
ಬಳ್ಳಾರಿ, 09 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಪಡಿತರ ಚೀಟಿದಾರರಿಗೆ ಜೂನ್ 2026 ರ ಮಾಹೆಯ ಪಡಿತರ ಆಹಾರಧಾನ್ಯ ಬಿಡುಗಡೆಯಾಗಿದ್ದು, ಪಡಿತರದಾರರು ತಮಗೆ ನಿಗಧಿಪಡಿಸಿದ ಪ್ರಮಾಣದಲ್ಲಿ ಆಹಾರಧಾನ್ಯವನ್ನು ಸಂಬ0ಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡೆಯಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಕೆ.ಆರ್.ದೇವರಾಜ್ ಅವರು ತಿಳಿಸಿದ್ದಾರೆ.
ಪಡಿತರ ಹಂಚಿಕೆಯ ವಿವರ:
ಆದ್ಯತಾ (ಪಿ.ಹೆಚ್.ಹೆಚ್) ಬಿ.ಪಿ.ಎಲ್ ಚೀಟಿಗಳು: ಸೆಂಟ್ರಲ್ (ಕೇಂದ್ರ) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ (ಉಚಿತ), ಸ್ಟೇಟ್ (ರಾಜ್ಯ) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ (ಉಚಿತ).
ಅಂತ್ಯೋದಯ (ಎಎವೈ) ಚೀಟಿಗಳು (ಸದಸ್ಯರ ಸಂಖ್ಯೆಯ ಆಧಾರದ ಮೇಲೆ): 1 ರಿಂದ 3 ಸದಸ್ಯರಿರುವ ಪಡಿತರ ಚೀಟಿಗೆ ಮೇ ಮಾಹೆಯಲ್ಲಿಯೇ ವಿತರಿಸಿರುವುದರಿಂದ ಜೂನ್ನಲ್ಲಿ ಹಂಚಿಕೆ ಇರುವುದಿಲ್ಲ. 04 ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ. ಅಕ್ಕಿ (ಉಚಿತ), 05 ಸದಸ್ಯರಿರುವ ಪಡಿತರ ಚೀಟಿಗೆ 30 ಕೆ.ಜಿ. ಅಕ್ಕಿ (ಉಚಿತ), 06 ಸದಸ್ಯರಿರುವ ಪಡಿತರ ಚೀಟಿಗೆ 50 ಕೆ.ಜಿ. ಅಕ್ಕಿ (ಉಚಿತ), 07 ಸದಸ್ಯರಿರುವ ಪಡಿತರ ಚೀಟಿಗೆ 70 ಕೆ.ಜಿ. ಅಕ್ಕಿ (ಉಚಿತ), 08 ಸದಸ್ಯರಿರುವ ಪಡಿತರ ಚೀಟಿಗೆ 90 ಕೆ.ಜಿ. ಅಕ್ಕಿ (ಉಚಿತ), 09 ಸದಸ್ಯರಿರುವ ಪಡಿತರ ಚೀಟಿಗೆ 110 ಕೆ.ಜಿ. ಅಕ್ಕಿ (ಉಚಿತ), 10 ಸದಸ್ಯರಿರುವ ಪಡಿತರ ಚೀಟಿಗೆ 130 ಕೆ.ಜಿ. ಅಕ್ಕಿ (ಉಚಿತ).
ಜೂನ್-2026 ರ ಮಾಹೆಯಲ್ಲಿ ಮೇ ಮತ್ತು ಜೂನ್ ಎರಡೂ ತಿಂಗಳ ಅನ್ನಭಾಗ್ಯ ಅಕ್ಕಿಯನ್ನು ಒಟ್ಟಿಗೆ ಹಂಚಿಕೆ ಮಾಡಲಾಗುತ್ತಿದೆ.
ಎಲ್ಲಾ ಪಿ.ಹೆಚ್.ಹೆಚ್ (ಬಿ.ಪಿ.ಎಲ್) ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 10 ಕೆ.ಜಿ ಯಂತೆ ಅಕ್ಕಿ ವಿತರಿಸಲಾಗುತ್ತದೆ. ಆದರೆ, ಅಂತ್ಯೋದಯ ಪಡಿತರ ಚೀಟಿ ಹೊಂದಿರುವ 1 ರಿಂದ 3 ಸದಸ್ಯರ ಕುಟುಂಬಗಳಿಗೆ ಮೇ 2026 ರಲ್ಲಿಯೇ ವಿತರಣೆ ಮಾಡಿರುವುದರಿಂದ ಈ ತಿಂಗಳು ಹಂಚಿಕೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಪಡಿತರ ಚೀಟಿದಾರರು ಆಹಾರಧಾನ್ಯ ಪಡೆಯುವಾಗ ಕೇವಲ ಒಂದು ಬಾರಿ ಮಾತ್ರ ಬಯೋಮೆಟ್ರಿಕ್ ನೀಡಬೇಕು ಮತ್ತು ಬಯೋಮೆಟ್ರಿಕ್ ನೀಡಿದ ತಕ್ಷಣವೇ ತಮ್ಮ ಪಡಿತರವನ್ನು ಪಡೆದುಕೊಳ್ಳಬೇಕು.
ಪಡಿತರ ವಿತರಣೆಯಲ್ಲಿ ಯಾವುದೇ ಲೋಪದೋಷಗಳು ಅಥವಾ ದೂರುಗಳಿದ್ದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1967 ಕ್ಕೆ ಕರೆ ಮಾಡಬಹುದು ಅಥವಾ ಸಂಬAಧಿಸಿದ ತಾಲ್ಲೂಕಿನ ತಹಶೀಲ್ದಾರರ ಕಚೇರಿಯ ಆಹಾರ ಶಾಖೆಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್