
ಮಾನ್ವಿ, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಇಲ್ಲಿಗೆ ಸಮೀಪದ ಬಯಲು ಮರ್ಚೇಡ್ ಗ್ರಾಮದಲ್ಲಿ ಬಯಲು ನಾಟಕ ನೋಡುತ್ತಿದ್ದ ಪ್ರೇಕ್ಷಕರ ಮೇಲೆ ಅಲ್ಲಿದ್ದ ಕಟ್ಟಡದ ತಾತ್ಕಾಲಿಕ ಛಾವಣಿ ಕುಸಿದು ಬಿದ್ದ ಕಾರಣ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.
ಮೃತರು ವಿಶ್ವನಾಥ (08) ಮತ್ತು ಮನ್ವಿತಾ (1.5) ಎಂದು ಪೊಲೀಸರು ತಿಳಿಸಿದ್ದಾರೆ. ವಿಶಾಲಮ್ಮ (22) ಅವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸಮ್ಮ (38) ಮತ್ತು ಲಕ್ಷ್ಮೀ ಹನುಮಂತ್ರಾಯ (16) ಅವರ ಕಾಲುಗಳಿಗೆ ತೀವ್ರವಾದÀ ಗಾಯಗಳಾಗಿದ್ದು, ಕಾಲುಗಳನ್ನು ಕತ್ತರಿಸುವ ಸಾಧ್ಯತೆಗಳಿವೆ.
ಶುಕ್ರವಾರ ರಾತ್ರಿ ಗ್ರಾಮದಲ್ಲಿ ಆಯೋಜಿಸಿದ್ದ ನಾಟಕ ವೀಕ್ಷಿಸಲು ಜನರು ಕುಟುಂಬ ಸಮೇತ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಈ ವೇಳೆ ಸಮುದಾಯ ಭವನದ ಅನುದಾನ ಫಲಕ ಬರೆಸಲು ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಛತ್ತು ಏಕಾಏಕಿ ಕುಸಿದು ಬಿದ್ದಾಗ ಛತ್ತಿನ ಕೆಳಗೆ ನಿಂತಿದ್ದ ಮಹಿಳೆಯರು ಮತ್ತು ಮಕ್ಕಳು ಸಿಲುಕಿಕೊಂಡ ಕಾರಣ ಈ ಘಟನೆ ನಡೆದಿದೆ.
ಮಾನ್ವಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್