ಪತ್ರಕರ್ತರ ಮಕ್ಕಳಿಗೆ ಶೇ .50 ರಷ್ಟು ಶುಲ್ಕ ಪ್ರವೇಶ : ಮನವಿ
ಬಳ್ಳಾರಿ, 02 ಮೇ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳ ಮಕ್ಕಳಿಗೆ ಖಾಸಗಿ ಶಾಲಾ - ಕಾಲೇಜುಗಳಲ್ಲಿ ಶೇ. 50 ರ ರಿಯಾಯಿತಿಯಲ್ಲಿ ಪ್ರವೇಶ ಕಲ್ಪಿಸಿಕೊಡಲು ಕೋರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲ
ಪತ್ರಕರ್ತರ ಮಕ್ಕಳಿಗೆ ಶೇ .50 ರಷ್ಟು ಶುಲ್ಕ ಪ್ರವೇಶ : ಮನವಿ


ಪತ್ರಕರ್ತರ ಮಕ್ಕಳಿಗೆ ಶೇ .50 ರಷ್ಟು ಶುಲ್ಕ ಪ್ರವೇಶ : ಮನವಿ


ಪತ್ರಕರ್ತರ ಮಕ್ಕಳಿಗೆ ಶೇ .50 ರಷ್ಟು ಶುಲ್ಕ ಪ್ರವೇಶ : ಮನವಿ


ಪತ್ರಕರ್ತರ ಮಕ್ಕಳಿಗೆ ಶೇ .50 ರಷ್ಟು ಶುಲ್ಕ ಪ್ರವೇಶ : ಮನವಿ


ಬಳ್ಳಾರಿ, 02 ಮೇ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳ ಮಕ್ಕಳಿಗೆ ಖಾಸಗಿ ಶಾಲಾ - ಕಾಲೇಜುಗಳಲ್ಲಿ ಶೇ. 50 ರ ರಿಯಾಯಿತಿಯಲ್ಲಿ ಪ್ರವೇಶ ಕಲ್ಪಿಸಿಕೊಡಲು ಕೋರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳಿಗೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್. ವೀರಭದ್ರಗೌಡ ಅವರ ನೇತೃತ್ವದಲ್ಲಿ, ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಜಿಲ್ಲಾಧಿಕಾರಿಗಳಾದ ಕೆ. ನಾಗೇಂದ್ರ ಪ್ರಸಾದ್, ಡಿಡಿಪಿಐ ಪರವಾಗಿ ಪ್ರಭಾರಿ ಪತ್ರಾಂಕಿತ ವ್ಯವಸ್ಥಾಪಕರಾಗಿರುವ

ಮಹಮ್ಮಧ್ ರಫಿ ಮತ್ತು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರವಾಗಿ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಅವರು ಮನವಿ ಸ್ವೀಕರಿಸಿದ್ದಾರೆ. ಅಲ್ಲದೇ, ಜಿಲ್ಲಾಡಳಿತದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿಯನ್ನು ಸಲ್ಲಿಸಲಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್. ವೀರಭದ್ರಗೌಡ ಅವರು, ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕರಿಗೆ ನಿಗಧಿತ ವೇತನ ವ್ಯವಸ್ಥೆ ಇಲ್ಲವಾಗಿದೆ. ಮಾಧ್ಯಮಗಳ ಬಹುತೇಕ ಕುಟುಂಬಗಳು ಆರ್ಥಿಕ ಅನಿಶ್ಚಿತತೆ ಎದುರಿಸುತ್ತಿವೆ. ಸಮಾಜದ ಹಿತಕ್ಕಾಗಿ ನಿರಂತರವಾಗಿ ದುಡಿಯುತ್ತಿರುವ ಪತ್ರಕರ್ತರ ಆರ್ಥಿಕ ಸ್ಥಿತಿ ಸಂಕಷ್ಟಗಳಿಂದ ಕೂಡಿದೆ. ಕಾರಣ ಮಾಧ್ಯಮ ಪ್ರತಿನಿಧಿಗಳ ಮಕ್ಕಳಿಗೆ ಶೇ. 50 ರಷ್ಟು ಶಿಕ್ಷಣ ಶುಲ್ಕದಲ್ಲಿ ರಿಯಾಯಿತಿ ಕೊಡಿಸಬೇಕು ಎಂದು ಅವರು ಅಧಿಕಾರಿಗಳಿಗೆ ವಿವರಿಸಿ - ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ನರಸಿಂಹಮೂರ್ತಿ ಕುಲಕರ್ಣಿ, ಬಸವರಾಜ್, ಗುರುಶಾಂತಪ್ಪ, ಹರಿಶಂಕರ್, ನಾಗರಾಜ್, ವಿನಾಯಕ

ಬಡಿಗೇರ, ಶ್ರೀನಿವಾಸ್ ಶೆಟ್ಟಿ, ನಂದೀಶ್, ಜಂಭುನಾಥ, ವೆಂಕೋಬಿ, ತಿಮ್ಮಪ್ಪ ಚೌದರಿ, ಕೆ.ಎಂ. ಮಂಜುನಾಥ, ರೇಣುಕಾರಾಧ್ಯ, ಶಿವು, ಸಿದ್ದಪ್ಪ ಪೂಜಾರ್, ವಿರೇಶ್, ಸಿದ್ದಿಕ್, ಶಿವರಾಂ, ನಾಗರಾಜ ಸ್ವಾಮಿ, ದಿವಾಕರ ರೆಡ್ಡಿ, ಮುರುಳಿಕಾಂತರಾವ್, ಪ್ರಭಾಕರ್, ಖಲಂದರ್, ರುದ್ರಮುನಿ ಸ್ವಾಮಿ, ಗೋವರ್ಧನ್ ರೆಡ್ಡಿ, ಪ್ರಸಾದ್, ಗುರುರಾಜ್ ಸೇರಿ ಅನೇಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande