ಪ್ಯಾರಾಲ್ಯಾಂಡಿಂಗ್ ತರಬೇತಿ ; ಕಮಾಂಡರ್ ಕಾಲು ಮುರಿತ
ಗಾಯಾಳುವಿಗೆ
ಪ್ಯಾರಾಲ್ಯಾಂಡಿಂಗ್ ತರಬೇತಿ ; ಕಮಾಂಡರ್ ಕಾಲು ಮುರಿತ


ಬಳ್ಳಾರಿ, 18 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಜೋಳದರಾಶಿ ಸಮೀಪದ ಕೆ.ವೀರಾಪುರ ಗ್ರಾಮದ ಹೊರವಲಯದಲ್ಲಿ ಭಾರತೀಯ ಸೇನೆಯ ಸೈನಿಕರ ಪ್ಯಾರಾಗ್ಲೈಡಿಂಗ್ ಲ್ಯಾಂಡಿಂಗ್ ಸಂದರ್ಭದಲ್ಲಿ ಆಯತಪ್ಪಿ ಬಿದ್ದ ಕಾರಣ ಇಬ್ಬರು ಸೈನಿಕರಿಗೆ ಬೆನ್ನುಮೂಳೆ ಸಮಸ್ಯೆ, ಕಾಲು ಮುರಿದಿದೆ.

ಬೆಂಗಳೂರಿನಿಂದ ಬಳ್ಳಾರಿಯ ಜೋಳದರಾಶಿ ಗ್ರಾಮದ ಹೊರವಲಯದದಲ್ಲಿ ಮೂರು ನಾಲ್ಕು ತಿಂಗಳಿಗೆ ಒಮ್ಮೆ ಪ್ಯಾರಾ ಸ್ಲೈಡಿಂಗ್ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯ ಸಂದರ್ಭದಲ್ಲಿ ಆಯತಪ್ಪಿ ಬಿದ್ದ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ.

ಗಾಯಾಳುವಿಗೆ ಟ್ರಾಮಾಕೇರ್ ಸೆಂಟರ್ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ತಕ್ಷಣವೇ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande