
ಕೊಪ್ಪಳ, 02 ಮೇ (ಹಿ.ಸ.) :
ಆ್ಯಂಕರ್ : ಕೊಪ್ಪಳ ನಗರಸಭೆಯ ಆಸ್ತಿ ಮಾಲೀಕರಿಗೆ ಆರ್ಥಿಕ ವರ್ಷ 2026-27 ನೇ ಸಾಲಿಗೆ ಮಾತ್ರ ಅನ್ವಯಿಸುವಂತೆ 2026-27ನೇ ಸಾಲಿನ ಆಸ್ತಿ ತೆರಿಗೆಯನ್ನು ಶೇ.5 ರಷ್ಟು ರಿಯಾಯತಿಯೊಂದಿಗೆ ಪಾವತಿಸಲು ಮೇ 31 ವರೆಗೆ ಅವಧಿ ವಿಸ್ತರಿಸಲಾಗಿದೆ.
ಈ ಮೊದಲು ರಿಯಾಯತಿಯೊಂದಿಗೆ ತೆರಿಗೆ ಪಾವತಿಸಲು ಏಪ್ರಿಲ್ 30 ಕೊನೆಯ ದಿನವಾಗಿತ್ತು. ಪ್ರಸ್ತುತ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಆದೇಶದಂತೆ, ಈ ಸೌಲಭ್ಯವನ್ನು ಇನ್ನೊಂದು ತಿಂಗಳ ಕಾಲ ವಿಸ್ತರಿಸಿ ಆದೇಶಿಸಲಾಗಿದೆ. ಆದ್ದರಿಂದ ನಗರಸಭೆ ವ್ಯಾಪ್ತಿಯ ಎಲ್ಲಾ ಆಸ್ತಿ ಮಾಲೀಕರು ತಮ್ಮ ನಿವೇಶನಗಳು ಹಾಗೂ ಕಟ್ಟಡಗಳ ಆಸ್ತಿ ತೆರಿಗೆಯನ್ನು ಮೇ 31 ರೊಳಗಾಗಿ ಪಾವತಿಸಿ ಶೇ.5ರಷ್ಟು ರಿಯಾಯಿತಿಯ ಸದುಪಯೋಗ ಪಡೆದುಕೊಳ್ಳಬೇಕು.
ಇದೇ ವೇಳೆ ಬಾಕಿ ಇರುವ ನೀರಿನ ಕರ ಹಾಗೂ ವಿವಿಧ ಉದ್ದಿಮೆಗಳ ಪರವಾನಿಗೆ ಶುಲ್ಕಗಳನ್ನು ಸಹ ಪಾವತಿಸುವಂತೆ ಸೂಚಿಸಲಾಗಿದೆ. ತೆರಿಗೆದಾರರು ಖುದ್ದಾಗಿ ನಗರಸಭೆ ಕಚೇರಿಗೆ ಭೇಟಿ ನೀಡಿ ಅಥವಾ ಇ-ಸ್ವೀಕೃತಿ ವೆಬ್ಸೈಟ್ ಮೂಲಕ ಪಾವತಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರಾದ ಮಂಜುನಾಥ ಗುಂಡೂರ್ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್