
ಬಳ್ಳಾರಿ, 18 ಏಪ್ರಿಲ್ (ಹಿ.ಸ.)
ಆ್ಯಂಕರ್ : ಜೆಸ್ಕಾಂ ನಗರ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 110/11 ಕೆವಿ ಸೌತ್ ವಿದ್ಯುತ್ ವಿತರಣ ಕೇಂದ್ರದಿAದ ವಿದ್ಯುತ್ ಸರಬರಾಜು ಆಗುವ ಎಫ್-25 ಹಾಗು ಎಫ್-46 ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿAದ ಏ.19 ರಂದು ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಿವು :
ನಗರದ ಆರ್.ಕೆ ಮಿಲ್ ರೋಡ್, ಬಾಪೂಜಿ ನಗರ, ಬಾಪೂಜಿ ನಗರ ಸರ್ಕಲ್, ರಾಣಿತೋಟ, ಕಣೆಕಲ್ ಬಸ್ ಸ್ಟಾö್ಯಂಡ್, ದೊಡ್ಡ ಮಾರ್ಕೆಟ್, ಸಣ್ಣ ಮಾರ್ಕೆಟ್, ಕಾರ್ಕಳ ತೋಟ, ಸಾಯಿ ಕಾಲೋನಿ, ಆರ್.ಆರ್ ಲೇಔಟ್, ಟೋಪಿಗಲ್ಲಿ, ಮರಿಸ್ವಾಮಿ ಮಠ, ಇಂಡಸ್ಟಿçಯಲ್ ಏರಿಯಾ ಹಂತ-1 ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್