ಬಳ್ಳಾರಿ : ಜಿಟಿಟಿಸಿ ಉದ್ಯೋಗಾಧಾರಿತ ತರಬೇತಿ
ಬಳ್ಳಾರಿ, 02 ಮೇ (ಹಿ.ಸ.) : ಆ್ಯಂಕರ್ : ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ವತಿಯಿಂದ ಬಳ್ಳಾರಿ ಕೇಂದ್ರದಲ್ಲಿ ವಿವಿಧ ಅಲ್ಪಾವಧಿ ತರಬೇತಿ ಕೋರ್ಸ್ಗಳನ್ನು ಪ್ರಾರಂಭಿಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ
ಬಳ್ಳಾರಿ : ಜಿಟಿಟಿಸಿ ಉದ್ಯೋಗಾಧಾರಿತ ತರಬೇತಿ


ಬಳ್ಳಾರಿ, 02 ಮೇ (ಹಿ.ಸ.) :

ಆ್ಯಂಕರ್ : ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ವತಿಯಿಂದ ಬಳ್ಳಾರಿ ಕೇಂದ್ರದಲ್ಲಿ ವಿವಿಧ ಅಲ್ಪಾವಧಿ ತರಬೇತಿ ಕೋರ್ಸ್ಗಳನ್ನು ಪ್ರಾರಂಭಿಸಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಲಭ್ಯವಿರುವ ತರಬೇತಿ ಕೋರ್ಸ್ ಗಳು :

ಆಫೀಸ್ ಮ್ಯಾನೇಜ್ಮೆಂಟ್ ಇನ್ ಕಂಪ್ಯೂಟರ್ ಅಪ್ಲಿಕೇಶನ್: 2 ತಿಂಗಳು.

ಮೆಕ್ಯಾನಿಕಲ್: ಬೇಸಿಕ್ ಮತ್ತು ಅಡ್ವಾನ್ಸ್ಡ್ ಕೋರ್ಸ್ಗಳು (2 ರಿಂದ 4 ತಿಂಗಳು).

ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್: ಅಡ್ವಾನ್ಸ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ತರಬೇತಿ (2 ತಿಂಗಳು) ಹಾಗೂ ಪಿಎಲ್ಸಿ, ಎಸ್ಸಿಎಡಿಎ ಮತ್ತು ಹೆಚ್ಎಂಐ (4 ತಿಂಗಳು).

ಕಂಪ್ಯೂಟರ್ ಸೈನ್ಸ್: ಸಿ ಲ್ಯಾಂಗ್ವೇಜ್ (2 ತಿಂಗಳು), ಸಿ ಮತ್ತು ಸಿ++ (4 ತಿಂಗಳು) ಹಾಗೂ ಫುಲ್ ಸ್ಟಾಕ್ ವೆಬ್ ಡೆವಲಪ್ಮೆಂಟ್ (4 ತಿಂಗಳು).

ಅರ್ಹತೆ ಮತ್ತು ಸೌಲಭ್ಯಗಳು:

ಕನಿಷ್ಠ 8ನೇ ತರಗತಿ ಪಾಸಾದವರು ಅಥವಾ ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿಇ ಮತ್ತು ಪದವಿ ಪಡೆದ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದು.

ಕೇಂದ್ರದಲ್ಲಿ ಸುಸಜ್ಜಿತವಾದ ಉನ್ನತ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ಬಳಸಿಕೊಂಡು ನುರಿತ ತರಬೇತುದಾರರಿಂದ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಜಿಟಿಟಿಸಿ, ಐ.ಟಿ.ಐ ಕಾಲೇಜು ಆವರಣ, ಕಂಟೋನ್ ಮೆಂಟ್, ಬಳ್ಳಾರಿ – 583104 ಅಥವಾ ದೂ.08392-200087, ಮೊ.9620057086, 6361880236, 6363589489 ಅಥವಾ 9108143829 ಗೆ ಸಂಪರ್ಕಿಸಬಹುದು ಎಂದು ಜಿಟಿಟಿಸಿ ಪ್ರಾಂಶುಪಾಲ ಮುತ್ತಣ್ಣ ದರ್ಮಂತಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande