ಶ್ರೀ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿ ಪೂರ್ವ ವಸತಿ ಕಾಲೇಜು ನೂತನ ಕಟ್ಟಡಗಳ ಲೋಕಾರ್ಪಣೆ
ಕೊಪ್ಪಳ, 02 ಮೇ (ಹಿ.ಸ.) : ಆ್ಯಂಕರ್ : ಅನ್ನ, ಅಕ್ಷರ, ಅರಿವು ಆರೋಗ್ಯ, ಆಧ್ಯಾತ್ಮದ ದಾಸೋಹದ ಕ್ಷೇತ್ರ ಶ್ರೀ ಗವಿಮಠ. ಈ ನಾಡಿನ ಮಕ್ಕಳ ಏಳ್ಗೆಗಾಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಿವುದರ ಜೊತೆಗೆ ಮುಖ್ಯವಾಗಿ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ
ಶ್ರೀ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿ ಪೂರ್ವ ವಸತಿ ಕಾಲೇಜು - ನೂತನ ಕಟ್ಟಡಗಳ ಲೋಕಾರ್ಪಣೆ


ಶ್ರೀ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿ ಪೂರ್ವ ವಸತಿ ಕಾಲೇಜು - ನೂತನ ಕಟ್ಟಡಗಳ ಲೋಕಾರ್ಪಣೆ


ಶ್ರೀ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿ ಪೂರ್ವ ವಸತಿ ಕಾಲೇಜು - ನೂತನ ಕಟ್ಟಡಗಳ ಲೋಕಾರ್ಪಣೆ


ಕೊಪ್ಪಳ, 02 ಮೇ (ಹಿ.ಸ.) :

ಆ್ಯಂಕರ್ : ಅನ್ನ, ಅಕ್ಷರ, ಅರಿವು ಆರೋಗ್ಯ, ಆಧ್ಯಾತ್ಮದ ದಾಸೋಹದ ಕ್ಷೇತ್ರ ಶ್ರೀ ಗವಿಮಠ. ಈ ನಾಡಿನ ಮಕ್ಕಳ ಏಳ್ಗೆಗಾಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಿವುದರ ಜೊತೆಗೆ ಮುಖ್ಯವಾಗಿ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಶ್ರೀ ಗವಿಮಠವು ಆಶ್ರಯ ತಾಣವಾಗಿದೆ. 1951ರಲ್ಲಿ ಕೆಲವೇ ವಿದ್ಯಾರ್ಥಿಗಳಿಂದ ಆರಂಭವಾದ ಶ್ರೀ ಗವಿಸಿದ್ದೇಶ್ವರ ಉಚಿತ ವಸತಿ ಹಾಗೂ ಪ್ರಸಾದ ನಿಲಯದಲ್ಲಿ ಇಂದು 5000 ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಬೆಳಗಿಸಿಕೊಳ್ಳುತ್ತಿದ್ದಾರೆ.

ಪ್ರಸ್ತುತ ಗ್ರಾಮಿಣ ಮಟ್ಟದಲ್ಲಿ ಉತ್ತಿರ್ಣರಾದ ಪ್ರತಿಭಾವಂತ ವಿದ್ಯಾರ್ಥಿನಿಯರು ಬಡತನ, ಬಸ್ಸಿನ ಪ್ರಯಾಣದ ಅನಾನುಕೂಲ, ನೀಟ್, ಸಿ.ಇ.ಟಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ದುಬಾರಿ ಶುಲ್ಕ ನೀಡಲಾಗದೆ ಅನೇಕ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಬಾರದೆಂದು ಇದನ್ನರಿತ ಶ್ರೀ ಗವಿಮಠವು ಕೊಪ್ಪಳ ನಗರದ 11ಕಿ.ಮೀ ದೂರದಲ್ಲಿ ಕೋಳೂರು -ಕಾಟ್ರಳ್ಳಿ ಸಮೀಪದ 48 ಎಕರೆ ಸ್ಥಳದಲ್ಲಿ ಒಟ್ಟು 1,500 ವಿದ್ಯಾರ್ಥಿನಿಯರಿಗಾಗಿ ಶ್ರೀ ಗವಿಸಿದ್ದೇಶ್ವರ ಗುರುಕುಲ ವಸತಿಯುಕ್ತ ಬಾಲಕಿಯರ ಪದವಿ ಪೂರ್ವ ಕಾಲೇಜ್ ಸಕಲ ಸೌಲಭ್ಯದೊಂದಿಗೆ ಸುಮಾರು 1,53,400ಚದರ ಅಡಿಯಲ್ಲಿ ಗುರುಕುಲದ ಬೃಹತ್ ಕಟ್ಟಡಗಳನ್ನು 60ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ದಿನಾಂಕ 03.05.2026ರಂದು ಬೆಳಿಗ್ಗೆ 10:00ಗಂಟೆಗೆ ದಯಮಾಡಿಸುವ ಪೂಜ್ಯರು, ಭಕ್ತರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande