ಹನುಮಂತಪ್ಪ ಭೀಮಪ್ಪ ಕುಂಟೋಜಿ ನಿಧನ
ಇದ್ದಾರೆ
Hanumanthappa Bhimappa Kuntoji passes away


ಕಾರಟಗಿ, 09 ಜೂನ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ಕಾರಟಗಿ ತಾಲ್ಲೂಕಿನ ಯರಡೋಣಿ ಗ್ರಾಮದ ಹನುಮಂತಪ್ಪ ಭೀಮಪ್ಪ ಕುಂಟೋಜಿ (82) ಇಂದು ಬೆಳಿಗ್ಗೆ ಕೊನೆಯುಸಿರೆಳೆದರು.

ಅವರಿಗೆ ಪತ್ನಿ, ಹೊಸಪೇಟೆಯ ಪಿಯು ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ, ನೀರಾವರಿ ಇಲಾಖೆಯ ಪರಶುರಾಮ, ಗುಡಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಭೀಮೇಶ್, ಕಂಪ್ಲಿ ಪಿಡಿಓ ಬೀರಲಿಂಗ, ಯಲಬುರ್ಗಾದ ಮುಖ್ಯ ಪೊಲೀಸ್ ಪೇದೆ ವಿರೂಪಾಕ್ಷ ಸೇರಿದಂತೆ ಐವರು ಪುತ್ರರು, ಶಿಕ್ಷಕಿ ದುರ್ಗಮ್ಮ ಟಿ ಗೊರವರ್ ಸೇರಿ ಮೂವರು ಪುತ್ರಿಯರು ಇದ್ದಾರೆ.

ಉತ್ತಮ ಕೃಷಿಕರು,ಶ್ರಮಜೀವಿಗಳಾಗಿ ತುಂಬು ಜೀವನ ನಡೆಸಿದ ಇವರು ಕಳೆದ ಕೆಲವು ದಿನಗಳಿಂದ ಪಾರ್ಶ್ವವಾಯುಗೆ ಒಳಗಾಗಿ,ಚಿಕಿತ್ಸೆ ಪಡೆಯುತ್ತಿದ್ದರು.

ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆಯ ಇಂದು ಸಂಜೆ ಸ್ವಗ್ರಾಮ ಯರಡೋಣದಲ್ಲಿ ಜರುಗಲಿದೆ.

ಮಾಹಿತಿ ಹಾಗೂ ಸಂಪರ್ಕಕ್ಕೆ

ಡಾ.ಭೀಮೇಶ್

96204 54824

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande