ಹೊಯ್ಸಳ ಸಿಬ್ಬಂದಿಗೆ ಎನ್ಜಿಇಆರ್ಎಸ್ಎಸ್-112 ಕಾರ್ಯಾಗಾರ
ತುಮಕೂರು, 17 ಏಪ್ರಿಲ್ (ಹಿ.ಸ.) : ಆ್ಯಂಕರ್ : ತುಮಕೂರು ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ನಿಯಂತ್ರಣ ಕೊಠಡಿ ವತಿಯಿಂದ ಎನ್ಜಿಇಆರ್ಎಸ್ಎಸ್-112 ಹಾಗೂ ಹೊಯ್ಸಳ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾರ್ಯಾಗಾರ ಆಯೋಜಿಸಲಾಯಿತು. ಕಾರ್ಯಾಗಾರದಲ್ಲಿ 112 ತುರ್ತು ಸೇವೆಯ ಕರ್ತವ್ಯ ನಿ
Camp


ತುಮಕೂರು, 17 ಏಪ್ರಿಲ್ (ಹಿ.ಸ.) :

ಆ್ಯಂಕರ್ : ತುಮಕೂರು ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ನಿಯಂತ್ರಣ ಕೊಠಡಿ ವತಿಯಿಂದ ಎನ್ಜಿಇಆರ್ಎಸ್ಎಸ್-112 ಹಾಗೂ ಹೊಯ್ಸಳ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾರ್ಯಾಗಾರ ಆಯೋಜಿಸಲಾಯಿತು.

ಕಾರ್ಯಾಗಾರದಲ್ಲಿ 112 ತುರ್ತು ಸೇವೆಯ ಕರ್ತವ್ಯ ನಿರ್ವಹಣೆ, ತ್ವರಿತ ಸ್ಪಂದನೆ, ಮಾಹಿತಿ ವಿನಿಮಯ ಹಾಗೂ ಎಂಡಿಟಿ ಬಳಕೆಯ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಯಿತು.

ಹೊಯ್ಸಳ ವಾಹನಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಆಧುನಿಕ ತಂತ್ರಜ್ಞಾನ ಬಳಕೆ ಮೂಲಕ ತುರ್ತು ಕರೆಗಳಿಗೆ ಪರಿಣಾಮಕಾರಿ ರೀತಿಯಲ್ಲಿ ಸ್ಪಂದಿಸುವ ವಿಧಾನಗಳನ್ನು ವಿವರಿಸಲಾಯಿತು. ಎಂಡಿಟಿ ಉಪಯೋಗಿಸುವ ಬಗ್ಗೆ ಪ್ರಾಯೋಗಿಕ ಮಾಹಿತಿಯನ್ನೂ ಹಂಚಿಕೊಳ್ಳಲಾಯಿತು.

ಪೊಲೀಸ್ ಇಲಾಖೆಯ ತುರ್ತು ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ಉದ್ದೇಶದಿಂದ ಈ ಕಾರ್ಯಾಗಾರ ಆಯೋಜಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande