ಭಾರತದ ಅಸ್ಮಿತೆ ಅದರ ಬಹುತ್ವದಲ್ಲಿದೆ : ಡಾ. ತೋಂಟದ ಸಿದ್ಧರಾಮ ಶ್ರೀಗಳು
ಗದಗ, 26 ಆಗಸ್ಟ್ (ಹಿ.ಸ.) ಆ್ಯಂಕರ್:- ಭಾರತ ಅನೇಕತೆಯಲ್ಲಿ ಏಕತೆಯನ್ನು ಹೊಂದಿದೆ. ಪ್ರತಿಯೊಂದರಲ್ಲಿಯೂ ವೈವಿಧ್ಯತೆಯನ್ನು ಒಳಗೊಂಡಿರುವ ವಿಶ್ವದ ಏಕೈಕ ದೇಶ ಭಾರತ. ಭಾರತದ ಅಸ್ಮಿತೆ ಬಹುತ್ವದಲ್ಲಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು. ಗದಗ ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್
ಫೋಟೋ


ಗದಗ, 26 ಆಗಸ್ಟ್ (ಹಿ.ಸ.)

ಆ್ಯಂಕರ್:- ಭಾರತ ಅನೇಕತೆಯಲ್ಲಿ ಏಕತೆಯನ್ನು ಹೊಂದಿದೆ. ಪ್ರತಿಯೊಂದರಲ್ಲಿಯೂ ವೈವಿಧ್ಯತೆಯನ್ನು ಒಳಗೊಂಡಿರುವ ವಿಶ್ವದ ಏಕೈಕ ದೇಶ ಭಾರತ. ಭಾರತದ ಅಸ್ಮಿತೆ ಬಹುತ್ವದಲ್ಲಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಗದಗ ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2812 ನೆಯ ಶಿವಾನುಭವದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಜಗತ್ತಿನಾದ್ಯಂತ ಯುದ್ಧಗಳು ಹೆಚ್ಚಾಗುತ್ತಿವೆ. ಯುದ್ಧಗಳ ಪ್ರಭಾವದಿಂದ ಇಡೀ ಜಗತ್ತೆ ತಲ್ಲಣಿಸುತ್ತಿದೆ. ಭಯದ ವಾತಾವರಣದಲ್ಲಿ ಜನರು ಬದುಕುತ್ತಿದ್ದಾರೆ.

ಜಗತ್ತಿನಲ್ಲಿ ಶಾಂತಿ-ನೆಮ್ಮದಿ ಪ್ರೀತಿ ಮೂಡಬೇಕಾದರೆ ಮನುಷ್ಯ ಮನುಷ್ಯರ ಮಧ್ಯೆ ಭಾವಗಳು ಅರಳಬೇಕಾಗಿದೆ. ಜಗತ್ತಿನಲ್ಲಿ ಅನೇಕ ಪ್ರವಾದಿಗಳು, ಸಮಾಜ ಸುಧಾರಕರು, ಹೋರಾಟಗಾರರು ಜನ್ಮ ತಳೆದಿದ್ದಾರೆ. ಈ ಮಹಾತ್ಮರು ಸಕಲ ಜೀವಾತ್ಮರಿಗೆ ಲೇಸನೆ ಬಯಸಿದ್ದಾರೆ. ಅವರಲ್ಲಿ ಮುಹಮ್ಮದ್ ಪೈಗಂಬರ್, ಜಗಜ್ಯೋತಿ ಬಸವೇಶ್ವರರು, ಬುದ್ಧ, ಮಹಾವೀರ ಹೀಗೆ ಅನೇಕರಿದ್ದಾರೆ. ಇಂಥವರ ಆದರ್ಶ, ಮೌಲ್ಯಗಳನ್ನು ನಾವು ರೂಢಿಸಿಕೊಳ್ಳಬೇಕು ಎಂದು ಮಾತನಾಡಿದರು.

ಗದುಗಿನ ಖ್ಯಾತ ವೈದ್ಯರಾದ ಡಾ. ಮಹಮ್ಮದ್ ಅಶ್ರಫ್ ದಸ್ತಗಿರಿಸಾಹೇಬ್ ಸಮುದ್ರಿ ಅವರು ಬರೆದ ಭಾವೈಕ್ಯತೆಯ ಬೆಳಕು ಕೃತಿಯ ಬಿಡುಗಡೆ ಮಾಡಲಾಯಿತು. ವಿಶ್ವಹಿರಿಯರ ದಿನಾಚರಣೆಯ ನಿಮಿತ್ಯ ಹಿರಿಯರಾದ ಮಾಜಿ ಸಚಿವರಾದ ಎಸ್. ಎಸ್. ಪಾಟೀಲ, ನಿವೃತ್ತ ಶಿಕ್ಷಕರಾದ ಚೆನ್ನಯ್ಯ ತೋಟಯ್ಯ ಹಿರೇಮಠ ಹಾಗೂ ಇನ್ನೋರ್ವ ನಿವೃತ್ತ ಶಿಕ್ಷಕರಾದ ಎಸ್. ಎಂ. ವಾಲಿ ಅವರನ್ನು ಸನ್ಮಾನಿಸಲಾಯಿತು.

ಭಾವೈಕ್ಯತೆಯ ಬೆಳಕು ಕೃತಿ ಪರಿಚಯ ಮಾಡಿದ ಗದುಗಿನ ಜಮಾತ್-ಎ-ಇಸ್ಲಾಂ ಅಧ್ಯಕ್ಷರಾದ ಎ.ಐ. ಶೇಖ ಅವರು ಭಾವಕ್ಯತೆಯ ಬೆಳಕು ಕೃತಿ ನಮ್ಮೆಲ್ಲರನ್ನು ಒಂದುಗೂಡಿಸುವ ಏಕತೆಯನ್ನು ಸಾಧಿಸುವ ಅಪರೂಪದ ಕೃತಿಯಾಗಿದೆ. ಡಾ. ಸಮುದ್ರಿಯವರು ನಿಜಕ್ಕೂ ಭಾರತದ ಬಹುತ್ವವನ್ನು ಇದರಲ್ಲಿ ಎತ್ತಿ ಹಿಡಿದಿದ್ದಾರೆ. ಮೊದಲು ನಾವೆಲ್ಲರೂ ಭಾರತೀಯರು ಎಂಬುದನ್ನು ಸಾಧಿಸಿದ್ದಾರೆ ಎಂದರು. ಈ ಕೃತಿಯನ್ನು ಯುವಕರಿಗೆ ಅರ್ಪಿಸಿರುವುದು ನಿಜಕ್ಕೂ ಹೆಮ್ಮೆಪಡುವ ವಿಷಯ ಎಂದರು. ಶರಣರು ಕಂಡ ಅನಾದಿ ಬಸವಣ್ಣ ವಿಷಯದ ಕುರಿತು ಶರಣೆ ಗಿರಿಜಕ್ಕ ಧರ್ಮರಡ್ಡಿ ಅವರು ಪ್ರವಚನ ಮಾಡಿದರು.

ಕೃತಿಯ ಲೇಖಕ ಎಂ. ಡಿ. ಸಮುದ್ರಿಯವರು ಭಾವೈಕ್ಯತೆಯ ಬೆಳಕು ಕೃತಿಯನ್ನು ಬರೆಯಲು ನನ್ನ ತಂದೆ ತಾಯಿ, ಕುಟುಂಬ ಪರಿವಾರ ಗುರುಗಳು ಆದಿಯಾಗಿ ಅನೇಕರ ಸಹಾಯ ಸಹಕಾರವನ್ನು ಸ್ಮರಿಸಿ ಅವರಿಗೆ ಚಿರಋಣಿಯಾಗಿದ್ದೇನೆ ಎಂದರು.

ವಚನ ಸಂಗೀತ ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಧರ್ಮಗ್ರಂಥ ಪಠಣ ಸ್ಫೂರ್ತಿ ಸೈದಾಪೂರ, ವಚನ ಚಿಂತನ ಮನೋಹರ ಮಾಲಿಪಾಟೀಲ ನೆರವೇರಿಸಿದರು.

ದಾಸೋಹ ಸೇವೆಯನ್ನು ಚನ್ನಮ್ಮ ಚಳ್ಳಮರದ, ಶ್ರೀಮತಿ ಲಲಿತಾ ಕಾಶಿನಾಥಗೌಡ ಪಾಟೀಲ ಹಾಗೂ ಪರಿವಾರ, ಶ್ರೀಮತಿ ಗಿರಿಜಾದೇವಿ ಚನ್ನಬಸಯ್ಯ ಕನಕೇರಿಮಠ ಸಾ. ಬಾಗಲಕೋಟೆ ಇವರ ಸ್ಮರಣಾರ್ಥ ಅವರ ಕುಟುಂಬ ವರ್ಗ, ರೇವಣಸಿದ್ದಪ್ಪ ಚನ್ನಪ್ಪ ಬ್ಯಾಕೋಡ ಸಾ. ಹುಣಸಗಿ ಇವರ ಕುಟುಂಬ ವರ್ಗದವರು ಕೈಗೊಂಡಿದ್ದರು.

ಸ್ವಾಗತವನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಕಾರ್ಯಕ್ರಮ ನಿರೂಪಣೆ ಶಿವಾನುಭವ ಸಮಿತಿಯ ಚೇರ್ಮನ್ ಡಾ. ರಮೇಶ ಕಲ್ಲನಗೌಡರ ಮಾಡಿದರು.

ಉಪಾಧ್ಯಕ್ಷ ಪ್ರಭು ಗಂಜಿಹಾಳ, ಶ್ರೀಮತಿ ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande