
ಕೋಲಾರ, ೦೯ ಜೂನ್ (ಹಿ.ಸ) :
ಆ್ಯಂಕರ್ : ಸಮಾನತೆ ಸಮಾಜ ಹಾಗೂ ಪ್ರಬುದ್ಧ ದೇಶ ನಿರ್ಮಾಣ ಮಾಡುವ ಕನಸನ್ನು ಪ್ರೊ.ಬಿ. ಕೃಷ್ಣಪ್ಪ ಹೊಂದಿದ್ದರು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ- ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಆರ್.ಮೋಹನ್ರಾಜ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ- ಕರ್ನಾಟಕ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಮಾರ್ಗ ವತಿಯಿಂದ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನದ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಸಮಾನತೆ ಸಮಾಜ ಹಾಗೂ ಪ್ರಬುದ್ಧ ದೇಶ ನಿರ್ಮಾಣ ಮಾಡುವ ಕನಸು ಕಂಡ ಅಂಬೇಡ್ಕರ್ ರವರ ಆದರ್ಶಗಳ ಹಾದಿಯಲ್ಲಿ ನಡೆದವರು ಪ್ರೊ. ಬಿ.ಕೃಷ್ಣಪ್ಪ ಅವರ ಜನ್ಮದಿನವನ್ನು ಶೋಷಿತರ ಬಹುಜನರ ಏಕತಾ ದಿನವಾಗಿ ಆಚರಿಸಲಾಗುತ್ತಿದೆ.ದಲಿತರ,ಶೋಷಿತರ ಏಳ್ಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಕೃಷ್ಣಪ್ಪ ಎಂದ ಅವರು, ದಲಿತರು ರಾಜಕೀಯವಾಗಿಯೂ ಪ್ರಬಲರಾದಾಗ ಮಾತ್ರ ತಮ್ಮ ಸಮುದಾಯದ ಅಭಿವೃದ್ದಿಯನ್ನು ಕಾಣಬಹುದು ಎಂಬ ಸತ್ಯ ಅರಿತಿದ್ದ ಅವರು, ನಮಗೆಲ್ಲಾ ಆದರ್ಶವಾಗಿದ್ದರು ಎಂದರು.
ಸ್ವಾತAತ್ರ ಭಾರತದಲ್ಲಿ ದಲಿತ. ಹಿಂದುಳಿದ, ಹಾಗೂ ಶೋಷಣೆಗೆ ಒಳಗಾದ ಸಮುದಾಯಗಳು ಇಂದಿಗೂ ಸಹ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ದಿ ಕಾಣದಿರುವುದು ದುರಂತ. ಸ್ವತಂತ್ರದ ನಂತರ ಅಂಬೇಡ್ಕರ್ ಸ್ಥಾಪಿಸತ ಸಂವಿಧಾನದ ಅಡಿಯಲ್ಲಿ ದೇಶವನ್ನು ಆಳಿದ ರಾಜಕೀಯ ಪಕ್ಷಗಳು ದಲಿತ. ಹಿಂದುಳಿದ, ಹಾಗೂ ಶೋಷಣೆಗೆ ಒಳಗಾದ ಸಮುದಾಯಗಳ ಏಳಿಗೆಗೆ ಶ್ರಮಿಸಿದವರಲ್ಲ ಇನ್ನಾದರೂ ನಾವು ಸಂಘಟಿತರಾಗಿ ಆಳುವವರನ್ನು ಪ್ರಶ್ನಿಸುವ ಜೊತೆಗೆ ನಾವೇ ಆಳುವವರಗಬೇಕು. ಸ್ವಾತಂತ್ರö್ಯ ಬಂದು ಇಷ್ಟೊಂದು ವರ್ಷಗಳು ಉರುಳಿದರೂ ಇಂದಿಗೂ ಶೋಷಣೆ ಇದೆ ಎಂದರೆ ಅದು ತಲೆತಗ್ಗಿಸುವಂತದ್ದು ಎಂದ ಅವರು, ಪ್ರೊ.ಬಿ.ಕೃಷ್ಣಪ್ಪ ಅವರ ಆದರ್ಶವನ್ನು ಪಾಲಿಸುವ ಮೂಲಕ ನಾವೆಲ್ಲಾ ದೀನ ದಲಿತರ ಏಳ್ಗೆಗೆ ಶ್ರಮಿಸುವ ಸಂಕಲ್ಪ ತೊಡೋಣ ಎಂದರು.
ಕಾರ್ಯಕ್ರಮದಲ್ಲಿ ಬಹುಜನ ಚಳುವಳಿ ಚಿಂತಕರು ಎಂ. ಗೋಪಿನಾಥ್ , ರಾಜ್ಯ ಸಂಘಟನ ಕಾರ್ಯದರ್ಶಿ ವಕ್ಕಲೇರಿ ಶಂಕರ್, ಬೆಂಗಳೂರು ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ , ರಾಜ್ಯ ಸಮಿತಿ ಸದಸ್ಯ ಆನೇಕಲ್ ನಾರಾಯಣ ಸ್ವಾಮಿ , ಜಿಲ್ಲಾ ಸಂಚಾಲಕ ಲಕ್ಷಿ÷್ಮಪುರ ಲೋಕೇಶ್, ಹಿರಿಯ ಹೊರಟಗಾರರಾದ ಶೈಲಜಮ್ಮ, ಆರ್ಪಿಐ ಕೋಲಾರ ಜಿಲ್ಲಾ ಅಧ್ಯಕ್ಷ ಚಂದ್ರು, ಹಳೆಹಳ್ಳಿ ತಿಮ್ಮರಾಯಪ್ಪ , ಭೈರಂಡಹಳ್ಳಿ ತಾಲೂಕು ಅಧ್ಯಕ್ಷ ರವೀಂದ್ರ ಕುಮಾರ್, ಕಲ್ಪನ, ಕೆಜಿಎಫ್ ಬಾಬು, ಮೈಸೂರು ರಾಮಸ್ವಾಮಿ, ಆರ್, ಮೋಹನ್ ರಾಜು, ರಾಮಪುರ ಲೋಕೇಶ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್