
ವಿಜಯಪುರ, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಗೊಳಸಾರದಲ್ಲಿರುವ ಶ್ರೀ ಸದ್ಗುರು ಪುಂಡಲೀಕೇಶ್ವರ ಮಠಕ್ಕೆ ಇಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭೇಟಿ ನೀಡಿ, ಪುಂಡಲೀಕೇಶ್ವರ ಶಿವಯೋಗಿಗಳ ದರ್ಶನಾಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಅವರ ಸುಪುತ್ರ ರಾಮನಗೌಡ ಪಾಟೀಲ್ ಅವರೂ ಉಪಸ್ಥಿತರಿದ್ದರು. ಶ್ರೀ ಮಠದ ಅಭಿನವ ಪುಂಡಲಿಂಗ ಶಿವಯೋಗಿಗಳು ಯತ್ನಾಳ್ ಹಾಗೂ ರಾಮನಗೌಡ ಪಾಟೀಲ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಆಶೀರ್ವದಿಸಿದರು.
ಭಕ್ತಿಭಾವದಿಂದ ನಡೆದ ಈ ಭೇಟಿಯಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ವಿಚಾರಗಳ ಕುರಿತು ಮಾತುಕತೆ ನಡೆದಿದ್ದು, ಮಠದ ಪರಂಪರೆ ಮತ್ತು ಸೇವಾ ಕಾರ್ಯಗಳನ್ನು ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande