ತೇರಹಳ್ಳಿ ಗ್ರಾಮದಲ್ಲಿ ಬದಲಾವಣೆ ಪರ್ವ ; ದಲಿತರಿಗೆ ಸವರ್ಣಿಯರ ಮನೆಯಲ್ಲಿ ಆತಿಥ್ಯ
ತೇರಹಳ್ಳಿ ಗ್ರಾಮದಲ್ಲಿ ಬದಲಾವಣೆಯ ಪರ್ವ ; ದಲಿತರಿಗೆ ಸವರ್ಣಿಯರ ಮನೆಯಲ್ಲಿ ಆತಿಥ್ಯ
ದಲಿತರನ್ನು ತಮ್ಮ ಮನೆಗೆ ಆಹ್ವಾನಿಸಿ ಆಥಿತ್ಯ ನೀಡಿದ ಕೋಲಾರ ನಗರ ಹೊರವಲಯದ ಭವ್ಯ ಮತ್ತು ಕಾವ್ಯ ಸೋದರಿಯರನ್ನು ಅರಿವು ಭಾರತ ತಂಡದಿAದ ಸನ್ಮಾನಿಸಲಾಯಿತು.


ಕೋಲಾರ, ೦೮ ಜೂನ್ (ಹಿ.ಸ) :

ಆ್ಯಂಕರ್ : ಭಾರತ ಈಗಾಗಲೇ ಸ್ವಾತಂತ್ರö್ಯ ಅಮೃತ ಮಹೋತ್ಸವ ಆಚರಿಸಿದೆ. ಆದರೆ, ಸಂವಿಧಾನದ ಆಶಯಗಳು ದಮನಿತರಿಗೆ ರಕ್ಷಣೆ ಮತ್ತು ಸಮಾನತೆ ನೀಡಿಲ್ಲ. ಸಂವಿಧಾನ ಎಲ್ಲಾ ಜನಾಂಗಕ್ಕೂ ಸಮಾನತೆ ಕಲ್ಪಿಸಿದೆ. ಏಳು ದಶಕಗಳ ನಂತರ ಸಹ ತಾರತಮ್ಯ ಮತ್ತು ದಮನಕಾರಿ ನೀತಿ ಮುಂದುವರೆದಿದೆ. ದಲಿತರು ದೇವಾಲಯಗಳು ಪ್ರವೇಶ ಮಾಡುವುದನ್ನು ನಿರ್ಬಂಧಿಸಲಾಗಿದೆ. ಮೇಲ್ವರ್ಗದ ಜನರ ಮನೆಗಳಿಗೆ ದಲಿತರಿಗೆ ಪ್ರವೇಶವಿಲ್ಲ. ಈಗಲೂ ದಲಿತರನ್ನು ಮೇಲ್ವರ್ಗದ ಜನರು ತಮ್ಮ ಮನೆಗಳಿಗೆ ಮುಕ್ತವಾಗಿ ಆಹ್ವಾನ ನೀಡುತ್ತಿಲ್ಲ.

ಬದಲಾವಣೆ ಎಂಬುದು ಜಗದ ನಿಯಮ. ಈ ನಿಟ್ಟಿನಲ್ಲಿ ಅರಿವು ಭಾರತ ಕಳೆದ ಹನ್ನೆರಡು ವರ್ಷಗಳಿಂದ ದಲಿತರನ್ನು ಸಮಾನತೆಯಿಂದ ಕಾಣಲು ದಲಿತರ ಗೃಹ ಪ್ರವೇಶ ಸಮತೆಯ ಚಹ ಹಾಗೂ ದೇವಾಲಯಗಳ ಪ್ರವೇಶ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಿ ಸಮಾನತೆ ಮತ್ತು ಭ್ರಾತೃತ್ವದ ಸಂದೇಶವನ್ನು ಸಾರುತ್ತಿದೆ.

ಕೋಲಾರ ನಗರಕ್ಕೆ ಕೇವಲ ಮೂರು ಕಿ.ಮೀ. ದೂರದಲ್ಲಿರುವ ತೇರಹಳ್ಳಿ ಗ್ರಾಮದಲ್ಲಿ ಈಗಲೂ ಅಸ್ಪೃಶ್ಯತೆ ಬೇರುಗಳು ಆಳವಾಗಿ ಊರಿವೆ. ತೇರಹಳ್ಳಿ ಗ್ರಾಮದ ಭವ್ಯ ಮತ್ತು ಕಾವ್ಯ ಸಹೋದರಿಯರು ಸಹ ಭೋಜನದ ಮೂಲಕ ಸಮಾನತೆಯ ಸಂದೇಶವನ್ನು ಸಾರಿದರು. ದಲಿತರನ್ನು ತಮ್ಮ ಮನೆಗೆ ಆಹ್ವಾನಿಸಿ, ಆತಿಥ್ಯ ನೀಡಿ ಮನುಷ್ಯರೆಲ್ಲಾ ಒಂದೇ ಎಂಬುವ ಪ್ರೀತಿಯ ತಂಗಾಳಿ ಬೀಸಿದರು. ಈ ಸಂದರ್ಭದಲ್ಲಿ ಅರಿವು ಭಾರತ ತಂಡದ ಶಿವಪ್ಪ ಮತ್ತು ಇತರ ಗೆಳೆಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಚಲ ಗುರು ಸುಬ್ಬಾರೆಡ್ಡಿ ಶಿಲಾಯುಗದಲ್ಲಿ ಇಲ್ಲದ ಎದೆಷ್ಟೋ ವಾಡಿಕೆಗಳು ಮತ್ತು ತಾರತಮ್ಯಗಳು ಈಗಿನ ಆಧುನಿಕ ಸಮಾಜವನ್ನು ಹಾಳುಗೆಡುವುತ್ತಿವೆ. ಎಲ್ಲಿಂದ ಬಂದೆವೆAಬ ಸಣ್ಣ ತಿಳುವಳಿಕೆ ಇದ್ದರೆ ಎಲ್ಲರನ್ನೂ ಸಮಾನವಾಗಿ ಕಾಣುವ ಗುಣ ಬೆಳೆಯುತ್ತದೆ ಎಂದು ಹೇಳಿದರು.

ಕೋಲಾರ ಬೆಟ್ಟದ ಮೇಲಿನ ತೇರುಹಳ್ಳಿ ಗ್ರಾಮದ ಭವ್ಯ ಮತ್ತು ಕಾವ್ಯ ಅವರ ಮನೆಯಲ್ಲಿ ಅರಿವು ಭಾರತ ಸಂಸ್ಥೆ ಏರ್ಪಡಿಸಿದ್ದ ಸಮಾನತೆಗಾಗಿ ಸಹಭೋಜನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇಮನ, ಕೈವಾರ ತಾತನು ತೋರಿದ ದಾರಿಯನ್ನು ಮೆಲುಕು ಹಾಕಬೇಕು. ಮಧ್ಯದಲ್ಲಿ ಹುಟ್ಟಿದ ಜಾತಿಯ ಹುಚ್ಚನ್ನು ಬಿಟ್ಟು ಎಲ್ಲರನ್ನೂ ಗೌರವದಿಂದ ಕಾಣಬೇಕು ಎಂದರು.

ಬದಲಾವಣೆಗೆ ಯುವಕರು ಮುಂದಾಗಬೇಕು. ಯುವಕರಲ್ಲಿ ಧೈರ್ಯ ಇರುವುದರಿಂದ ಅಸ್ಪೃಶ್ಯತೆಯಂತಹ ಅಮಾನವೀಯ ನಡೆಯನ್ನು ತಿದ್ದಬಲ್ಲರು. ಧೈರ್ಯದಿಂದಷ್ಟೇ ಅಜ್ಞಾನವನ್ನು ಸರಿತಿದ್ದುಕೊಳ್ಳುಲು ಸಾಧ್ಯ ಎಂದು ಹಿರಿಯ ದಲಿತ ಮುಖಂಡ ಟಿ.ವಿಜಯಕುಮಾರ್ ಹೇಳಿದರು.

ಬೆಟ್ಟದ ಮೇಲಿನ ಹಳ್ಳಿಗಳಿಗೆ ರಸ್ತೆ ಬಂದ ಮೇಲೆ ರಿಯಲ್ ಎಸ್ಟೇಟ್ ದಂಧೆ ಹೆಚ್ಚಾಗಿದ್ದು ಸ್ಥಳೀಯರಿಗೆ ತೊಂದರೆಯಾಗಿದೆ. ಇಲ್ಲಿನ ಜನರ ಹಲವು ಸಂಕಷ್ಟಗಳಿಗೆ ಆಡಳಿತ ಸ್ಪಂದಿಸಬೇಕು ಎಂದು ಮಹಿಳಾ ಹೋರಾಟಗಾರ್ತಿ ಮಮತಾ ರೆಡ್ಡಿ ಆತಂಕ ವ್ಯಕ್ತಪಡಿಸಿದರು.

ತೇರಹಳ್ಳಿಯ ಈಶ್ವರ ದೇವಾಲಯದಲ್ಲಿ ಜಾತಿತಾರತಮ್ಯವಿಲ್ಲದೆ ಪೂಜೆ ಸಲ್ಲಿಸಿದ ಬಳಿಕ, ಭವ್ಯ ಮತ್ತು ಕಾವ್ಯ ಅವರ ಮನೆಯಲ್ಲಿ ಸಹಭೋಜನ ನಡೆಯಿತು. ಸ್ಥಳೀಯ ದಲಿತರೂ ಸೇರಿದಂತೆ ಎಲ್ಲಾ ಸಮುದಾಯದವರು ಒಟ್ಟಿಗೆ ತಿಂಡಿ ಮಾಡಿದರು.

ಗ್ರಾಮವಿಕಾಸ ಮತ್ತು ರೋಟರಿ ವತಿಯಿಂದ ‘ನೆನಪಿನ ಗಿಡ’ ನೆಡಲಾಯಿತು. ಇದೇ ಸಂದರ್ಭದಲ್ಲಿ ಗೋಪಿನಾಥ ಕರವಿ ನಾಯಕತ್ವದ ‘ಗ್ರಾಮ ಬೆಳಕು’ ಸಂಸ್ಥೆಯ ಉದ್ಘಾಟನೆ ಮಾಡಲಾಯಿತು.

ಮುಜರಾಯಿ ತಹಶೀಲ್ದಾರ್ ಶ್ರೀನಿವಾಸರೆಡ್ಡಿಯವರು ಸಹಭೋಜನವನ್ನು ಉದ್ಘಾಟಿಸಿದರು. ಡಿ.ಆರ್.ರಾಜಪ್ಪ ಅರಿವು ಭಾರತ ಆಶಯಗೀತೆಯನ್ನು ಹಾಡಿದರು, ವಾರಿಧಿ ಮಂಜುನಾಥರೆಡ್ಡಿ ಪ್ರತಿಜ್ಞಾವಿಧಿ ಬೋಧಿಸಿದರು, ಮುಂಜುಳ ಕೊಂಡರಾಜನಹಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು, ಗೋಪಿನಾಥ್ ಕರವಿ ವಂದಿಸಿದರು.

ಕಾರ್ಯಕ್ರಮದಲ್ಲಿ ಓಂ ಪ್ರಕಾಶ್, ಲೋಕೇಶ್ ಹಿಂಡಿಹನಾಳ, ಹೂವಹಳ್ಳಿ ನಾಗರಾಜ್, ಮಂಜು ಕನ್ನಿಕ, ಟೈಗರ್ ವೆಂಕಟೇಶ್, ಗ್ರಾಮದ ಟಿ ತಿಮ್ಮರಾಯಪ್ಪ, ಕೃಷ್ಣಪ್ಪ, ಚೌಡಪ್ಪ, ರವಿ ದಮ್ಮಮಿತ್ರ, ತೇಜಸ್ವಿನಿ, ಮನೋಜ್ ಪೆದ್ದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande