
ಬಳ್ಳಾರಿ, 09 ಜೂನ್ (ಹಿ.ಸ.) :
ಆ್ಯಂಕರ್ : ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೆರೆಯ ಶ್ರೀ ಚರಂತಪ್ಪಜ್ಜ ಮಹಾಸ್ವಾಮಿಗಳ 22ನೇ ಪುಣ್ಯ ಸ್ಮರಣೋತ್ಸವವು ಜೂನ್ 11, 12ರಂದು ಸಂಜೆ 6.30ರಿಂದ 9 ಗಂಟೆವರೆಗೆ ಹಾಗೂ ಜೂನ್ 13 ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆವರೆಗೆ ಬಸವಭವನದಲ್ಲಿ ನಡೆಯಲಿದೆ.
ಈ ಕುರಿತು ನಂದಿಪುರ ಪುಣ್ಯಕ್ಷೇತ್ರದ ಡಾ. ಮಹೇಶ್ವರ ಸ್ವಾಮಿಗಳು ಸುದ್ದಿಗಾರರಿಗೆ ಮಂಗಳವಾರ ಮಾಹಿತಿ ನೀಡಿದ್ದು, ಬಳ್ಳಾರಿಯಲ್ಲಿ ಎರಡನೇ ಬಾರಿಗೆ
ಗದ್ದಿಕೆರೆಯ ಶ್ರೀ ಚರಂತಪ್ಪಜ್ಜ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಪುಣ್ಯೋತ್ಸವದಲ್ಲಿ
`ಗುರುಚರಂತಾರ್ಯ ಶ್ರೀ ಪ್ರಶಸ್ತಿ' ಪುಸ್ತಕಗಳ ಲೋಕಾರ್ಪಣೆ ಮತ್ತು ಪ್ರದರ್ಶನ - ಮಾರಾಟ, ಉಚಿತ ಆರೋಗ್ಯ ಶಿಬಿರ, ಯೋಗ ಚಿಕಿತ್ಸೆ, ಸಂಗೀತ ಮತ್ತು ಹಾಸ್ಯೋತ್ಸವಗಳು ನಡೆಯಲಿವೆ. ಜೂನ್ 11ರ ಸಂಜೆ 6.30ಕ್ಕೆ ಅಕ್ಕನ ಬಳಗದಿಂದ ಶ್ರೀ ಸಿದ್ಧಾಂತ ಶಿಖಾಮಣಿ ಲಲಿತಾ ಸಹಸ್ರನಾಮ ಪಾರಾಯಣ,
579 ಕೃತಿಗಳ ಕರ್ತೃ ಎಸ್.ವಿ. ಪಾಟೀಲ್ ಗುಂಡೂರ ಅವರ ಪುಸ್ತಕಗಳ ಪ್ರದರ್ಶನ, ಕೂಡ್ಲಿಗಿಯ ಯೋಗ ಥೆರಪಿಸ್ಟ್ ಎನ್.ಎಲ್. ಸುಮಲತಾ ಅವರಿಂದ ಯೋಗ ಚಿಕಿತ್ಸೆ ನಡೆಯಲಿದೆ ಎಂದರು.
ಜನಸಂಖ್ಯಾ ತಜ್ಞ ಡಾ.ಎಂ.ಶಿವಮೂರ್ತಿ ಅವರಿಂದ `ಶ್ರೀಗುರು ದೊಡ್ಡಬಸವೇಶ್ವರ ಸ್ವಾಮಿಯ' ಶತನಾಮಾವಳಿ ಪುಸ್ತಕ ಬಿಡುಗೆ ಆಗಲಿದೆ. ಮಹಿಳಾ ಸಬಲೀಕರಣ ವಿಷಯದ ಕುರಿತು ಡಾ.ರಾಜಶ್ರೀ ಪಾಟೀಲ್ ಅವರಯ ಉಪನ್ಯಾಸ. ಮಹಾದೇವಯ್ಯ ಸ್ವಾಮಿಗಳಿಂದ ಪ್ರವಚನ, ಶರಣಯ್ಯ ಗವಾಯಿಗಳಿಂದ ಭಕ್ತಿಗೀತೆಗಳ ಗಾಯನ ನಡೆಯಲಿದೆ ಎಂದರು.
ಜೂನ್ 12ರ ಸಂಜೆ 6.30ಕ್ಕೆ `ವಚನಾನು ಸಂಧಾನ' ಗ್ರಂಥ ಲೋಕಾರ್ಪಣೆ. ಸಂಡೂರು ವಿರಕ್ತಮಠ ಪ್ರಭುಸ್ವಾಮಿಗಳು ದಿವ್ಯ ಸಾನ್ನಿಧ್ಯ.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಡಾ. ಕೆ. ಮಹಾಂತೇಶ್ ಅವರಿಂದ ಉದ್ಘಾಟನೆ. ಸಂಶೋಧಕ ಡಾ.ಸಿ. ಶಿವಕುಮಾರ ಸ್ವಾಮಿ ಅವರು ಪುಸ್ತಕ ಲೋಕಾರ್ಪಣೆ ಮಾಡುವರು. ಸಕ್ಕರೆ ಕರೆಡೀಶ ಅವರ `ಮರಿಕಲ್ಯಾಣ ಕಲ್ಪನೆ' ಕುರಿತು ಅಮಾತಿ ಬಸವರಾಜ್ ಉಪನ್ಯಾಸ ನೀಡುವರು ಎಂದರು.
ಜೂನ್ 13ರಂದು ಬೆಳಿಗ್ಗೆ 10.30ಕ್ಕೆ ದಿವ್ಯಪ್ರಕಾಶ ಪುಸ್ತಕ ಲೋಕಾರ್ಪಣೆ. ಎಸ್.ವಿ.ಪಾಟೀಲ್ ಅವರು ಪುಸ್ತಕದ ಕುರಿತು ಮಾತನಾಡುವರು. `ಗುರು ಚರಂತಾರ್ಯ ಶ್ರೀ' ಪ್ರಶಸ್ತಿಯನ್ನು ಬಳ್ಳಾರಿಯ ವೈದ್ಯ ಡಾ. ನಾಗರಾಜ್ ಕೊಂಡ್ಲಹಳ್ಳಿ, ಡಾ. ಚಂದ್ರಮೌಳಿ ಗಡಗಿ, ಕೂಡ್ಲಿಗಿಯ ಹಾಸ್ಯ ಕಲಾವಿದ
ಕೋಗಳಿ ಕೊಟ್ರೇಶ್, ಹಿಂದೂಸ್ತಾನಿ ಗಾಯಕ ದೊಡ್ಡಬಸವ ಗವಾಯಿ ಡಿ. ಕಗ್ಗಲ್ ಹಾಗೂ ಸಮಾಜಸೇವಕ ಮಹಾನಂದಿ ಬಸವ ಲಿಂಗಪ್ಪ ಅವರಿಗೆ ನೀಡಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಹಾಗೂ ಹಿರಿಯ ಉದ್ಯಮಿ ನಾರಾ ಸೂರ್ಯನಾರಾಯಣರೆಡ್ಡಿ, ನಗರ ಶಾಸಕ ನಾರಾ ಭರತರೆಡ್ಡಿ, ಮೇಯರ್ ಪಿ. ಗಾದೆಪ್ಪ, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಣೇಕಲ್ ಮಹಾಂತೇಶ್ ಸೇರಿ ಅನೇಕ ಗಣ್ಯರು ಮೂರು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ, ಸಮಾಜದ ಪ್ರಮುಖರಾದ ದಂಡಿನ ಶಿವಾನಂದ, ಸಿದ್ಧರಾಮಕಲ್ಮಠ, ವಾಲ್ಮೀಕಿ ಸಮಾಜದ ಮುಖಂಡ ಜೋಳದರಾಶಿ ತಿಮ್ಮಪ್ಪ, ಕಲ್ಗುಡಿ ಬಸವರಾಜ್, ಬೂದಿಹಾಳುಮಠದ ಎರ್ರಿಸ್ವಾಮಿ, ಬಾಡದ ಬದ್ರಿನಾಥ, ಆರ್.ಎಚ್.ಎಂ. ಚನ್ನಬಸಯ್ಯಸ್ವಾಮಿ, ವೀರೇಶ ಗಂಗಾವತಿ, ವಾಮಣ್ಣ, ಡಾ.ರೇಣುಕಮ್ಮ, ಭದ್ರಿನಾಥ, ಡಾ. ರೇಣುಕಾ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್