
ಹಾಸನ, 17 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮೈಸೂರು ವಿಭಾಗದ ಜಿಲ್ಲೆಗಳ ಪಿಂಚಣಿದಾರರ ಹಾಗೂ ಬಿ.ಪಿ.ಎಫ್ ಚಂದಾದಾರರ ಕುಂದುಕೊರತೆ ಹಾಗೂ ಅಹವಾಲುಗಳನ್ನು ನಿವಾರಿಸಿಕೊಳ್ಳಲು ಏ.22ರಂದು ಬೆಳಗ್ಗೆ:10.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ವಿ.ಸಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಿಂಚಣಿ ಅದಾಲತ್ಅನ್ನು ಆಯೋಜಿಸಲಾಗಿರುತ್ತದೆ.
ಮಹಾಲೇಖಪಾಲರ ಕಚೇರಿಯಿಂದ ಡೆಪ್ಯೂಟಿ ಆಕೌಂಟೆಂಟ್ ಜನರಲ್, ಹಿರಿಯ ಲೆಕ್ಕಾಧಿಕಾರಿಗಳು, ಖಜಾನೆ ಇಲಾಖೆಯಿಂದ ಅಪರ ನಿರ್ದೇಶಕರು, ಪಿಂಚಣಿ ಪಾವತಿ ಮತ್ತು ನಿರ್ವಾಹಣಾ ಖಜಾನೆ ಬೆಂಗಳೂರು ಹಾಗೂ ಪಿಂಚಣಿ ಪಾವತಿ ಬ್ಯಾಂಕುಗಳ ಮುಖ್ಯ ವ್ಯವಸ್ಥಾಪಕರು/ ಪ್ರತಿನಿಧಿಗಳು ಜಿಲ್ಲಾ ಬ್ಯಾಂಕುಗಳು ವ್ಯವಸ್ಥಾಪಕರು ಹಾಗೂ ವಿಭಾಗದ ಜಂಟಿ ನಿರ್ದೇಶಕರು/ ಜಿಲ್ಲೆಗಳ ಉಪ ನಿರ್ದೇಶಕರು /ಸಹಾಯಕ ನಿರ್ದೇಶಕರು/ ಉಪ ಸಮನ್ವಯದೊಂದಿಗೆ ಪಿಂಚಣಿ ಆದಾಲತ್ ಕಾರ್ಯಕ್ರಮ ಇರುತ್ತದೆ.
ಜಿಲ್ಲೆಯ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನ ಎಲ್ಲಾ ಶಾಖೆಯ ವ್ಯವಸ್ಥಾಪಕರು ಹಾಗೂ ಪಿಂಚಣಿ ವಿಭಾಗದ ವಿಷಯ ನಿರ್ವಾಹಕರು ಕಡ್ಡಾಯವಾಗಿ ಹಾಜರಿದ್ದು ಪಿಂಚಣಿದಾರರ ಕುಂದು ಕೊರತೆ ಹಾಗೂ ಅಹವಾಲುಗಳಿಗೆ ಸೂಕ್ತ ಪರಿಹಾರ ನೀಡಲು ಸಹಕರಿಸುವಂತೆ ಜಿಲ್ಲಾ ಖಜಾನೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa