ಹಿರೆಸಿಂಧೊಗಿ : ಜೂನ್ 12ರಂದು ವಿದ್ಯುತ್ ವ್ಯತ್ಯಯ
ಕೊಪ್ಪಳ, 09 ಜೂನ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಜೆಸ್ಕಾಂ ವ್ಯಾಪ್ತಿಯ 110/33/11ಕೆವಿ ಹಿರೆಸಿಂಧೊಗಿ ಉಪ ಕೇಂದ್ರದಲ್ಲಿ ಪ್ರಥಮ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯ ನಿಮಿತ್ತ ಜೂನ್ 12ರ ಶುಕ್ರವಾರರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 110/33/11ಕೆವಿ ಹಿರ
ಹಿರೆಸಿಂಧೊಗಿ : ಜೂನ್ 12ರಂದು ವಿದ್ಯುತ್ ವ್ಯತ್ಯಯ


ಕೊಪ್ಪಳ, 09 ಜೂನ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಜೆಸ್ಕಾಂ ವ್ಯಾಪ್ತಿಯ 110/33/11ಕೆವಿ ಹಿರೆಸಿಂಧೊಗಿ ಉಪ ಕೇಂದ್ರದಲ್ಲಿ ಪ್ರಥಮ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯ ನಿಮಿತ್ತ ಜೂನ್ 12ರ ಶುಕ್ರವಾರರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

110/33/11ಕೆವಿ ಹಿರೆಸಿಂಧೊಗಿ ಉಪ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಫ್-1 ಬಿಕನಳ್ಳಿ ಎನ್.ಜೆ.ವೈ., ಎಫ್-2 ಹಂದ್ರಾಳ, ಎಫ್-3 ಗುನ್ನಳ್ಳಿ ಎನ್.ಜೆ.ವೈ., ಎಫ್-4 ವದಗನಾಳ, ಎಫ್-5 ಕೋಳೂರು, ಎಫ್-6 ಚಿಕ್ಕಸಿಂದೋಗಿ, ಎಫ್-7 ಬೂದಿಹಾಳ, ಎಫ್-8 ಗೊಂಡಬಾಳ ಎಮ್.ಐ, ಎಫ್-9 ಗೊಂಡಬಾಳ, ಎಫ್-10 ಹಿರೇಸಿಂಧೋಗಿ ಹಾಗೂ ಎಫ್-11 ಮೈನಳಿ ಫೀಡರ್ಗಳಿಗೆ ಒಳಪಡು ಬಿಕನಳ್ಳಿ, ಹಂದ್ರಾಳ, ಗುನ್ನಳ್ಳಿ, ಕೋಳೂರು, ಚಿಕ್ಕಸಿಂದೋಗಿ, ಬೂದಿಹಾಳ, ಗೊಂಡಬಾಳ. ಪಂಪ್ಸೆಟ್, ಹಿರೇಸಿಂಧೋಗಿ ಹಾಗೂ ಮೈನಳಿ, ಮುಂಡರಗಿ, ಹ್ಯಾಟಿ, ಮೆಳ್ಳಿಕೇರಿ ಮತ್ತು ಇವುಗಳ ವ್ಯಾಪ್ತಿಯ ಪಂಪ್ಸೆಟ್ಗಳಲ್ಲಿ ಅಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಾಯಾಗಲಿದೆ.

ವಿದ್ಯುತ್ ನಿರ್ವಹಣೆ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಸೂಚಿಸಲಾಗಿದೆ.

ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದ್ದಲ್ಲಿ ಕಂಪನಿಯು ಜವಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande