ಮಾವಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಸರ್ಕಾರಕ್ಕೆ ಜಿಲ್ಲಾಧಿಕಾರಿ ವರದಿ
ಮಾವಿಗೆ ಕನಿಷ್ಟ ಬೆಂಬಲ ಬೆಲೆ ನಿಗಧಿಪಡಿಸಲು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ವರದಿ
ಮಾವಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಸರ್ಕಾರಕ್ಕೆ ಜಿಲ್ಲಾಧಿಕಾರಿ ವರದಿ


ಕೋಲಾರ, ಜೂನ್ ೦೮(ಹಿ.ಸ) :

ಆ್ಯಂಕರ್ : ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯಲ್ಲಿನ ಧಾರಣೆ ಕುಸಿತದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೋಲಾರ ಜಿಲ್ಲೆಯ ಮಾವು ಬೆಳೆಗಾರರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ. ಬೆಳೆಗಾರರ ಹಿತದೃಷ್ಟಿಯಿಂದ ತೋತಾಪುರಿ ಮಾವಿಗೆ ಕನಿಷ್ಠ ಖರೀದಿ ದರ ನಿಗದಿಪಡಿಸುವಂತೆ ಹಾಗೂ ಬೆಲೆ ಬೆಂಬಲ ಯೋಜನೆಯನ್ನು ತಕ್ಷಣವೇ ಜಾರಿಗೊಳಿಸುವಂತೆ ಕೋರಿ ಕೋಲಾರ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದ ಸಹಕಾರ ಇಲಾಖೆಯ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಿದ್ದಾರೆ.

ಕೋಲಾರ ಜಿಲ್ಲೆಯ ಒಟ್ಟು ೪೪,೭೧೬.೨೪ ಹೆಕ್ಟೇರ್ ಮಾವು ಬೆಳೆಯುವ ಪ್ರದೇಶದಲ್ಲಿ ಶೇ. ೭೦ ರಷ್ಟು ವಿಸ್ತೀರ್ಣದಲ್ಲಿ ತೋತಾಪುರಿ ತಳಿಯನ್ನೇ ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಂಸ್ಕರಣಾ ಘಟಕಗಳಿಗೆ ಪೂರೈಸುವ ತೋತಾಪುರಿ ಮಾವಿಗೆ ಪ್ರತಿ ಕಿಲೋಗ್ರಾಂಗೆ ಕೇವಲ ₹೫.೦೦ ದರ ಲಭ್ಯವಾಗುತ್ತಿದೆ. ಆದರೆ, ಮಾವಿನ ಉತ್ಪಾದನಾ ವೆಚ್ಚವು ಪ್ರತಿ ಕಿಲೋಗ್ರಾಂಗೆ ₹೮.೫೫ ರಷ್ಟಿದ್ದು, ರೈತರು ತಾವು ಹೂಡಿದ ಬಂಡವಾಳಕ್ಕಿAತ ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆಗೆ ಸಿಲುಕಿ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ, ಹವಾಮಾನ ವೈಪರೀತ್ಯದ ಪರಿಣಾಮವಾಗಿ ಪ್ರಸಕ್ತ ಸಾಲಿನಲ್ಲಿ ತೋತಾಪುರಿ ಇಳುವರಿ ಶೇ. ೫೦ ರಷ್ಟು ಮತ್ತು ಇತರೆ ತಳಿಗಳ ಇಳುವರಿ ಶೇ. ೩೦ ರಷ್ಟು ಮಾತ್ರ ನಿರೀಕ್ಷಿಸಲಾಗಿದೆ.

ಕೋಲಾರ ಜಿಲ್ಲೆಯಲ್ಲಿ ಕೇವಲ ೦೪ ಸಂಸ್ಕರಣಾ ಘಟಕಗಳಿದ್ದು, ಇವುಗಳ ಒಟ್ಟು ದೈನಂದಿನ ಸಾಮರ್ಥ್ಯ ೯೦೦ ಟನ್ಗಳಷ್ಟಿದೆ. ಪರಿಣಾಮವಾಗಿ, ಜಿಲ್ಲೆಯ ರೈತರು ಅನಿವಾರ್ಯವಾಗಿ ನೆರೆಯ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ೪೧ ಘಟಕಗಳ (ಅಂದಾಜು ೧೨,೩೦೦ ಟನ್ ಸಾಮರ್ಥ್ಯ) ಮೇಲೆ ಅವಲಂಬಿತರಾಗುವAತಾಗಿದೆ. ರೈತರ ಆರ್ಥಿಕ ನಷ್ಟವನ್ನು ತಪ್ಪಿಸಲು, ಕಳೆದ ಸಾಲಿನಂತೆ ಈ ವರ್ಷವೂ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

೨೦೨೫-೨೬ ನೇ ಸಾಲಿನಲ್ಲಿ ಈ ಯೋಜನೆಯಡಿ ಒಟ್ಟು ₹೧೦೧.೦೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಮಾರುಕಟ್ಟೆ ಮಧ್ಯಪ್ರವೇಶದಡಿ ಪ್ರತಿ ಕ್ವಿಂಟಾಲ್ಗೆ ₹೧,೬೧೬ ದರ ನಿಗದಿಪಡಿಸಲಾಗಿತ್ತು.ಆ ಸಂದರ್ಭದಲ್ಲಿ ಪ್ರತಿ ಎಕರೆಗೆ ೪೦ ಕ್ವಿಂಟಾಲ್ನ0ತೆ, ಗರಿಷ್ಠ ೫ ಎಕರೆಗೆ (೨೦೦ ಕ್ವಿಂಟಾಲ್) ಮಿತಿ ವಿಧಿಸಿ ೧೫,೧೦೩ ರೈತರಿಂದ ಮಾವು ಖರೀದಿಸಿ ₹೪೧.೯೨ ಕೋಟಿ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ಧಾರಣೆ ತೀವ್ರ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ, ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ಯೋಜನೆಯನ್ನು ಜಾರಿಗೊಳಿಸಿದರೆ, ಸಂಕಷ್ಟದಲ್ಲಿರುವ ಹೆಚ್ಚಿನ ಮಾವು ಬೆಳೆಗಾರರಿಗೆ ಆರ್ಥಿಕ ನೆರವು ಒದಗಿಸಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande