಡವಾಗಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕ ತಂದರು. ಇನ್ನು ಮುಂದೆ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು. ಪ್ರವಾಸಿ ಮಾರ್ಗದರ್ಶಿಗಳಿಗೆ ತರಬೇತಿ ನೀಡುವುದು ಹಾಗು ಸಮವಸ್ತ್ರ ನೀಡುವ ಬಗ್ಗೆಯೂ ಅಧಿಕಾರಿಗಳೊಂದಿಗೆ ಸಚಿವರು ಮಾಹಿತಿ ಪಡೆದುಕೊಂಡರು. ಇದೇ ವೇಳೆ ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನದ ಬಗ್ಗೆಯೂ ಪ್ರವಾಸೋದ್ಯಮ ಸಚಿವರು ಮಾಹಿತಿ ಪಡೆದುಕೊಂಡರು.

ಹಿಂದೂಸ್ತಾನ್ ಸಮಾಚಾರ್


 rajesh pande