

ಬಳ್ಳಾರಿ, 09 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಅವಂಭಾವಿಯಲ್ಲಿ ಇರುವ ಅಶೋಕ ನಗರದ ಚೌದ್ರಿ ರೆಸಿಡೆನ್ಸಿಯಲ್ ಪಿಜಿಯಲ್ಲಿರುವ ರಾವ್ ಬಹುದ್ದೂರ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.
ಮೃತನು ಸಿರುಗುಪ್ಪ ತಾಲೂಕಿನ ಟಿ. ರಾಂಪುರ ಗ್ರಾಮ ನಿವಾಸಿ ವಿಶ್ವನಾಥ್ (24). ಮೃತ ವಿದ್ಯಾರ್ಥಿ ವಿಶ್ವನಾತ್ನ ತಲೆ ಮತ್ತು ಎದೆಯ ಭಾಗಕ್ಕೆ ಗಂಭೀರವಾದ ಗಾಯಗಳಾಗಿವೆ. ಸಹಪಾಠಿಗಳ ಜೊತೆ ಜಗಳವಾಡಿದ್ದ ಈತನನ್ನು ಆತನ ಸಹಪಾಠಿಗಳೇ ಹೊಡೆದು ಕೊಲೆ ಮಾಡಿ, ಕೋಣೆಯಲ್ಲಿ ಫ್ಯಾನ್ಗೆ ನೇಣು ಹಾಕಿದ್ದಾರೆ. ಈ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕು ಮೃತನ ಪೋಷಕರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಕೌಲ್ ಬಜಾರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಿದ್ಯಾರ್ಥಿಯ ಶವವನ್ನು ಕೆಳಕ್ಕಿಳಿಸಿ ಪೋಸ್ಟ್ಮಾರ್ಟಂ ನಂತರ ಪೋಷಕರಿಗೆ ಒಪ್ಪಿಸಿದ್ದಾರೆ. ತನಿಖೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್