
ಕೊಪ್ಪಳ, 09 ಜೂನ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜೆಸ್ಕಾಂ ವ್ಯಾಪ್ತಿಯ 110ಕೆವಿ ಚಿಲಕಮುಖಿ ಉಪ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯ ನಿಮಿತ್ತ ಜೂನ್ 11ರ ಗುರುವಾರರಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
110ಕೆವಿ ಚಿಲಕಮುಖಿ ಉಪ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಫ್-1 ವೆಂಕಟಪೂರ ಐಪಿ, ಎಫ್-2 ಮೆತಗಲ ಐಪಿ, ಎಫ್-3 ಹಿರೆಸೂಳಿಕೇರಿ ಐಪಿ, ಎಫ್-5 ಶಿಡಗನಹಳ್ಳಿ ಐಪಿ, ಎಫ್-8 ಚಿಲಕಮುಖಿ ಐಪಿ, ಎಫ್-9 ಇರಕಲಗಡಾ ಐಪಿ, ಎಫ್-10 ಗೊಸಲದೊಡ್ಡಿ ಐಪಿ, ಎಫ್-4 ಹಾಸಗಲ ಎನ್.ಜೆ.ವೈ., ಎಫ್-7 ಕೊಡದಾಳ ಎನ್.ಜೆ.ವೈ., ಎಫ್-11 ಜಿನ್ನಾಪೂರ ಎನ್.ಜೆ.ವೈ ಫೀಡರ್ಗಳ ಹಾಗೂ ಇರಕಲಗಡಾ ಕಾರ್ಯ ಮತ್ತು ಪಾಲನಾ ಶಾಖೆಯ 110ಕೆವಿ ಚಿಲಕಮುಖಿ ಉಪ ಕೇಂದ್ರಕ್ಕೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಾಯಾಗಲಿದೆ.
ವಿದ್ಯುತ್ ನಿರ್ವಹಣೆ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಸೂಚಿಸಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದ್ದಲ್ಲಿ ಕಂಪನಿಯು ಜವಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್