ಸಮಯ ಪ್ರಜ್ಞೆ ; ತಪ್ಪಿದ ಎರಡು ಬಾಲ್ಯ ವಿವಾಹ, ಬಾಲಕಿಯರ ರಕ್ಷಣೆ
ಕನಕಗಿರಿ, 18 ಏಪ್ರಿಲ್ (ಹಿ.ಸ.) : ಆ್ಯಂಕರ್ : ಜಿಲ್ಲೆಯಲ್ಲಿ ನಡೆಯುತ್ತಿದ್ದ ಎರಡು ಪ್ರತ್ಯೇಕ ಬಾಲ್ಯ ವಿವಾಹಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸುವ ಮಕ್ಕಳ ಉಚಿತ ಸಹಾಯವಾಣಿ ಸಂಖ್ಯೆ 1098ಕ್ಕೆ ಬಂದ ಖಚಿತ ಮಾಹಿತಿ ಮೇರೆಗೆ ಇಬ್ಬರು ಅಪ್ರಾಪ್ತರನ್ನು ಹಸಿಮಣೆ ಏರುವ ಮುನ್ನವ
ಸಮಯ ಪ್ರಜ್ಞೆ ; ತಪ್ಪಿದ ಎರಡು ಬಾಲ್ಯ ವಿವಾಹ, ಬಾಲಕಿಯರ ರಕ್ಷಣೆ


ಕನಕಗಿರಿ, 18 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಜಿಲ್ಲೆಯಲ್ಲಿ ನಡೆಯುತ್ತಿದ್ದ ಎರಡು ಪ್ರತ್ಯೇಕ ಬಾಲ್ಯ ವಿವಾಹಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸುವ ಮಕ್ಕಳ ಉಚಿತ ಸಹಾಯವಾಣಿ ಸಂಖ್ಯೆ 1098ಕ್ಕೆ ಬಂದ ಖಚಿತ ಮಾಹಿತಿ ಮೇರೆಗೆ ಇಬ್ಬರು ಅಪ್ರಾಪ್ತರನ್ನು ಹಸಿಮಣೆ ಏರುವ ಮುನ್ನವೇ ರಕ್ಷಿಸಲಾಗಿದೆ.

ಕನಕಗಿರಿ ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕಿಗೆ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದು, ವರನ ಕುಟುಂಬ ಆರ್ಥಿಕವಾಗಿ ಸಬಲವಾಗಿದೆ ಎಂಬ ಒಂದೇ ಕಾರಣಕ್ಕೆ ಪೋಷಕರು ಈ ನಿರ್ಧಾರಕ್ಕೆ ಬಂದಿದ್ದರು.

1098 ಸಹಾಯವಾಣಿಗೆ ಬಂದ ಕರೆ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲಿಸಿದಾಗ ಬಾಲಕಿಗೆ ಕೇವಲ 16 ವರ್ಷ ತುಂಬಿರುವುದು ದೃಢಪಟ್ಟಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ತಂಡ ಮದುವೆಯನ್ನು ತಡೆದು ಬಾಲಕಿಯನ್ನು ರಕ್ಷಿಸಿದೆ.

ಬೇವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಬಾಲ್ಯ ವಿವಾಹದ ಸಿದ್ಧತೆ ನಡೆದಿತ್ತು. ಏಪ್ರಿಲ್ 20ರಂದು ನಡೆಯಬೇಕಿದ್ದ ಈ ಮದುವೆಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

4ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಫೋನ್ ಬಳಕೆಯಿಂದ ಮಕ್ಕಳು ಹಾಳಾಗುತ್ತಾರೆ ಎಂಬ ವಿಚಿತ್ರ ಕಾರಣ ನೀಡಿ ಪೋಷಕರು ಮದುವೆ ಮಾಡಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.

ರಕ್ಷಣಾ ತಂಡದ ಕಾರ್ಯಾಚರಣೆ : ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಬಸವರಾಜ ಗುರುದೇವ್, ವಲಯ ಮೇಲ್ವಿಚಾರಕಿ ಗಿರಿಜಮ್ಮ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರಾದ ಯಮನೂರಪ್ಪ ಗವಾರಿ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

ವಯಸ್ಸಿನ ಪೂರ್ವ ಮದುವೆ ಅಪಾಯಕಾರಿ ಇಡಿ ಮಗುವಿನ ಬದಕನ್ನೇ ಹಾಳು ಮಾಡಿಬಿಡುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರಗಳಿಂದ ಅವರ ಬದಕನ್ನು ಹಸನು ಮಾಡಲು ನಾವು ನೀವೆಲ್ಲರು ಶ್ರಮಿಸಬೇಕು. ದೌರ್ಜನ್ಯ ಸಂದರ್ಭದಲ್ಲಿ ಮಹಿಳೆಯರ ಸಹಾಯಕ್ಕೆ ಸಹಾಯವಾಣಿ 181 ಮತ್ತು ಮಕ್ಕಳ ಸಹಾಯಕ್ಕೆ ಸಹಾಯವಾಣಿ-1098 ಇದೆ. ಇದಲ್ಲದೇ 24 ಗಂಟೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಹಾಯವಾಣಿ 112 ಸಹ ಇದೆ. ಮಕ್ಕಳು ಮತ್ತು ವಯಸ್ಕರ ಸಿಗರೇಟು ಮತ್ತು ತಂಬಾಕು ವ್ಯಸನಕ್ಕೆ ದಾಸರಾಗಿದ್ದರೆ, ಅವರ ಆಪ್ತ ಸಮಾಲೋಚನೆಗಾಗಿ ಸಹಾಯವಾಣಿ 1800112356 ಇದ್ದು, ಇಂತಹ ಸಹಾಯವಾಣಿಗಳ ಸಹಾಯವನ್ನು ಪಡೆದು ಮಕ್ಕಳು ಮತ್ತು ಕುಟಂಬದ ಸುರಕ್ಷತ ಭದ್ರತೆಗಾಗಿ ಸೇವೆಗಳನ್ನು ಪಡೆಯಬೇಕೆಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande