ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಸಾಧಕರಿಗೆ ಸನ್ಮಾನ
ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಸಾಧಕರಿಗೆ ಸನ್ಮಾನ ಅಂತಾರಾಷ್ಟ್ರೀಯ
ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ವಿಶ್ವ ವಿಪ್ರರ ದಿನಾಚರಣೆ ಕಾರ್ಯಕ್ರಮದಲ್ಲಿ  ಬ್ರಾಹ್ಮಣ ಸಂಘದ ನಿಕಟಪೂರ್ವ ಕಾಯದರ್ಶಿ ಜೆ.ಎಸ್.ಜಯತೀರ್ಥ ಕೋಲಾರಮ್ಮ ದೇವಾಲಯದ ಅರ್ಚಕರಾದ ಸೋಮಶೇಖರ ದೀಕ್ಷಿತ್ ಅವರನ್ನು ಸನ್ಮಾನಿಸಲಾಯಿತು.


ಕೋಲಾರ, ೦೮ ಜೂನ್ (ಹಿ.ಸ) :

ಆ್ಯಂಕರ್ : ಭಾರತ ಮಾತ್ರವಲ್ಲದೇ ಪ್ರಪಂಚದಾದ್ಯ0ತವಿರುವ ಬ್ರಾಹ್ಮಣ ಸಮುದಾಯದವರು ಸಮಾಜಕ್ಕೆ ನೀಡಿರುವ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೊಡುಗೆಗಳು ಅಪಾರವಾಗಿದ್ದು, ಸಮುದಾಯ ಸಂಘಟಿತವಾಗಬೇಕು ಎಂದು ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಕೆ.ಎನ್.ಆನಂದಮೂರ್ತಿ ತಿಳಿಸಿದರು.

ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ನಗರದ ಪಿಸಿ ಬಡಾವಣೆಯ ಗಾಯತ್ರಿ ಪ್ರಾರ್ಥನಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಪ್ರರ ದಿನಾಚರಣೆ ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕರಾದ ಬ್ರಾಹ್ಮಣ ಸಂಘದ ನಿಕಟಪೂರ್ವ ಕಾಯದರ್ಶಿ ಜೆ.ಎಸ್.ಜಯತೀರ್ಥ, ಕೋಲಾರಮ್ಮ ದೇವಾಲಯದ ಅರ್ಚಕರಾದ ಸೋಮಶೇಖರ ದೀಕ್ಷಿತ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ವೇದಾಧ್ಯಯನಕ್ಕೆ ಒತ್ತು ನೀಡಿ, ಸಂಧ್ಯಾವ0ದನೆ ನಿತ್ಯ ಮಾಡಬೇಕು, ನಮ್ಮ ಬ್ರಾಹ್ಮಣ್ಯ ಉಳಿಸಿಕೊಳ್ಳಲು ಒಂದಾಗಬೇಕು, ಸಮುದಾಯದ ವಿರುದ್ದ ನಡೆಯುವ ಕುಚೋದ್ಯದ ಹೇಳಿಕೆಗಳ ವಿರುದ್ದ ಸಂಘಟಿತರಾಗಿ ನಾವು ಹೋರಾಡಲು ಸಜ್ಜುಗೊಳ್ಳಬೇಕು ಎಂದರು.

ಸನ್ಮಾನ ಸ್ವೀಕರಿಸಿದ ಬ್ರಾಹ್ಮಣ ಸಂಘದ ನಿಕಟಪೂರ್ವ ಕಾಯದರ್ಶಿ ಜೆ.ಎಸ್.ಜಯತೀರ್ಥ ಮಾತನಾಡಿ, ನಿತ್ಯ ಅನುಷ್ಠಾನಗಳ ಮೂಲಕವೇ ಒಬ್ಬ ಬ್ರಾಹ್ಮಣ ವಿಪ್ರನಾಗುತ್ತಾನೆ, ಸಮುದಾಯದಲ್ಲಿ ಭಿನ್ನಮತ ಅಗತ್ಯವಿಲ್ಲ,ನಾವೆಲ್ಲಾ ಒಂದೇ ಎಂಬ ಸತ್ಯ ಅರಿತು ಮುನ್ನಡೆಯೋಣ ಎಂದರು.

ಜಿಲ್ಲಾ ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಹಾಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ನಂದವರಿಕ ಬ್ರಾಹ್ಮನ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕಾಳಹಸ್ತಿಪುರ ಕೆ.ವಿ.ನಾಗರಾಜ್ ಮಾತನಾಡಿ, ಬ್ರಾಹ್ಮಣ್ಯ ಪಾಲಿಸೋಣ, ಉಳಿಸೋಣ ಈ ವಿಷಯದಲ್ಲಿ ಯುವಕರು ಹೆಚ್ಚು ಕಾರ್ಯಪ್ರವೃತ್ತರಾಗಿ ವೇದಾಧ್ಯಯನ ಮುಂದುವರೆಸಿ, ಉತ್ತಮ ಶಿಕ್ಷಣ ಪಡೆದು ಸಾಧಕರಾಗಿ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಕೋಲಾರಮ್ಮ ದೇವಾಲಯದ ಅರ್ಚಕರಾದ ಸೋಮಶೇಖರ ದೀಕ್ಷಿತ್ ಮಾತನಾಡಿ, ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ನೀಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ, ನಾವು ನಮ್ಮ ಸಂಸ್ಕೃತಿ, ಪರ0ಪರೆ ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯಚಟುವಟಿಕೆ ಮುಂದುವರೆಸಬೇಕು ಎಂದರು. ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿ.ಎಸ್.ಚಂದ್ರಶೇಖರ್ ಮಾತನಾಡಿ, ಯುವಕರು ಸಂಘಟನೆಗೆ ಬನ್ನಿ, ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮೂಲಕ, ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸಬೇಕು, ಸಕ್ರಿಯವಾಗಿ ಸಮುದಾಯದ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಿ ಎಂದು ತಿಳಿಸಿದರು.

ವಿಪ್ರದಿನಾಚರಣೆ ಕುರಿತು ಉಪನ್ಯಾಸ ನೀಡಿದ ಗುರುಗಾಳದ ರಾಮಕೃಷ್ಣಭಟ್ಟರು ಮತ್ತು ಶಂಕರ ಮಠದ ಧರ್ಮಾಧಿಕಾರಿ ಜೆ.ಎನ್.ರಾಮಕೃಷ್ಣ, ಭಾರತೀಯ ದಾರ್ಶನಿಕ, ರಾಜತಾಂತ್ರಿಕ ಹಾಗೂ ಅರ್ಥಶಾಸ್ತಜ್ಞರಾದ ಆಚಾರ್ಯ ಚಾಣಕ್ಯರವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಸಮುದಾಯದ ಹೆಮ್ಮೆಯ ಸಂಕೇತವಾಗಿ ಆಚರಿಸಲಾಗುತ್ತದೆ. ಆಚಾರ್ಯ ಚಾಣಕ್ಯರ ಸ್ಮರಣೆ ಮೂಲಕ ಕೌಟಿಲ್ಯ ಎಂದೂ ಪ್ರಸಿದ್ಧರಾಗಿರುವ ಚಾಣಕ್ಯರು, ಪ್ರಾಚೀನ ಭಾರತದಲ್ಲಿ ಸುಶಾಸನ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಬುನಾದಿ ಹಾಕಿದವರು. ಅವರ ಆದರ್ಶಗಳು ಮತ್ತು ಚಿಂತನೆಗಳನ್ನು ಸ್ಮರಿಸುವುದು ವಿಪ್ರರಾದ ನಮ್ಮ ಕರ್ತವ್ಯ ಮತ್ತು ಅವರು ಮಾಡಿದ ಸಾಧನೆ ವಿಪ್ರರ ಹೆಮ್ಮೆ ಎಂದು ತಿಳಿಸಿ, ವೇದ ಮತ್ತು ಸಂಸ್ಕೃತ ಅಧ್ಯಯನಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡ ಹೆಚ್.ಉದಯಕುಮಾರ್ ಮಾತನಾಡಿದರು. ಸಮುದಾಯದ ಮುಖಂಡರಾದ ಡಾ. ಎಂ.ವಿ.ಜಯರಾ0, ಡಾ. ವಿ. ಎಸ್. ಕೃಷ್ಣಮೂರ್ತಿ, ಹೋಳಲಿ ಪ್ರಕಾಶ್, ಹಿರಿಯ ವಕೀಲ ಸಾ.ನಾ.ಮೂರ್ತಿ, ಹೆಚ್ ಕೆ ರಾಘವೇಂದ್ರ, ಹಾಬಿ ರಮೇಶ್, ವಿನಯ ದೀಕ್ಷಿತ್, ಶ್ರೀನಿವಾಸಪುರದ ದಿವಾಕರ, ಸುಬ್ರಹ್ಮಣ್ಯ ಮತ್ತು ಇತರೆ ಅಸಂಖ್ಯಾತ ಅಭಿಮಾನಿಗಳಿದ್ದರು.

ಕಾರ್ಯಕ್ರಮ ರಾಮಕೃಷ್ಣ ಭಟ್ಟರು ಮತ್ತು ಜೆ.ಎನ್.ರಾಮಕೃಷ್ಣರ ವೇದಘೋಷದೊಂದಿಗೆ ಆರಂಭವಾಯಿತು. ಮಹಾಸಭಾದ ಸವಿನಯ್ ಸ್ವಾಗತಿಸಿ, ಧನ್ಯ ಪ್ರಾರ್ಥಿಸಿ,ಜೆ.ಎನ್.ರಾಮಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಧ್ಯಾರಾವ್ ನಿರೂಪಿಸಿ, ವಂದಿಸಿದರು. ಶ್ರೀನಿಧಿ, ಎಂ.ಪಿ.ಆನ0ದರಿ0ದ ಗಾಯನ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande