ಮಹಿಳಾ ಮೀಸಲಾತಿ ವಿರೋಧಿಸಿದಕ್ಕೆ ಆಕ್ರೋಶ
ಗದಗ, 18 ಏಪ್ರಿಲ್ (ಹಿ.ಸ.) : ಆ್ಯಂಕರ್ : ದೇಶದ ಮಹಿಳೆಯರ ದೀರ್ಘಕಾಲದ ಕನಸಾದ ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಇಂಡಿ ಮೈತ್ರಿಕೂಟ ತೋರಿದ ನಿಲುವು ಸಂಪೂರ್ಣವಾಗಿ ದ್ವಂದ್ವಪೂರ್ಣ ಮತ್ತು ಖಂಡನೀಯವಾಗಿದೆ. ಸಾರ್ವಜನಿಕವಾಗಿ ಮಹಿಳಾ ಸಬಲೀಕರಣದ ಮಾತುಗಳನ್ನು ಮಾಡುವ ಈ ಪಕ್ಷಗಳು, ವಾಸ್ತವದಲ್ಲಿ
ಫೋಟೋ


ಗದಗ, 18 ಏಪ್ರಿಲ್ (ಹಿ.ಸ.) :

ಆ್ಯಂಕರ್ : ದೇಶದ ಮಹಿಳೆಯರ ದೀರ್ಘಕಾಲದ ಕನಸಾದ ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಇಂಡಿ ಮೈತ್ರಿಕೂಟ ತೋರಿದ ನಿಲುವು ಸಂಪೂರ್ಣವಾಗಿ ದ್ವಂದ್ವಪೂರ್ಣ ಮತ್ತು ಖಂಡನೀಯವಾಗಿದೆ. ಸಾರ್ವಜನಿಕವಾಗಿ ಮಹಿಳಾ ಸಬಲೀಕರಣದ ಮಾತುಗಳನ್ನು ಮಾಡುವ ಈ ಪಕ್ಷಗಳು, ವಾಸ್ತವದಲ್ಲಿ ಮಹಿಳೆಯರಿಗೆ ನ್ಯಾಯಯುತ ರಾಜಕೀಯ ಪ್ರತಿನಿಧಿತ್ವ ದೊರೆಯುವಾಗ ವಿರೋಧಿಸುವುದು ಅವರ ನಿಜಸ್ವರೂಪವನ್ನು ಬಹಿರಂಗಪಡಿಸಿದೆ ಎಂದು ಬಿಜೆಪಿ ಗದಗ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ನಿರ್ಮಲಾ ಕೊಳ್ಳಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮಹಿಳೆಯರು ದೇಶದ ಅಭಿವೃದ್ಧಿಯಲ್ಲಿ ಸಮಾನ ಹಕ್ಕು ಮತ್ತು ಅವಕಾಶ ಪಡೆಯಬೇಕು ಎಂಬುದು ನಮ್ಮ ದೃಢ ನಂಬಿಕೆ. ಆದರೆ ಕಾಂಗ್ರೆಸ್ ಹಾಗೂ ಅದರ ಮೈತ್ರಿಕೂಟಗಳು ಸದಾ ಮಹಿಳೆಯರ ಹಿತಾಸಕ್ತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದು, ಈಗ ಮಹಿಳಾ ಮೀಸಲಾತಿ ವಿಷಯದಲ್ಲಿಯೂ ಅದೇ ರಾಜಕೀಯ ಆಟವನ್ನು ಮುಂದುವರೆಸಿವೆ ಎಂದಿದ್ದಾರೆ.

ಮಹಿಳಾ ಮೀಸಲಾತಿ ಕಾಯ್ದೆ ಮಹಿಳೆಯರಿಗೆ ರಾಜಕೀಯದಲ್ಲಿ ಬಲವಾದ ಸ್ಥಾನಮಾನ ನೀಡುವ ಮಹತ್ವದ ಹೆಜ್ಜೆ. ಇದಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟ ಮಹಿಳೆಯರ ಆಶಯಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿವೆ. ಇದು ದೇಶದ ಮಹಿಳೆಯರ ಆತ್ಮಗೌರವಕ್ಕೆ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಾಗೂ ಇಂಡಿ ಮೈತ್ರಿಕೂಟ ತಮ್ಮ ದ್ವಂದ್ವ ನೀತಿಯನ್ನು ತಕ್ಷಣ ತೊರೆದು, ಮಹಿಳಾ ಮೀಸಲಾತಿಗೆ ಸ್ಟಷ್ಟ ಬೆಂಬಲ ನೀಡಬೇಕು ಎಂದು ನಾನು ತೀವ್ರವಾಗಿ ಆಗ್ರಹಿಸುತ್ತೇನೇ. ಮಹಿಳಾ ಸಬಲೀಕರಣದ ಹೆಸರಿನಲ್ಲಿ ವರ್ಗಗಳ ಕಾಲ ಕೇವಲ ಖಾಲಿ ಭರವಸೆಗಳನ್ನು ನೀಡುತ್ತ ಬಂದಿರುವ ಕಾಂಗ್ರೆಸ್ ಹಾಗೂ ಇಂಡಿ ಮೈತ್ರಿಕೂಟ, ಮಹಿಳಾ ಮೀಸಲಾತಿಯಂತಹ ಐತಿಹಾಸಿಕ ಮತ್ತು ಪರಿವರ್ತನಾ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ತಮ್ಮ ನಿಜವಾದ ಮುಖವನ್ನು ದೇಶದ ಮುಂದೆ ಬಿಚ್ಚಿಟ್ಟಿವೆ. ಇದು ಕೇವಲ ರಾಜಕೀಯ ದ್ವಂದ್ವವಲ್ಲ ಇದು ದೇಶದ ಕೋಟ್ಯಾಂತರ ಮಹಿಳೆಯರ ಆಶಯಗಳಿಗೆ ಮಾಡಿದ ನೇರ ಅವಮಾನ ಎಂದು ಕಿಡಿ ಕಾರಿದ್ದಾರೆ.

ಮಾತಿನಲ್ಲಿ ಮಹಿಳಾ ಹಿತಾಸಕ್ತಿ, ಕ್ರಿಯೆಯಲ್ಲಿ ಮಹಿಳಾ ವಿರೋಧ, ಇದೇ ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟದ ನಿಜಸ್ವರೂಪ. ದಶಕಗಳ ಕಾಲ ಅಧಿಕಾರದಲ್ಲಿದ್ದಾಗ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ವಿಫಲವಾದ ಈ ಪಕ್ಷಗಳು, ಇಂದು ಮತ್ತೊಮ್ಮೆ ಮಹಿಳೆಯರ ಹಕ್ಕುಗಳನ್ನು ಅಡ್ಡಿಪಡಿಸಲು ಮುಂದಾಗಿರುವುದು ಲಜ್ಜಾಸ್ಪದ ಎಂದಿದ್ದಾರೆ.

ಮಹಿಳಾ ಮೀಸಲಾತಿ ಕಾಯ್ದೆ ದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು. ಮಹಿಳೆಯರಿಗೆ ಸಮಾನ ಪ್ರತಿನಿಧಿತ್ವ ಮತ್ತು ನಿರ್ಣಯಾಧಿಕಾರ ನೀಡುವ ಈ ಕ್ರಮವನ್ನು ವಿರೋಧಿಸುವುದು, ಮಹಿಳೆಯರ ಶಕ್ತಿಯನ್ನು ಕುಗ್ಗಿಸುವ ಸಂಚು ಎಂದು ನಾನು ದೃಢವಾಗಿ ಹೇಳುತ್ತೇನೇ . ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟದ ಈ ನಿಲುವು ಮಹಿಳೆಯರ ಸ್ವಾಭಿಮಾನಕ್ಕೆ ನೇರವಾಗಿ ಧಕ್ಕೆ ತರುತ್ತದೆ. ಮಹಿಳೆಯರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುವ ರಾಜಕೀಯವನ್ನು ದೇಶದ ಜನತೆ ಇನ್ನು ಸಹಿಸಲಾರರು. ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕುವ ಯಾವುದೇ ಪ್ರಯತ್ನಕ್ಕೂ ನಾವು ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ನಾವು ಮಹಿಳಾ ಶಕ್ತಿಯ ಪರವಾಗಿ ಅಚಲವಾಗಿ ನಿಂತಿದ್ದೇವೆ. ಮಹಿಳೆಯರಿಗೆ ನ್ಯಾಯಯುತ ಸ್ಥಾನಮಾನ ದೊರೆಯುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ.

ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟ ತಕ್ಷಣವೇ ತಮ್ಮ ತಪ್ಪನ್ನು ಒಪ್ಪಿಕೊಂಡು, ಮಹಿಳಾ ಮೀಸಲಾತಿಗೆ ನಿದ್ವರ್ಂದ್ವ ಬೆಂಬಲ ಘೋಷಿಸಬೇಕು ಎಂದು ನಿರ್ಮಲಾ ಕೊಳ್ಳಿರವರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande