ಹಳಗುಣಕಿ ಕ್ರಾಸ್–ಹಡಲಸಂಗ ರಸ್ತೆ ಪೂರ್ಣ : ಗ್ರಾಮಾಭಿವೃದ್ಧಿಗೆ ಹೊಸ ಹಾದಿ
ವಿಜಯಪುರ, 18 ಏಪ್ರಿಲ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಳಗುಣಕಿ ಕ್ರಾಸ್ನಿಂದ ಹಡಲಸಂಗ ಗ್ರಾಮಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಈ ರಸ್ತೆ ನಿರ್ಮಾಣದಿಂದ ಸ್ಥಳೀಯ ಜನರ ದೈನಂದಿನ ಸಂಚಾರ ಸುಗಮಗೊಂಡಿದ್ದು, ಗ್ರಾಮಾಭಿವೃದ್ಧಿಗೆ ಹೊಸ ದಿಕ
ರಸ್ತೆ


ವಿಜಯಪುರ, 18 ಏಪ್ರಿಲ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಳಗುಣಕಿ ಕ್ರಾಸ್ನಿಂದ ಹಡಲಸಂಗ ಗ್ರಾಮಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಈ ರಸ್ತೆ ನಿರ್ಮಾಣದಿಂದ ಸ್ಥಳೀಯ ಜನರ ದೈನಂದಿನ ಸಂಚಾರ ಸುಗಮಗೊಂಡಿದ್ದು, ಗ್ರಾಮಾಭಿವೃದ್ಧಿಗೆ ಹೊಸ ದಿಕ್ಕು ದೊರೆಕಿತು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ತಿಳಿಸಿದರು.

ಜನಸಾಮಾನ್ಯರ ಕಷ್ಟಗಳನ್ನು ಹತ್ತಿರದಿಂದ ಕಂಡು ಈ ಕಾಮಗಾರಿಯನ್ನು ಕೈಗೊಂಡಿರುವುದಾಗಿ ತಿಳಿಸಲಾಗಿದೆ. ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು, ವಿದ್ಯಾರ್ಥಿಗಳು ಶಾಲೆಗೆ ತೆರಳಲು ಹಾಗೂ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಆಸ್ಪತ್ರೆಗೆ ತಲುಪಲು ಇನ್ನು ಮುಂದೆ ಯಾವುದೇ ತೊಂದರೆ ಇರುವುದಿಲ್ಲ.

“ಅಭಿವೃದ್ಧಿ ಎಂದರೆ ಕೇವಲ ಭಾಷಣವಲ್ಲ, ಅದು ಜನರ ಬದುಕಿನಲ್ಲಿ ಬದಲಾವಣೆ ತರುವುದೇ ಆಗಿದೆ” ಎಂಬ ಸಂದೇಶದೊಂದಿಗೆ, ಗುಣಮಟ್ಟದ ಕಾಮಗಾರಿಯಿಂದ ರಸ್ತೆ ಸಿದ್ಧವಾಗಿದ್ದು, ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.

ಹೊಸ ರಸ್ತೆಯ ಮೂಲಕ ಗ್ರಾಮ ಪ್ರಗತಿಯತ್ತ ಇನ್ನಷ್ಟು ವೇಗವಾಗಿ ಸಾಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande