ಸರ್ಕಾರಿ ಶಾಲೆ ಪುನರ್ ನಿರ್ಮಾಣಕ್ಕೆ ಜಾನಪದ ಗಾಯಕ ಗೋ.ನಾ.ಸ್ವಾಮಿ ತೀರ್ಮಾನ
ಸರ್ಕಾರಿ ಶಾಲೆ ಪುನರ್ ನಿರ್ಮಾಣಕ್ಕೆ ಜಾನಪದ ಗಾಯಕ ಗೋ.ನಾ.ಸ್ವಾಮಿ ತೀರ್ಮಾನ
ಶಿಥಿಲಗೊಂಡಿರುವ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಯಲುವಗುಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ


ಕೋಲಾರ, ೦೯ ಜೂನ್ (ಹಿ.ಸ) :

ಆ್ಯಂಕರ್ : ಅಂತಾರಾಷ್ಟ್ರೀಯ ಜಾನಪದ ಗಾಯಕ ಗೋ.ನಾ.ಸ್ವಾಮಿ ಅವರು ತಮ್ಮ ೫೩ನೇ ಜನ್ಮದಿನದ ಅಂಗವಾಗಿ ಸರ್ಕಾರಿ ಶಾಲೆಯ ಪುನರ್ ನಿರ್ಮಾಣ ಮಾಡುವ ತೀರ್ಮಾನ ಕೈಗೊಂಡಿದ್ದಾರೆ.

ಈ ಉದ್ದೇಶಕ್ಕಾಗಿ ಅವರ ಸ್ವಗ್ರಾಮವಾದ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಯಲುವಗುಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸುಮಾರು ೧೯೬೯ರಲ್ಲಿ ನಿರ್ಮಾಣಗೊಂಡಿರುವ ಈ ಶಾಲೆಯ ಕಟ್ಟಡ ಹಳೆಯದಾಗಿದ್ದು ಅದನ್ನು ಸ್ವಂತ ಖರ್ಚಿನಲ್ಲಿ ಪುನರ್ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

ನನ್ನ ಬೆಳೆಸಿದ ಊರಿನ ಜನರಿಗೆ ನನ್ನ ಕಡೆಯಿಂದ ಪುಟ್ಟ ಸಹಾಯ ಮಾಡಬೇಕು ಅಂದುಕೊAಡು ಈ ಕೆಲಸಕ್ಕೆ ಮುಂದಾಗಿದ್ದೇನೆ. ಎಲ್ಲಾ ಕಲಾವಿದರೂ ಸಮಾಜದಿಂದಲೇ ಬೆಳೆಯುತ್ತಾರೆ, ಹಣ ಗಳಿಸುತ್ತಾರೆ. ಆದರೆ, ಹೆಚ್ಚಿನವರು ವಾಪಸ್ ಸಮಾಜಕ್ಕೆ ಏನೂ ಕೊಡಲ್ಲ. ಆ ರೀತಿ ಆಗಬಾರದು. ಗಾಯನದಿಂದ ಬಂದ ಹಣವನ್ನೇ ಇದಕ್ಕೆ ಬಳಸುತ್ತೇನೆ. ಜೊತೆಗೆ ಸಮಾನ ಮನಸ್ಕ ದಾನಿಗಳು ಹಣ ನೀಡಿದರೆ ಅದನ್ನೂ ಬಳಸುತ್ತೇನೆ ಎಂದು ಗೋ.ನಾ.ಸ್ವಾಮಿ ತಿಳಿಸಿದರು.

ನಾನು ಕೂಡ ಸರ್ಕಾರಿ ಶಾಲಾ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ. ಸಮಸ್ಯೆಗಳ ಅರಿವು ಇದೆ. ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು. ಅವರು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂಬುದು ಸರ್ಕಾರಿ ಶಾಲೆ ಮರುನಿರ್ಮಾಣದ ಉದ್ದೇಶವಾಗಿದೆ ಎಂದರು.

ಗೋ.ನಾ.ಸ್ವಾಮಿ ಈಗಾಗಲೇ ಕೋಲಾರ ತಾಲ್ಲೂಕಿನ ಸುಗಟೂರಿನಲ್ಲಿ ಹೈಟೆಕ್ ಬಸ್ ತಂಗುದಾಣವನ್ನು ಅಭಿವೃದ್ಧಿ ಪಡಿಸಿದ್ದಾರೆ ಅಲ್ಲಿ ದಿನಪತ್ರಿಕೆಗಳು, ಕುಡಿಯಲು ನೀರಿನ ವ್ಯವಸ್ಥೆ, ಫ್ಯಾನ್, ವಿದ್ಯುತ್ ದೀಪ ಸೇರಿದಂತೆ ಪ್ರಯಾಣಿಕರಿಗೆ ಬೇಕಾದ ಸೌಲಭ್ಯಗಳು ಇಲ್ಲಿವೆ. ಸುಗಟೂರಿನಲ್ಲಿ ಅವರ ತಾಯಿ ಜಯಮ್ಮ ಹೆಸರಿನಲ್ಲಿ ದ್ವಾರಬಾಗಿಲು ನಿರ್ಮಿಸಿದ್ದಾರೆ ಜೊತೆಗೆ ದೇಗುಲಗಳ ಅಭಿವೃದ್ಧಿ ಹಾಗೂ ಮತ್ತೊಂದು ಸ್ವಾಗತದ್ವಾರ ಸೇರಿದಂತೆ ಪೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ, ಸುಗಟೂರಿನಲ್ಲಿ ಸೋಮವಾರ ನಡೆದ ತಮ್ಮ ಜನ್ಮ ದಿನಾಚರಣೆಯಲ್ಲಿ ಅವರು ಈ ತೀರ್ಮಾನ ಕೈಗೊಂಡರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande