ಬಳ್ಳಾರಿ ಜಿಲ್ಲೆಯಲ್ಲಿ ನಿರಂತರ ಮಳೆ ; ನೀರು ನಿಲ್ಲದಂತೆ ಮುನ್ನೆಚ್ಚರಿಕೆ : ಡಿಹೆಚ್ಓ
ಬಳ್ಳಾರಿ, 08 ಜೂನ್ (ಹಿ.ಸ.) ಆ್ಯಂಕರ್ : ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಮಳೆ ನೀರು ನಿಲ್ಲದಂತೆ ತಡೆಯಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್
ಜಿಲ್ಲೆಯಲ್ಲಿ ನಿರಂತರ ಮಳೆ: ನೀರು ನಿಲ್ಲದಂತೆ ಮುನ್ನೆಚ್ಚರಿಕೆ : ಡಿಹೆಚ್ಓ


ಜಿಲ್ಲೆಯಲ್ಲಿ ನಿರಂತರ ಮಳೆ: ನೀರು ನಿಲ್ಲದಂತೆ ಮುನ್ನೆಚ್ಚರಿಕೆ : ಡಿಹೆಚ್ಓ


ಬಳ್ಳಾರಿ, 08 ಜೂನ್ (ಹಿ.ಸ.)

ಆ್ಯಂಕರ್ : ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಮಳೆ ನೀರು ನಿಲ್ಲದಂತೆ ತಡೆಯಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಸೂಚಿಸಿದ್ದಾರೆ.

ಬಳ್ಳಾರಿ ನಗರದ ಹಲವು ವಾರ್ಡ್ ಹಾಗೂ ಪ್ರದೇಶಗಳಲ್ಲಿ ವಿವಿಧ ಕಾರಣಗಳಿಂದ ಮಳೆ ನೀರು ಸಂಗ್ರಹಣೆಯಾಗಿದ್ದು, ಇದು ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಆಪತ್ತನ್ನು ತಂದೊಡ್ಡಬಹುದು. ಭಾರಿ ಮಳೆಯು ಕುಡಿಯುವ ನೀರಿನ ಸರಬರಾಜನ್ನು ಕಲುಷಿತಗೊಳಿಸುವುದಲ್ಲದೆ, ಮೂಲಸೌಕರ್ಯಗಳಿಗೆ ಹಾನಿ ಉಂಟುಮಾಡುತ್ತದೆ. ಅಲ್ಲದೆ, ನಿಂತ ನೀರು ರೋಗಾಣುಗಳ ಸಂತಾನೋತ್ಪತ್ತಿ ಕೇಂದ್ರವಾಗುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆಯು ತಕ್ಷಣವೇ ರೋಗ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲಿದೆ ಎಂದು ಅವರು ತಿಳಿಸಿದ್ದಾರೆ.

ರೋಗವಾಹಕಗಳಿಂದ ಹರಡುವ ರೋಗಗಳು : ಟೈರ್ಗಳು, ಕೂಲರ್ಗಳು ಮತ್ತು ರಸ್ತೆ ಗುಂಡಿಗಳಲ್ಲಿ ನಿಲ್ಲುವ ಮಳೆನೀರು ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್ಗುನ್ಯಾ ಹರಡುವ ಸೊಳ್ಳೆಗಳಿಗೆ ಆಶ್ರಯತಾಣವಾಗುತ್ತದೆ.

ನೀರಿನಿಂದ ಹರಡುವ ರೋಗಗಳು : ಪ್ರವಾಹದ ನೀರು ಒಳಚರಂಡಿ ವ್ಯವಸ್ಥೆಯನ್ನು ಸೇರಿ ಕುಡಿಯುವ ನೀರನ್ನು ಕಲುಷಿತಗೊಳಿಸುವುದರಿಂದ ಕಾಲರಾ, ಟೈಫಾಯಿಡ್ ಮತ್ತು ಜಠರದುರಿತದ ಭೀತಿ ಎದುರಾಗುತ್ತದೆ.

ಸೋಂಕುಗಳು : ತೇವಾಂಶ ಮತ್ತು ಪ್ರವಾಹದ ನೀರಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಇನ್ಫೂ÷್ಲಯೆನ್ಸ, ಆಸ್ತಮಾ ಮತ್ತು ಶಿಲೀಂಧ್ರಗಳ ಸೋಂಕು ಹೆಚ್ಚಾಗಬಹುದು. ಹಠಾತ್ ಪ್ರವಾಹ, ಭೂಕುಸಿತ, ಬೆಳೆ ವೈಫಲ್ಯ ಹಾಗೂ ಕಟ್ಟಡಗಳ ಕುಸಿತದಿಂದಾಗಿ ಜನ-ಜಾನುವಾರುಗಳ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಆರೋಗ್ಯ ಇಲಾಖೆಯಿಂದ ಕ್ರಮ :

ಸೊಳ್ಳೆ ಮತ್ತು ಲಾರ್ವಾ ನಿಯಂತ್ರಣ : ನಿಂತ ನೀರನ್ನು ಖಾಲಿ ಮಾಡಲು ಸಮುದಾಯ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ಸೊಳ್ಳೆಗಳ ಜೈವಿಕ ನಿಯಂತ್ರಣಕ್ಕಾಗಿ ಕೊಳಗಳು ಮತ್ತು ನಿರಂತರ ಜಲಮೂಲಗಳಿಗೆ ಲಾರ್ವಾ ಭಕ್ಷಕ ಮೀನುಗಳನ್ನು (ಗ್ಯಾಂಬೂಸಿಯಾ ಅಥವಾ ಗಪ್ಪಿ) ಬಿಡಲಾಗುವುದು. ಹೆಚ್ಚಿನ ಅಪಾಯವಿರುವ ವಲಯಗಳಲ್ಲಿ ಲಾರ್ವಿಸೈಡ್ಗಳ ಬಳಕೆ ಮತ್ತು ಫಾಗಿಂಗ್ ಮಾಡಲಾಗುವುದು.

ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ :

ಸ್ಥಳೀಯ ನೀರು ಸರಬರಾಜನ್ನು ನಿರಂತರವಾಗಿ ಪರಿಶೀಲಿಸಿ, ಅಗತ್ಯವಿರುವ ಪ್ರದೇಶಗಳಿಗೆ ಕ್ಲೋರಿನೇಷನ್ ಮಾತ್ರೆಗಳನ್ನು ವಿತರಿಸಲಾಗುವುದು. ನೀರು ತುಂಬಿದ ಪ್ರದೇಶಗಳ ತ್ವರಿತ ಒಳಚರಂಡಿ ವ್ಯವಸ್ಥೆ ಮತ್ತು ಸೋರುತ್ತಿರುವ ಪೈಪ್ಲೈನ್ಗಳ ದುರಸ್ತಿಗೆ ಮುನ್ಸಿಪಲ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುವುದು.

ವೈದ್ಯಕೀಯ ಸಿದ್ಧತೆ ಮತ್ತು ಕಣ್ಗಾವಲು :

ಜಲಾವೃತ ಮತ್ತು ಗ್ರಾಮೀಣ ಪ್ರದೇಶಗಳಿಗೆ ತಕ್ಷಣದ ಚಿಕಿತ್ಸೆ ನೀಡಲು ಸಂಚಾರಿ ಆರೋಗ್ಯ ತಂಡಗಳನ್ನು ನಿಯೋಜಿಸಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜ್ವರದ ಔಷಧಗಳು, ಪ್ರತಿಜೀವಕಗಳು, ಮಲೇರಿಯಾ ನಿರೋಧಕಗಳು ಮತ್ತು ಒ.ಆರ್.ಎಸ್ ಪಾಕೆಟ್ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಲಾಗುವುದು. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ತ್ವರಿತ ಪ್ರತಿಕ್ರಿಯೆ ತಂಡಗಳನ್ನು ರಚಿಸಲಾಗಿದೆ.

ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಪ್ರಮುಖ ಸಲಹೆಗಳು :

ಸಾರ್ವಜನಿಕರು ಕಡ್ಡಾಯವಾಗಿ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು. ತರಕಾರಿ ಮತ್ತು ಧಾನ್ಯಗಳನ್ನು ಸ್ವಚ್ಛವಾಗಿ ತೊಳೆದೇ ಬಳಸಬೇಕು. ನಿರಂತರ ಜ್ವರ ಕಾಣಿಸಿಕೊಂಡಲ್ಲಿ ವಿಳಂಬ ಮಾಡದೆ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಮನೆಗಳ ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಅಳವಡಿಸುವುದು ಮತ್ತು ರಕ್ಷಣಾತ್ಮಕ ಉಡುಪುಗಳನ್ನು ಧರಿಸುವ ಮೂಲಕ ಸೊಳ್ಳೆ ಕಡಿತದಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು.

ಹವಾಮಾನ ವೈಪರೀತ್ಯ ಹಾಗೂ ಮುಂಚಿನ ಎಚ್ಚರಿಕೆ ವ್ಯವಸ್ಥೆಗಳ ಬಗ್ಗೆ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ಆತಂಕಪಡದೆ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಡಿಹೆಚ್ಓ ಡಾ.ಯಲ್ಲಾ ರಮೇಶ್ ಬಾಬು ಅವರು ವಿನಂತಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande