
ಕೋಲಾರ, ಜೂ.೦೯ (ಹಿ.ಸ) :
ಆ್ಯಂಕರ್ : ತಾಲೂಕಿನ ಮದನಳ್ಳಿ ಕ್ರಾಸ್ನಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ೨೦೨೫-೨೬ ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಳೆದ ಸಾಲಿನ ಹಳೆಯ ವಿದ್ಯಾರ್ಥಿಗಳಾದ ತರ್ನಹಳ್ಳಿ ಟಿ.ಎನ್ ಸೋಮಶೇಖರ್, ವೆಲಗಲಬರ್ರೆ ವಿ.ಎಮ್ ಸಂತೋಷ್ ಕುಮಾರ್, ಮದನಹಳ್ಳಿ ಸಿ.ವಿ ಮಂಜುನಾಥ್, ಮುಳ್ಳಹಳ್ಳಿ ಎಂ.ಆರ್ ನಾಗೇಂದ್ರ ಕುಮಾರ್, ಎಂ.ವಿ ಅರುಣ್ ಕುಮಾರ್ ಇವರ ಸಮ್ಮುಖದಲ್ಲಿ ಪ್ರಥಮ ಸ್ಥಾನ, ದ್ವಿತೀಯ ದ್ವಿತೀಯ ಸ್ಥಾನ ಮತ್ತು ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಮೊದಲನೇ ಬಹುಮಾನ ೧೦,೦೦೦, ದ್ವಿತೀಯ ಬಹುಮಾನ ೫,೦೦೦, ತೃತೀಯ ಬಹುಮಾನ ೩೦೦೦ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಬಿ.ಟಿ ನಂಜು0ಡಗೌಡ ಅಧ್ಯಕ್ಷತೆ ವಹಿಸಿದ್ದು, ಬಿಜಿ ವಿಜಯಾನಂದ ವೇದಿಕೆಯಲ್ಲಿದ್ದರು. ಎಸ್. ಸುರೇಶ್ ಕುಮಾರ್ ಸ್ವಾಗತಿಸಿ, ಗೋವಿಂದರಾಜು ನಿರೂಪಿಸಿ, ವಿಎಂ ರಾಜಣ್ಣ ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಪುರಸ್ಕೃತ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳು ವ್ಯಕ್ತಪಡಿಸಿದರು. ಎಲ್ಲಾ ಮಕ್ಕಳಿಗೂ ಸಂವಿಧಾನ ಪೀಠಿಕೆ ವಿತರಿಸಿ, ಸಿಹಿ ವಿತರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್