
ಸಂಡೂರು, 09 ಜೂನ್ (ಹಿ.ಸ.) :
ಆ್ಯಂಕರ್ : ಸಂಡೂರು ತಾಲೂಕಿನ ಘೋರ್ಪಡೆ ಸಾಮ್ರಾಜ್ಯದ ಯುವರಾಜ, ಎಂ.ವೈ. ಘೋರ್ಪಡೆ ಅವರ ಪುತ್ರ ಕಾರ್ತಿಕೇಯ ಮುರಾರಿರಾವ್ ಘೋರ್ಪಡೆ (67) ಅವರು ಬೆಂಗಳೂರಿನ ಮನೆಯಲ್ಲಿ ಮಂಗಳವಾರ ನಸುಕಿನಜಾವ 5.30ರ ಸುಮಾರಿಗೆ ತೀವ್ರ ಹೃದಯಾಘಾತದ ಕಾರಣ ಅಸುನೀಗಿದ್ದಾರೆ.
ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಬೆಂಗಳೂರಿನಲ್ಲಿ ಬುಧವಾರ ಸಂಜೆ 4 ಗಂಟೆಗೆ ಹೆಬ್ಬಾಳ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರ ಆತ್ಮೀಯರಾಗಿದ್ದ ಕಾರ್ತಿಕೇಯ ಮುರಾರಿರಾವ್ ಘೋರ್ಪಡೆ ಅವರು, ಬಿಜೆಪಿಯನ್ನು ಸೇರಿದ ನಂತರ ಜಿಲ್ಲೆಯ ಬಿಜೆಪಿಯ ಆಗುಹೋಗುಗಳ ಅವಿಭಾಜ್ಯ ಆಗಿದ್ದರು. ಸಂಡೂರು ವಿಧಾನ ಸಭಾ ಕ್ಷೇತ್ರದ ಜನಸಾಮಾನ್ಯರ ಜೊತೆಯಲ್ಲಿ ಸಾಮಾನ್ಯರಂತೆ ಜೀವಿಸಿ ಜನಪ್ರಿಯತೆ ಹೊಂದಿದ್ದರು.
ಮೃತರ ಆತ್ಮಕ್ಕೆ ಶಾಂತಿ ಕೋರಿ ಗಣ್ಯರು ಮತ್ತು ಸಾರ್ವಜನಿಕರು ಶೋಕ ಸಂತಾಪ ಸೂಚಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್