ರಾಯಚೂರು : ಮಹಾನಗರ ಪಾಲಿಕೆಯಿಂದ ಸಹಾಯ ಧನ
ರಾಯಚೂರು, 02 ಮೇ (ಹಿ.ಸ.) : ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆ ವತಿಯಿಂದ 2026-27ನೇ ಸಾಲಿನ ಎಸ್.ಎಫ್.ಸಿ ಇತರೆ ಹಿಂದುಳಿದ ಕಲ್ಯಾಣ ಕಾರ್ಯಕ್ರಮಗಳಲ್ಲಿ ಪಾಲಿಕೆ ವ್ಯಾಪ್ತಿಗೆ ಬರುವ ಅರ್ಹ ಫಲಾನುಭವಿಗಳಿಂದ ಸಹಾಯ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಇತರೆ ಹಿಂದುಳಿದ ಜನಾಂಗದ ಎಂ.ಎ/ ಎಂ.ಎಸ್.ಸಿ/ ಎ
ರಾಯಚೂರು : ಮಹಾನಗರ ಪಾಲಿಕೆಯಿಂದ ಸಹಾಯ ಧನ


ರಾಯಚೂರು, 02 ಮೇ (ಹಿ.ಸ.) :

ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆ ವತಿಯಿಂದ 2026-27ನೇ ಸಾಲಿನ ಎಸ್.ಎಫ್.ಸಿ ಇತರೆ ಹಿಂದುಳಿದ ಕಲ್ಯಾಣ ಕಾರ್ಯಕ್ರಮಗಳಲ್ಲಿ ಪಾಲಿಕೆ ವ್ಯಾಪ್ತಿಗೆ ಬರುವ ಅರ್ಹ ಫಲಾನುಭವಿಗಳಿಂದ ಸಹಾಯ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಇತರೆ ಹಿಂದುಳಿದ ಜನಾಂಗದ ಎಂ.ಎ/ ಎಂ.ಎಸ್.ಸಿ/ ಎಂ.ಕಾ0/ ಎಂ.ಎಸ್.ಡಬ್ಲ್ಯೂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಗಳಿಗ ಸಹಾಯ ಧನಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ, ಭಾವಚಿತ್ರ-1, ಹಿಂದಿನ ವರ್ಷದ ಅಂಕಪಟ್ಟಿ, ಆಧ್ಯಾಯನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ, ಪ್ರವೇಶ ರಶೀದಿ ಹಾಗೂ ಬ್ಯಾಂಕ್ ಪಾಸ್ ಬುಕ್ನೊಂದಿಗೆ ದಿನಾಂಕ: 08.05.2026ರ ಸಂಜೆ 05ಗಂಟೆ ಒಳಗಾಗಿ ಸಲ್ಲಿಸಬಹುದಾಗಿದೆ.

ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸರಿಯಾದ ದಾಖಲಾತಿಗಳು ಸಲ್ಲಿಸದೆ ಇದ್ದ ಪಕ್ಷದಲ್ಲಿ ತಮಗ ಯಾವುದೇ ಹಿಂಬರಹ ಕಳುಹಿಸದೆ ನೇರವಾಗಿ ವಿಭಾಗದ ಸಿಬ್ಬಂದಿಯವರು ತಿರಸ್ಕೃತ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ನೋಟಿಸ್ ಬೊರ್ಡ್ ನೋಡಬಹುದಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande