ಬೆಂಗಳೂರು: ಶಾಂತಿನಗರ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆಯಲ್ಲಿ ಶಾಸಕ ಹ್ಯಾರಿಸ ಭಾಗಿ
ಬೆಂಗಳೂರು, 27 ಜುಲೈ (ಹಿ.ಸ.): ಆ್ಯಂಕರ್: ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ಹೋದ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್, ನೇರವಾಗಿ ರಸ್ತೆಗಿಳಿದು ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ. ಬೆಂಗಳೂರಿ
ಸಂದರ್ಭಿಕ ಚಿತ್ರ


ಬೆಂಗಳೂರು, 27 ಜುಲೈ (ಹಿ.ಸ.):

ಆ್ಯಂಕರ್:

ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ಹೋದ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್, ನೇರವಾಗಿ ರಸ್ತೆಗಿಳಿದು ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.

ಬೆಂಗಳೂರಿನ ಶಾಂತಿನಗರದ ಪ್ರಮುಖ ಬೀದಿಗಳಲ್ಲಿ ಅಧಿಕಾರಿಗಳೊಂದಿಗೆ ಸಂಚರಿಸಿದ ಶಾಸಕರು, ಫುಟ್ಪಾತ್ಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ವ್ಯಾಪಾರಸ್ಥರಿಗೆ ಕಠಿಣ ಎಚ್ಚರಿಕೆ ರವಾನಿಸಿದರು. ಅಲ್ಲದೆ, ದಾರಿಗೆ ಅಡ್ಡಿಯಾಗಿದ್ದ ಅನಧಿಕೃತ ತಳ್ಳುವ ಗಾಡಿಗಳು, ಶೆಡ್ಗಳು ಮತ್ತು ಮಳಿಗೆಗಳನ್ನು ಸ್ಥಳದಲ್ಲೇ ತೆರವುಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳೊಂದಿಗೆ ಕೈಜೋಡಿಸಿದರು.

ಶಿಥಿಲಗೊಂಡ ಕಟ್ಟಡಗಳು ಹಾಗೂ ಅನಾಥ ವಾಹನಗಳಿಿಗೆ ಕಡಿವಾಣ:

ಕಾರ್ಯಾಚರಣೆ ವೇಳೆ ಕೇವಲ ಫುಟ್ಪಾತ್ ಮಾತ್ರವಲ್ಲದೆ, ಯಾವುದೇ ಶಿಥಿಲಗೊಂಡ ಕಟ್ಟಡಗಳ ಅಡಿಯಲ್ಲೇ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿರುವುದು ಶಾಸಕರ ಗಮನಕ್ಕೆ ಬಂದಿದ್ದು. ಕೂಡಲೇ ಅಂತಹ ಅಪಾಯಕಾರಿ ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡೀದರು.

ಇದೇ ವೇಳೆ, ರಸ್ತೆ ಬದಿಗಳಲ್ಲಿ ತಿಂಗಳುಗಟ್ಟಲೆ ನಿಂತು ಸಂಚಾರ ದಟ್ಟನೆಗೆ ಕಾರಣವಾಗಿದ್ದ ಅನಾಥ ವಾಹನಗಳ ಬ್ರೇಕ್ ಹಾಕಲಾಗಿದೆ. ಆಯುಕ್ತರಾದ ಜಗದೀಶ್ ಅವರೊಂದಿಗೆ ತೆರಳಿದ ಶಾಸಕ ಹ್ಯಾರಿಸ್, ಅಂತಹ ವಾಹನಗಳಿಗೆ ಎಚ್ಚರಿಕೆ ನೋಟಿಸ್ ಅಂಟಿಸುವ ಮೂಲಕ ಕಠಿಣ ಸಂದೇಶ ರವಾನಿಸಿದರು. ಅಧಿಕಾರಿಗಳ ಜೊತೆ ಶಾಸಕರೇ ಖುದ್ದಾಗಿ ಮೈದಾನಕ್ಕಿಳಿದು ತೆರವು ಕಾರ್ಯ ನಡೆಸಿದ್ದು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande