Custom Heading

ಜೈಲಿಗೆ ಹೋದವರಿಂದ ಡಿ.ಸಿ.ಸಿ.ಬ್ಯಾಂಕ್ ವಿರುದ್ಧ ಪ್ರತಿಭಟನೆ ಮಾಡಲು ನೈತಿಕತೆಯಿಲ್ಲ
ಕೋಲಾರ ಅ.೨೭ (ಹಿಂದುಸ್ತಾನ್ ಸಮಾಚಾರ್) ಆಂಕರ್: ಲಂಚಕ್ಕಾಗಿ ಕೈ ಒಡ್ಡಿ ಜೈಲಿಗೆ ಹೋಗಿ ವಾಪಸ್ ಬಂದವರಿಂದ ಡಿಸಿಸಿ ಬ್ಯಾಂಕ
ಕೋಲಾರ ತಾಲ್ಲೂಕಿನ ಕಡಗಟ್ಟೂರು ರೇಷ್ಮೆ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿದರು.


ಕೋಲಾರ ಅ.೨೭ (ಹಿಂದುಸ್ತಾನ್ ಸಮಾಚಾರ್)

ಆಂಕರ್: ಲಂಚಕ್ಕಾಗಿ ಕೈ ಒಡ್ಡಿ ಜೈಲಿಗೆ ಹೋಗಿ ವಾಪಸ್ ಬಂದವರಿಂದ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಪಾಠ ಕಲಿಯುವ ಆಗತ್ಯವಿಲ್ಲ. ಶಕ್ತಿ ಕೇಂದ್ರವಾದ ವಿಧಾನಸೌಧದಲ್ಲಿ ಲಂಚ ಪಡೆದು ಮಾಜಿ ಶಾಸಕ ವೈ.ಸಂಪAಗಿ ಜೈಲಿಗೆ ಹೋಗಿದ್ದರು. ನ್ಯಾಯಾಲಯದಲ್ಲಿ ಅಪರಾಧ ಸಾಭೀತು ಆಗಿದೆ. ಈಗ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ಪಡೆದಿದ್ದಾರೆ. ಇಂತಹ ಪ್ರಾಮಾಣಿಕ ವ್ಯಕ್ತಿಗೆ ಬ್ಯಾಂಕ್ ಬಗ್ಗೆ ಟೀಕೆ ಮಾಡುವ ನೈತಿಕತೆಯಿಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ವ್ಯಗ್ಯ ಮಾಡಿದ್ದಾರೆ.

ಕೋಲಾರ ತಾಲ್ಲೂಕಿನ ಕಡಗಟ್ಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಕುರಗಲ್ ಗ್ರಾಮದಲ್ಲಿ ನಡೆದ ೨೦೨೦-೨೧ನೇ ಸಾಲಿನ ಸರ್ವಸದಸ್ಯರ ಸಭೆ ಹಾಗೂ ಜನಸೇವಾ ಕೇಂದ್ರದ ಯೋಜನೆಯಡಿ ನಿರ್ಮಿತವಾದ ಗೋದಾಮು ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಶಾಸಕರನ್ನು ಕೆಜಿಎಫ್ ಕ್ಷೇತ್ರದ ಜನರು ತಿರಸ್ಕರಿಸಿದ್ದಾರೆ. ಜನತಾ ನ್ಯಾಯಾಲಯದ ತೀರ್ಪಿನಿಂದ ಮಾಜಿ ಶಾಸಕರು ಇನ್ನು ಪಾಠ ಕಲಿತಿಲ್ಲ. ವೈಯುಕ್ತಿಕವಾಗಿ ನನ್ನ ಮತ್ತು ಬ್ಯಾಂಕಿನ ವಿರುದ್ಧ ದೂರುಗಳನ್ನು ಸಲ್ಲಿಸುವುದೇ ಸದ್ಯ ಮಾಜಿ ಶಾಸಕ ಉದ್ಯೋಗವಾಗಿದೆ ಎಂದು ಆರೋಪಿಸಿದರು.

ಜನರಿಂದ ಆಯ್ಕೆಯಾಗಿ ಲಂಚ ಪಡೆದು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಹಾಕಿಕೊಂಡು ಜಿಲ್ಲೆಯ ಗೌರವವನ್ನು ರಾಜ್ಯ,ರಾಷ್ಟçಮಟ್ಟದಲ್ಲಿ ಹರಾಜು ಹಾಕಿದ್ದೀರಿ. ಆರೋಪ ಸಾಬೀತಾಗಿ, ನ್ಯಾಯಾಲಯ ಶಿಕ್ಷೆಯನ್ನೂ ವಿಧಿಸಿದ್ದು, ಹೈಕೋರ್ಟ್ನಿಂದ ತಡೆಯಾಜ್ಞೆ ಪಡೆದುಕೊಂಡಿರುವ ಸಂಪAಗಿಯವರೇ. ಚುನಾವಣೆಗೆ ಸ್ವರ್ಧಿಸಲು ಅವಕಾಶ ಇಲ್ಲದೇ ಹತಾಶರಾಗಿ ಮಾತನಾಡುತ್ತಿದ್ದೀರಿ ಎಂದು ಸಂಪAಗಿಯವರ ಜನ್ಮಜಾಲಾಡಿದರು.

ಭೂತದ ಬಾಯಲ್ಲಿ ಭಗವದ್ಗೀತೆ ಎಂಬAತೆ ಆಗಿದೆ ನಿಮ್ಮ ಪರಿಸ್ಥಿತಿ, ಮೊದಲು ನೀವು ಕಳಂಕರಹಿತರಾಗಿ ಹೊರಬನ್ನಿ ಆನಂತರ ಬ್ಯಾಂಕ್ ಬಗ್ಗೆ ಮಾತನಾಡುವಿರಂತೆ ಎಂದು ಲೇವಡಿ ಮಾಡಿದರು.

ಸಂಪAಗಿ, ಬ್ಯಾಂಕ್ ಮಾಜಿ ನಿರ್ದೇಶಕ ಹನುಮೇಗೌಡರಂತಹ ಕಳಂಕಿತ ವ್ಯಕ್ತಿಗಳು ಮಾಡುವ ಟೀಕೆಗೆ ನಾನೂ ಮತ್ತು ನಮ್ಮ ಆಡಳಿತ ಮಂಡಳಿ ಹೆದರುವುದಿಲ್ಲ. ಡಿಸಿಸಿ ಬ್ಯಾಂಕಿನಲ್ಲಿ ತಪ್ಪಾಗಿದ್ದಾರೆ ಸಾಬೀತು ಮಾಡಲಿ. ಆ ಕ್ಷಣವೇ ನಾನು ಸಾರ್ವಜನಿಕ ಜೀವನದಿಂದ ಹೊರಗೆ ಹೋಗುವುದಾಗಿ ಸವಾಲು ಹಾಕಿದರು.

ನಿಮ್ಮ ರಾಜಕೀಯಕ್ಕಾಗಿ ಬ್ಯಾಂಕನ್ನು ಬಲಿಕೊಡುವ ಕೆಲಸ ಮಾಡಬೇಡಿ, ತಾಯಂದಿರಿಗೆ ಸಾಲ ನೀಡಬಾರದು ಎಂಬ ನಿಮ್ಮ ಸಿದ್ದಾಂತ ನಾನು ಒಪ್ಪೋದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ತಾಯಂದಿರು,ಮಹಿಳೆಯರ ಶ್ರೀರಕ್ಷೆ ಇದೆ. ನಿಮ್ಮಂತಹವರಿಗೆ ಹೆದುರುವುದಿಲ್ಲ ಎಂದರು.

ಸಾಲ ನೀಡುವಾಗ ಎಂದೂ ಜಾತಿ, ಪಕ್ಷ, ಧರ್ಮ ನೋಡಿಲ್ಲ. ನಿಯಮಾನುಸಾರ ಸಂಘ ರಚಿಸಿಕೊಂಡು ಬ್ಯಾಂಕಿಗೆ ಅರ್ಜಿ ಹಾಕಿದ ಎಲ್ಲರಿಗೂ ಸಾಲ ನೀಡಿದ್ದೇವೆ. ಕೆಜಿಎಫ್ ಕ್ಷೇತ್ರದಲ್ಲಿ ಸಾಲ ಪಡೆದಿರುವ ಸ್ವಸಹಾಯ ಸದಸ್ಯರಿಗೆ ಯಾವುದೇ ಪಕ್ಷವಿಲ್ಲ. ಅವರೆಲ್ಲ ತಮ್ಮ ಬದುಕು ಕಟ್ಟಿಕೊಳ್ಳಲು ಬ್ಯಾಂಕಿನಿAದ ಸಾಲ ಪಡೆದಿದ್ದಾರೆ. ಪ್ರಾಮಾಣಿಕವಾಗಿ ಸಾಲವನ್ನು ಮರುಪಾವತಿ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

ಬ್ಯಾಂಕಿAದ ಅನ್ಯಾಯವಾಗಿರುವುದು ನಿಜವೇ ಆಗಿದ್ದರೆ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಎಲ್ಲಾದರೂ ರೈತರಾಗಲಿ, ಮಹಿಳೆಯರು ಬ್ಯಾಂಕ್ ವಿರುದ್ದ ನೇರವಾಗಿ ಪ್ರತಿಭಟನೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಹಿಂದೆ ದಿವಾಳಿಯಾಗಿದ್ದಾಗ ಜಿಲ್ಲೆಯ ರೈತರು, ಮಹಿಳೆಯರು ಸಾಲ ಸಿಗದೇ ವಂಚಿತರಾಗಿದ್ದಾರೆ, ಸಾಲ ಮನ್ನಾ ಸೌಲಭ್ಯವೂ ಸಿಗಲಿಲ್ಲ. ನಮ್ಮ ಆಡಳಿತಮಂಡಳಿ ಬಂದ ನಂತರ ಸಾವಿರಾರು ಕೋಟಿ ಸಾಲ ನೀಡಿದ್ದೇವೆ, ೩೩೦ ಕೋಟಿ ರೂ ಸಾಲ ಮನ್ನಾ ಪ್ರಯೋಜನ ಅವಿಭಜಿತ ಜಿಲ್ಲೆಗೆ ರೈತರಿಗೆ ಸಿಕ್ಕಿದೆ ಎಂದರು.

ಸAಸ್ಥೆಯನ್ನು ರಾಜಕೀಯ ಲಾಭಕ್ಕಾಗಿ ಹಾಳು ಮಾಡಬೇಡಿ, ನಮ್ಮೊಂದಿಗೆ ಬನ್ನಿ ಸಂಸ್ಥೆ ಕಟ್ಟೋಣ, ನಮ್ಮಿಂದ ತಪ್ಪಾಗಿದ್ದಾರೆ ಸಾಬೀತು ಮಾಡಿ ತಲೆತಗ್ಗಿಸುತ್ತೇವೆ, ನಯಾಪೈಸೆ ದುರುಪಯೋಗವಾಗಲು ಬಿಟ್ಟಿಲ್ಲ ಎಂದರು.

ಚಿತ್ರ : ಕೋಲಾರ ತಾಲ್ಲೂಕಿನ ಕಡಗಟ್ಟೂರು ರೇಷ್ಮೆ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿದರು.


 rajesh pande