
ಗದಗ, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗಳು ಸೇರಿದಂತೆ ಸಂಸತ್ತಿನಲ್ಲಿ ಪರಿಚಯಿಸಲಾದ, ಪ್ರಮುಖ ಮಸೂದೆಗಳ ಮೇಲೆ ಲೋಕ ಸಭೆಯಲ್ಲಿ ಮತದಾನ ನಡೆಯಿತು. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ವಿಧೇಯಕವನ್ನು ಇಂಡಿ ಕೂಟ ಸೋಲಿಸಿದೆ.
ಕಾಂಗ್ರೆಸ್ ಕಳೆದ ಹಲವು ವರ್ಷಗಳಿಂದ ಈ ಮಹಿಳಾ ಮೀಸಲಾತಿ ಮಸೂದೆಯ ವಿರುದ್ದ ಮಾಡುತ್ತಾ ಬಂದಿದ್ದು ನಮ್ಮ ದೇಶದ ಮಹಿಳಾ ಶಕ್ತಿಗಳನ್ನು ಹತ್ತಿಕುವ ಕೆಲಸ ಮಾಡುತ್ತಾ ಬಂದಿದ್ದು ಒಟ್ಟಾರೆ ಕಾಂಗ್ರೆಸ್ ಹಾಗೂ ಇಂಡಿ ಒಕ್ಕೂಟ ಮಹಿಳಾ ವಿರೋಧಿ ಎಂದು ರಾಜು ಕುರಡಗಿ ಆರೋಪಿಸಿದ್ದಾರೆ.
ಮಸೂದೆಗೆ ಅಂಗೀಕಾರ ನೀಡುವ ಅಮೂಲ್ಯ ಅವಕಾಶವನ್ನು ಸಂಸದರು ತಪ್ಪಿಸಿಕೊಳ್ಳಬಾರದು. ತಮ್ಮ ಹಕ್ಕಿನ ವಿರುದ್ಧ ನಿಂತವರನ್ನು ಮಹಿಳೆಯರು ಮರೆಯುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಯೊಂದು ಚುನಾವಣೆಯಲ್ಲೂ ಮಹಿಳೆಯರ ಈ ಹಕ್ಕನ್ನು ವಿರೋಧಿಸಿದವರು ಯಾರೇ ಆಗಿರಲಿ, ದೇಶದ ಮಹಿಳೆಯರು ಅವರನ್ನು ಕ್ಷಮಿಸಿಲ್ಲ ಎಂದು ಎಚ್ಡರಿಸಿದರು
ಹಿಂದೂಸ್ತಾನ್ ಸಮಾಚಾರ್ / lalita MP