ಜಗಳ : ಟವರ್ ಏರಿ ಆತಂಕ ಸೃಷ್ಟಿಸಿದ ಯುವಕ
ನಿಂದ
ಟಾವರ್


ಬಾಗಲಕೋಟೆ, 18 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮನೆ ಯಜಮಾನ ಹಾಗೂ ಬಾಡಿಗೆಗೆ ವಾಸವಾಗಿದ್ದ ಮಹಿಳೆಯ ನಡುವೆ ಉಂಟಾದ ಜಗಳ ತೀವ್ರಗೊಂಡ ಪರಿಣಾಮ, ಮನೆ ಮಾಲಿಕನಾದ ಯುವಕ ಟವರ್ ಏರಿ ಆತಂಕ ಸೃಷ್ಟಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ನವನಗರದಲ್ಲಿ ನಡೆದಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಈ ವೇಳೆ ಯುವಕನು “ಎಸ್ಪಿ ಸ್ಥಳಕ್ಕೆ ಬರಬೇಕು” ಎಂದು ಹಠ ಹಿಡಿದಿದ್ದನು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳಾದ ಎಎಸ್ಪಿ ಹಾಗೂ ಡಿಎಸ್ಪಿ ಸ್ಥಳಕ್ಕೆ ಆಗಮಿಸಿದರು.

ಪೊಲೀಸರು ಸಹನೆಯಿಂದ ಮಾತುಕತೆ ನಡೆಸಿ ಯುವಕನನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಯುವಕನು ಟವರ್ ನಿಂದ ಸುರಕ್ಷಿತವಾಗಿ ಕೆಳಗೆ ಇಳಿದಿದ್ದು, ಈ ದೃಶ್ಯ ಕಂಡ ಕುಟುಂಬಸ್ಥರು ನಿಟ್ಟುಸಿರು ಬಿಟ್ಟರು.

ನಂತರ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯಿಂದ ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande