ಏಪ್ರಿಲ್ 20 ರಂದು ಕುಡತಿನಿ ಭೂ ಸಂತ್ರಸ್ತರ ಸಭೆ
ಬಳ್ಳಾರಿ, 18 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೆಐಡಿಬಿಯು ಅತ್ಯಂತ ಕಡಿಮೆ ಬೆಲೆಗೆ ಕುಡತಿನಿ, ಹರಗಿನಡೋಣಿ, ಜಾನೆಕುಂಟೆ, ವೇಣಿವೀರಾಪುರ, ಕೊಳಗಲ್ಲು, ಎರ್ರಂಗಳಿ, ಸಿದ್ದಮ್ಮನಹಳ್ಳಿ ಗ್ರಾಮಗಳ 13,000 ಎಕರೆ ಭೂಸ್ವಾಧೀನ ಮಾಡಿಕೊಂಡು ರಿಯಲ್ ಎಸ್ಟೇಟ್ ವ್ಯಾಪಾರ ಮಾಡುತ್ತಿರುವುದನ್ನು ಖಂಡಿಸಿ ಏಪ್ರಿಲ್ 20
ಏಪ್ರಿಲ್ 20 ರಂದು ಕುಡತಿನಿ ಭೂ ಸಂತ್ರಸ್ತರ ಸಭೆ


ಏಪ್ರಿಲ್ 20 ರಂದು ಕುಡತಿನಿ ಭೂ ಸಂತ್ರಸ್ತರ ಸಭೆ


ಬಳ್ಳಾರಿ, 18 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೆಐಡಿಬಿಯು ಅತ್ಯಂತ ಕಡಿಮೆ ಬೆಲೆಗೆ ಕುಡತಿನಿ, ಹರಗಿನಡೋಣಿ, ಜಾನೆಕುಂಟೆ, ವೇಣಿವೀರಾಪುರ, ಕೊಳಗಲ್ಲು, ಎರ್ರಂಗಳಿ, ಸಿದ್ದಮ್ಮನಹಳ್ಳಿ ಗ್ರಾಮಗಳ 13,000 ಎಕರೆ ಭೂಸ್ವಾಧೀನ ಮಾಡಿಕೊಂಡು ರಿಯಲ್ ಎಸ್ಟೇಟ್ ವ್ಯಾಪಾರ ಮಾಡುತ್ತಿರುವುದನ್ನು ಖಂಡಿಸಿ ಏಪ್ರಿಲ್ 20 ರಂದು ಭೂ ಸಂತ್ರಸ್ತರ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಕುಡತಿನಿ ಭೂ ಸಂತ್ರಸ್ತರ ಹೋರಾಟ ಸಮಿತಿ ತಿಳಿಸಿದೆ.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರು ಹಾಗೂ ಭೂಸಂತ್ರಸ್ಥರ ಹೋರಾಟ ಸಮಿತಿಯ ಗೌರವಾಧ್ಯಕ್ಷರಾಗಿರುವ ಯು. ಬಸವರಾಜ ಮತ್ತು ಜೆ. ಸತ್ಯಬಾಬು ಅವರು ಸುದ್ದಿಗಾರರಿಗೆ ಶನಿವಾರ ಮಾಹಿತಿ ನೀಡಿ, ಕೆಐಡಿಬಿಯು 2010 - 14ರ ಅವಧಿಯಲ್ಲಿ ಆರ್ಸೆಲರ್ ಮಿತ್ತಲ್, ಬ್ರಹ್ಮಣಿ ಹಾಗು ವಿಜಯನಗರ ಸ್ಟೀಲ್ ಕೈಗಾರಿಕೆ ಘಟಕಗಳಿಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಯಿತು. ಆದರೆ, ಈ ಭೂಮಿಯ ಪರಿಹಾರವನ್ನು ನಿಗಧಿ ಮಾಡುವಲ್ಲಿ ಏಕರೂಪದ ಪರಿಹಾರ ನೀತಿಯನ್ನು ಸರ್ಕಾರ ಅನುಸರಿಸಿಲ್ಲ. ಪ್ರತಿಯೊಂದು ಭೂಮಿಗೆ ಬೇರೆ ಬೇರೆ ರೀತಿಯಲ್ಲಿ ಪರಿಹಾರವನ್ನು ಘೋಷಣೆ ಮಾಡಿರುವುದು ತಪ್ಪು ಎಂದು ಅವರು ಹೇಳಿದರು.

ಕೆಐಡಿಬಿಯು ರೈತರಿಂದ ಬಲವಂತವಾಗಿ ಭೂ ಸ್ವಾಧೀನ ಮಾಡಿಕೊಂಡಿದೆ. ಬಂಡವಾಳಗಾರರು ಕೈಗಾರಿಕೆ ಪ್ರಾರಂಭಿಸದೇ ಹೆಚ್ಚಿನ ಬೆಲೆಗೆ ಬೇರೆ ಕೈಗಾರಿಕೆಗಳಿಗೆ ಮಾರಾಟ ಮಾಡುತ್ತಿರುವುದು ಕಾನೂನುಬಾಹಿರ. ಭೂಮಿಯನ್ನು ಸ್ವಾಧೀನ ಮಾಡಿಕೊಂಡಿರುವವರಲ್ಲಿ

5,000 ದೇವದಾಸಿಯರು, ಪರಿಶಿಷ್ಟ ಜಾತಿ ಹಾಗು ಪಂಗಡಕ್ಕೆ ಸೇರಿದವರು, ಬಡ ರೈತರು ಸೇರಿದ್ದಾರೆ ಎಂದು ಅವರು ತಿಳಿಸಿದರು.

ಸರ್ಕಾರದ ರೈತ ವಿರೋಧಿ ಮತ್ತು ಕೆಐಡಿಬಿಯ ರಿಯಲ್ ಎಸ್ಟೇಟ್ ವ್ಯಾಪಾರದ ಕ್ರಮವನ್ನು ವಿರೋಧಿಸಿ ಏಪ್ರಿಲ್ 20 ರಂದು ನಡೆಯುವ ಸಭೆಯಲ್ಲಿ ಭೂ ಸಂತ್ರಸ್ತರಿಂದ ಚರ್ಚೆ ನಡೆಸಲಾಗುತ್ತದೆ. ಭೂ ಸಂತ್ರಸ್ತರಿಗೆ ಸೂಕ್ತ ಬೆಲೆ ಸಿಗುವವರೆಗೂ ಹೋರಾಟ ನಡೆಸುವ ಕುರಿತು ಹೋರಾಟದ ರೂಪುರೇಷಗಳನ್ನು ರೂಪಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಭೂ ಸಂತಸ್ತರು ಹಾಗೂ ರೈತ ಮುಖಂಡರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande