ಲಖನೌನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಸರಣಿ ಸಭೆ
ಲಖನೌ, 05 ಜುಲೈ (ಹಿ.ಸ.): ಆ್ಯಂಕರ್: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಉತ್ತರ ಪ್ರದೇಶ ಪ್ರವಾಸದ ಎರಡನೇ ದಿನ ಭಾನುವಾರ ಲಖನೌನಲ್ಲಿ ಪಕ್ಷದ ಹಿರಿಯ ನಾಯಕರು, ಮಿತ್ರಪಕ್ಷಗಳ ಪ್ರತಿನಿಧಿಗಳು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಪ್ರಮುಖ ಪದಾಧಿಕಾರಿಗಳೊಂದ
ಉತ್ತರ ಪ್ರದೇಶ ಬಿಜೆಪಿ ನಾಯಕರ ಜೊತೆ ನಿತಿನ್ ನವೀನ್ ಸಭೆ


ಲಖನೌ, 05 ಜುಲೈ (ಹಿ.ಸ.):

ಆ್ಯಂಕರ್:

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಉತ್ತರ ಪ್ರದೇಶ ಪ್ರವಾಸದ ಎರಡನೇ ದಿನ ಭಾನುವಾರ ಲಖನೌನಲ್ಲಿ ಪಕ್ಷದ ಹಿರಿಯ ನಾಯಕರು, ಮಿತ್ರಪಕ್ಷಗಳ ಪ್ರತಿನಿಧಿಗಳು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಪ್ರಮುಖ ಪದಾಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದರು.

ಮೊದಲಿಗೆ ಉತ್ತರ ಪ್ರದೇಶ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮಾಜಿ ರಾಜ್ಯಾಧ್ಯಕ್ಷರೊಂದಿಗೆ ಪರಿಚಯಾತ್ಮಕ ಸಭೆ ನಡೆಸಿದರು. ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಪಂಕಜ್ ಚೌಧರಿ, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಜಲಶಕ್ತಿ ಸಚಿವ ಸ್ವತಂತ್ರ ದೇವ್ ಸಿಂಗ್, ಕೃಷಿ ಸಚಿವ ಸೂರ್ಯ ಪ್ರತಾಪ್ ಶಾಹಿ, ಸಚಿವ ಭೂಪೇಂದ್ರ ಚೌಧರಿ, ರಾಜ್ಯಸಭಾ ಸದಸ್ಯ ಲಕ್ಷ್ಮೀಕಾಂತ್ ವಾಜಪೇಯಿ ಹಾಗೂ ಮಾಜಿ ರಾಜ್ಯಾಧ್ಯಕ್ಷ ರಮಾಪತಿ ರಾಮ್ ತ್ರಿಪಾಠಿ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು.

ಬಳಿಕ ಬಿಜೆಪಿ ಅಧ್ಯಕ್ಷರು ಪಕ್ಷದ ಮಿತ್ರಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ)ದ ತ್ರಿಲೋಕ್ ತ್ಯಾಗಿ, ನಿಷಾದ್ ಪಕ್ಷದ ಅಧ್ಯಕ್ಷ ಸಂಜಯ್ ನಿಷಾದ್, ಸುಹೇಲದೇವ್ ಭಾರತೀಯ ಸಮಾಜ ಪಕ್ಷ (ಸುಭಾಸ್ಪಾ)ದ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಹಾಗೂ ಅಪ್ನಾ ದಳದ ಆಶೀಷ್ ಪಟೇಲ್ ಉಪಸ್ಥಿತರಿದ್ದರು.

ಸಭೆಯಲ್ಲಿ ಮಿತ್ರಪಕ್ಷಗಳ ನಾಯಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಈ ವೇಳೆ ಮಾತನಾಡಿದ ನಿತಿನ್ ನವೀನ್, ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಪಕ್ಷದಿಂದ ಅವಕಾಶ ನೀಡಲಾಗುವುದು ಎಂದು ಸ್ಪಷ್ಟ ಸಂದೇಶ ನೀಡಿದರು.

ನಂತರ ಲಖನೌನ ಜಿಯಾಮೌ ಪ್ರದೇಶದಲ್ಲಿರುವ ವಿಶ್ವ ಸಂವಾದ ಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಬಿಜೆಪಿ ರಾಷ್ಟ್ರೀಯ ಮಹಾಮಂತ್ರಿ (ಸಂಘಟನೆ) ಬಿ.ಎಲ್. ಸಂತೋಷ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಆರ್‌ಎಸ್‌ಎಸ್‌ನ ಕ್ಷೇತ್ರ ಪ್ರಚಾರಕ ಅನಿಲ್, ಪ್ರಾಂತ ಪ್ರಚಾರಕ ಕೌಶಲ್, ಕ್ಷೇತ್ರ ಪ್ರಚಾರ ಪ್ರಮುಖ ಸುಭಾಷ್, ವಿಶೇಷ ಸಂಪರ್ಕ ಪ್ರಮುಖ ಪ್ರಶಾಂತ್ ಭಾಟಿಯಾ, ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ರಾಷ್ಟ್ರೀಯ ಮಹಾಮಂತ್ರಿ ಡಾ. ಪವನ ಪುತ್ರ ಬಾದಲ್, ಇತಿಹಾಸ ಸಂಕಲನ ಯೋಜನೆಯ ರಾಷ್ಟ್ರೀಯ ಸಹ ಸಂಘಟನೆ ಸಚಿವ ಸಂಜಯ್, ವಿಶ್ವ ಹಿಂದೂ ಪರಿಷತ್‌ನ ಕ್ಷೇತ್ರ ಸಂಘಟನೆ ಸಚಿವ ಗಜೇಂದ್ರ ಸಿಂಗ್, ಪ್ರಾಂತ ಸಂಘಟನೆ ಸಚಿವ ವಿಜಯ್ ಪ್ರತಾಪ್, ಕ್ಷೇತ್ರ ಘುಮಂತು ಕಾರ್ಯ ಪ್ರಮುಖ ರಾಜೇಶ್, ಬಿಜೆಪಿ ರಾಜ್ಯಾಧ್ಯಕ್ಷ ಪಂಕಜ್ ಚೌಧರಿ, ರಾಜ್ಯ ಮಹಾಮಂತ್ರಿ (ಸಂಘಟನೆ) ಧರ್ಮಪಾಲ್ ಸಿಂಗ್, ಉಪಾಧ್ಯಕ್ಷ ನೀರಜ್ ಸಿಂಗ್, ರಾಜ್ಯ ಸಚಿವ ರಾಹುಲ್ ವಾಲ್ಮೀಕಿ ಹಾಗೂ ಮುಖ್ಯ ವಕ್ತಾರ ದಿನೇಶ್ ಪ್ರತಾಪ್ ಸಿಂಗ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

ರಾಜಕೀಯ ಮತ್ತು ಸಂಘಟನಾ ಚಟುವಟಿಕೆಗಳ ಹಿನ್ನೆಲೆಯಲ್ಲಿ ನಡೆದ ಈ ಸರಣಿ ಸಭೆಗಳು ಉತ್ತರ ಪ್ರದೇಶದ ಮುಂಬರುವ ಚುನಾವಣಾ ಸಿದ್ಧತೆಗಳ ದೃಷ್ಟಿಯಿಂದ ಮಹತ್ವದ್ದಾಗಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande