ಶಾಸಕ ಬಿ. ನಾಗೇಂದ್ರ ಗೆ ಸಚಿವ ಸ್ಥಾನ ನೀಡಲು `ಬೃಹತ್ ಒತ್ತಾಯ'
ಬಳ್ಳಾರಿ, 09 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಬಳ್ಳಾರಿ ಗ್ರಾಮೀಣ ಶಾಸಕರಾಗಿರುವ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ಮತ್ತು ಜಿಲ್ಲಾ ಉಸ್ತುವಾರಿ ನೀಡಲು ಆಗ್ರಹಿಸಿ `ಬಿ.ನಾಗೇಂದ್ರ ಅಭಿಮಾನಿಗಳ ಬಳಗ''ವು ಜೂನ್ 10ರ ಬುಧವಾರ ಬೆಳಗ್ಗೆ 10 ಗಂಟೆಗೆ ಕಾಗೆ
ಶಾಸಕ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಲು `ಬೃಹತ್ ಒತ್ತಾಯ'


ಬಳ್ಳಾರಿ, 09 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಬಳ್ಳಾರಿ ಗ್ರಾಮೀಣ ಶಾಸಕರಾಗಿರುವ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ಮತ್ತು ಜಿಲ್ಲಾ ಉಸ್ತುವಾರಿ ನೀಡಲು ಆಗ್ರಹಿಸಿ `ಬಿ.ನಾಗೇಂದ್ರ ಅಭಿಮಾನಿಗಳ ಬಳಗ'ವು ಜೂನ್ 10ರ ಬುಧವಾರ ಬೆಳಗ್ಗೆ 10 ಗಂಟೆಗೆ ಕಾಗೆ ಪಾರ್ಕ್ನಿಂದ ಗಡಿಗೆ ಚೆನ್ನಪ್ಪ ವೃತ್ತದವರೆಗೆ `ಬೃಹತ್ ಒತ್ತಾಯ' ಮೆರವಣಿಗೆಯನ್ನು ಹಮ್ಮಿಕೊಂಡಿದೆ.

ಬಿ.ನಾಗೇಂದ್ರ ಅಭಿಮಾನಿಗಳ ಬಳಗದ ಸಂಗನಕಲ್ಲು ವಿಜಯಕುಮಾರ್ ಅವರು ಈ ಮಾಹಿತಿ ನೀಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ರಾಷ್ಟ್ರೀಯ ವರಿಷ್ಠರು ಬಿ. ನಾಗೇಂದ್ರ ಅವರಿಗೆ `ಕೊಟ್ಟ ಮಾತಿನಂತೆ' ನಡೆದುಕೊಳ್ಳಬೇಕು. ತಕ್ಷಣವೇ ಅವರಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಬೃಹತ್ ಒತ್ತಾಯ ಮೆರವಣಿಗೆಯಲ್ಲಿ ಬಳ್ಳಾರಿ ಜಿಲ್ಲೆಯ ಹಾಗೂ ಬಳ್ಳಾರಿ ಗ್ರಾಮಾಂತರದ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಮತ್ತು ಬಿ. ನಾಗೇಂದ್ರ ಅಣ್ಣ ಅವರ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ, ಸೇರಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande