ಯಲಬುರ್ಗಾ - ಕುಕನೂರು : ಬೆಳೆ ವಿಮಾ ಯೋಜನೆ ; ಆಕ್ಷೇಪಣೆ ಅವಕಾಶ
ಆಕ್ಷೇಪಣೆ
ಯಲಬುರ್ಗಾ - ಕುಕನೂರು : ಬೆಳೆ ವಿಮಾ ಯೋಜನೆ ; ಆಕ್ಷೇಪಣೆ ಅವಕಾಶ


ಯಲಬುರ್ಗಾ, 18 ಏಪ್ರಿಲ್ (ಹಿ.ಸ.) :

ಆ್ಯಂಕರ್ : 2025ರ ಹಿಂಗಾರು ಹಂಗಾಮಿನ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಬೆಳೆ ಹೊಂದಾಣಿಕೆಯಾಗದೇ ತಿರಸ್ಕೃತಗೊಂಡ ಪ್ರಸ್ತಾವನೆಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಯಲಬುರ್ಗಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕಿನಲ್ಲಿ 2025ರ ಹಿಂಗಾರು ಹಂಗಾಮಿನಲ್ಲಿ ಹವಮಾನ ಆಧಾರಿತ ಬೆಳೆವಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ ರೈತರ ಸ್ಥಳಗಳನ್ನು ವಿಮಾ ಕಂಪನಿ ಅಧಿಕಾರಿ, ಪ್ರತಿನಿಧಿಗಳು ಬೆಳಸ್ಥಿತಿ ಬಗ್ಗೆ ಸ್ಥಳ ಪರಿಶೀಲನೆ ಮಾಡಿದಾಗ ಹೆಚ್ಚಿನ ಸಂಖ್ಯೆಯ ಪ್ರಸ್ತಾವನೆಗಳಲ್ಲಿ ಬೆಳೆ ಇಲ್ಲದೇ ಇರುವುದು ಕಂಡು ಬಂದಿರುತ್ತದೆ ಎಂದು ವಿಮಾ ಕಂಪನಿ ಅಧಿಕಾರಿಗಳು, ಪ್ರತಿನಿಧಿಗಳು ತಿಳಿಸಿರುತ್ತಾರೆ.

ಈ ಬೆಳೆ ಸಮೀಕ್ಷೆ ವರದಿಯಲ್ಲಿ ಬೆಳ ಹೊಂದಾಣಿಕೆ ಯಾಗದೇ ತಿರಸ್ಕೃತಗೊಂಡ ಪ್ರಸ್ತಾವನೆಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕಿರುತ್ತದೆ. ವಿಮಾ ನೋಂದಣಿ ಮಾಡಿದ ಬೆಳೆಗೂ ಬೆಳೆ ಸಮೀಕ್ಷೆಯಲ್ಲಿ ಕಂಡಬಂದಂತಹ ಬೆಳೆಗೂ ವ್ಯತ್ಯಾಸವಿದ್ದು, ಬೆಳೆವಿಮೆ ಪ್ರಸ್ತಾವನೆ ತಿರಸ್ಕೃತಗೊಂಡಿರುವ ರೈತರು ಸೂಕ್ತ ದಾಖಲೆಗಳೊಂದಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ) ಯಲಬುರ್ಗಾ ರವರ ಕಛೇರಿಗೆ ಏಪ್ರಿಲ್ 30ರ ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಈ ಬೆಳೆ ವಿಮಾ ತಿರಸ್ಕೃತಗೊಂಡ ವಿಮಾದಾರರ ಪಟ್ಟಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande