ಕೋಲಾರ ಜಿಲ್ಲಾ ಅರಣ್ಯ ಅಧಿಕಾರಿ ವಿರುದ್ಧ ಭೂ ಸಂತ್ರಸ್ಥರ ಮನವಿ
ಕೋಲಾರ ಜಿಲ್ಲಾ ಅರಣ್ಯ ಅಧಿಕಾರಿಯ ವಿರುದ್ಧ ಭೂ ಸಂತ್ರಸ್ಥರಿAದ ಮನವಿ ಸಲ್ಲಿಕೆ
ಕೋಲಾರ ಜಿಲ್ಲಾ ಅರಣ್ಯಾಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಸರ್ಕಾರದ ಜೀವಶಾಸ್ತç ಹಾಗೂ ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.


ಕೋಲಾರ, ೦೮ ಜೂನ್ (ಹಿ.ಸ) :

ಆ್ಯಂಕರ್ : ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು ಕಂದಾಯ ಭೂಮಿಯಲ್ಲಿರುವ ರೈತರ ಜಮೀನಗಳಿಗೆ ಅಕ್ರಮವಾಗಿ ಪ್ರವೇಶ ಮಾಡಿ ಬೆಳೆಗಳು ಹಾಗೂ ಯಂತ್ರೋಪಕರಣಗಳನ್ನು ನಾಶ ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಆದೇಶಕ್ಕೂ ಮನ್ನಣೆಯಿಲ್ಲವಾಗಿದೆ ಕೂಡಲೇ ಅರಣ್ಯ ಭೂಮಿ ಯಾವುದು ಮತ್ತು ಕಂದಾಯ ಇಲಾಖೆಗೆ ಒಳಪಡುವ ಭೂಮಿ ಯಾವುದು ಎಂಬುದನ್ನು ಪ್ರತ್ಯೇಕ ಮಾಡಿ ರೈತರಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಅರಣ್ಯ ಮತ್ತು ಜೀವಶಾಸ್ತ್ರ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಅವರಿಗೆ ಜಿಲ್ಲಾ ಭೂ ಸಂತ್ರಸ್ತರ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಿದರು.

ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಆರ್ ಶ್ರೀನಿವಾಸ್ ಮನವಿ ಮಾಡಿ ತಾಲ್ಲೂಕಿನ ಹುತ್ತೂರು ಹೋಬಳಿ ಶಿಳ್ಳೆಂಗೆರೆ, ಹರಟಿ, ಮಲ್ಲಂಡಹಳ್ಳಿ, ಕೋಟಿಗಾನಹಳ್ಳಿ, ಅಬ್ಬಣಿ ಹಾಗೂ ಹರಳಕುಂಟೆ ಜಮೀನಿನ ಕಂದಾಯ ದಾಖಲೆಗಳನ್ನು ಮತ್ತು ಅರಣ್ಯ ಇಲಾಖೆಯ ೧೯೪೧ ಫಾರೆಸ್ಟ್ ಸೆಟ್ಲ್ಮೆಂಟ್ ಆದೇಶವನ್ನು ಪರಿಶೀಲಿಸದೆ ಅಂದಿನ ಭೂ ದಾಖಲೆಗಳ ಸರ್ವೆಯರ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ೧೦೦ ವರ್ಷದ ಹಿಂದಿನ ದಾಖಲೆಗಳನ್ನು ಮರೆ ಮಾಚಿದ್ದಾರೆ. ರೈತರಿಗೆ ನೀಡಿದ್ದ ಕಂದಾಯ ಭೂಮಿಯಲ್ಲಿನ ಬೆಳೆಗಳನ್ನು, ಪಾಲಿ ಹೌಸ್ ಕಾಂಪೌ0ಡ್, ಮರಗಳನ್ನು ಜೆಸಿಬಿಗಳ ಮೂಲಕ ಅರಣ್ಯ ಒತ್ತುವರಿಯ ಹೆಸರಿನಲ್ಲಿ ಪೊಲೀಸರ ಬೆಂಗಾಲಿನಲ್ಲಿ ನಾಶ ಮಾಡಿ ರೈತರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ವಿವರಿಸಿದರು.

ಹಿಂದೆ ಮಹಾರಾಜರ ಆಡಳಿತದಲ್ಲಿ ೧೯೨೩ ರ ಅವಧಿಯಲ್ಲಿಯೇ ಅರಣ್ಯ ಮತ್ತು ಕಂದಾಯ ಭೂಮಿ ಯಾವುದು ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ವಿನಾಕಾರಣ ಅರಣ್ಯ ಇಲಾಖೆಯು ರೈತರನ್ನು ಎತ್ತಿಕಟ್ಟುವ ಮೂಲಕ ನಿರಂತರವಾಗಿ ದೌರ್ಜನ್ಯ ನಡೆಸಿದ್ದಾರೆ ಕೂಡಲೇ ದಾಖಲೆಗಳನ್ನು ಪರಿಶೀಲನೆ ಮಾಡಿ ರೈತರಿಗೆ ನ್ಯಾಯ ಕೊಡುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಅರಣ್ಯ ಇಲಾಖೆಯ ಮನೋಜ್ ಕುಮಾರ್ ಮಾತನಾಡಿ ದಾಖಲೆಗಳನ್ನು ಪರಿಶೀಲನೆ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮಾಡಿ ಕಾನೂನು ಪ್ರಕಾರವಾಗಿ ನ್ಯಾಯ ಕೊಡಿಸುವ ಭರವಸೆ ನೀಡಿದರು ಭೂ ಸಂತ್ರಸ್ತರ ಹೋರಾಟ ಸಮಿತಿ ದೀಪಕ್ ಕುಮಾರ್ ಜೊತೆಯಲ್ಲಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande