ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ದರ, ದಾಸ್ತಾನು ಫಲಕ ಕಡ್ಡಾಯ : ಉಲ್ಲಂಘನೆ ಮಾಡಿದರೆ ಲೈಸನ್ಸ್ ರದ್ದು
ಧಾರವಾಡ, 15 ಏಪ್ರಿಲ್ (ಹಿ.ಸ.) : ಆ್ಯಂಕರ್ : ಧಾರವಾಡ ಜಿಲ್ಲೆಯ ರಸಗೊಬ್ಬರ ಸಗಟು ಹಾಗೂ ಚಿಲ್ಲರೆ ಮಾರಾಟಗಾರರು ತಮ್ಮ ಅಂಗಡಿಗಳ ಮುಂದೆ ಪ್ರತಿದಿನದ ರಸಗೊಬ್ಬರ ದರ ಮತ್ತು ಲಭ್ಯ ದಾಸ್ತಾನು ವಿವರಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಕ್ ಆರ್. ಎಚ್ಚರಿಕೆ ನೀಡಿ
DC Snehal


ಧಾರವಾಡ, 15 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಧಾರವಾಡ ಜಿಲ್ಲೆಯ ರಸಗೊಬ್ಬರ ಸಗಟು ಹಾಗೂ ಚಿಲ್ಲರೆ ಮಾರಾಟಗಾರರು ತಮ್ಮ ಅಂಗಡಿಗಳ ಮುಂದೆ ಪ್ರತಿದಿನದ ರಸಗೊಬ್ಬರ ದರ ಮತ್ತು ಲಭ್ಯ ದಾಸ್ತಾನು ವಿವರಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಕ್ ಆರ್. ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ನಡೆದ ರಸಗೊಬ್ಬರ, ಬೀಜ ಹಾಗೂ ಕೀಟನಾಶಕ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ನಿಗದಿಗಿಂತ ಹೆಚ್ಚಿನ ದರ ವಿಧಿಸುವುದು, ಅಕ್ರಮ ದಾಸ್ತಾನು ಇಟ್ಟುಕೊಳ್ಳುವುದು ಅಥವಾ ಕೃತಕ ಅಭಾವ ಸೃಷ್ಟಿಸುವಂತಹ ಪ್ರಕರಣಗಳಲ್ಲಿ ಲೈಸನ್ಸ್ ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಳೆದ 2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 57,069.62 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳು ಮಾರಾಟವಾಗಿವೆ. ಇದರಲ್ಲಿ ಯೂರಿಯಾ 26,582.61 ಮೆಟ್ರಿಕ್ ಟನ್, ಡಿಎಪಿ 9,040.23 ಮೆಟ್ರಿಕ್ ಟನ್, ಪೊಟಾಷ್ 1,581.23 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 19,157.50 ಮೆಟ್ರಿಕ್ ಟನ್ ಹಾಗೂ ಎಸ್ಎಸ್ಪಿ 708.01 ಮೆಟ್ರಿಕ್ ಟನ್ ಸೇರಿವೆ ಎಂದು ಅವರು ಮಾಹಿತಿ ನೀಡಿದರು.

ರಸಗೊಬ್ಬರ ಉತ್ಪಾದನೆ ಮತ್ತು ವಿತರಣಾ ಸಂಸ್ಥೆಗಳು ಸರಕು ಆಗಮಿಸುವ ಮೊದಲು ಹಂಚಿಕೆಗೊಳ್ಳುವ ಮಾರಾಟಗಾರರ ವಿವರವನ್ನು ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಸೂಚಿಸಿದ ಅವರು, ಜಿಲ್ಲೆಗೆ ಹಂಚಿಕೆಯಾಗುವ ಪ್ರಮಾಣದಲ್ಲಿ ಶೇಕಡಾ 25ರಷ್ಟು ಕಾಪು ದಾಸ್ತಾನು ಇಟ್ಟುಕೊಳ್ಳುವುದು ಕಡ್ಡಾಯ ಎಂದು ಹೇಳಿದರು.

ಸಹಾಯಧನ ಆಧಾರಿತ ರಸಗೊಬ್ಬರಗಳ ಜೊತೆಗೆ ಸಾವಯವ ಉತ್ಪನ್ನಗಳು, ಕೀಟನಾಶಕಗಳು, ನ್ಯಾನೋ ರಸಗೊಬ್ಬರ, ಸೂಕ್ಷ್ಮ ಪೋಷಕಾಂಶಗಳು ಹಾಗೂ ಇತರ ಉತ್ಪನ್ನಗಳನ್ನು ಬಲವಂತವಾಗಿ ಜೋಡಿಸಿ ಮಾರಾಟ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.

ರೈತರಿಗೆ ರಸಗೊಬ್ಬರವನ್ನು ಅವರ ಎಫ್ಐಡಿ ಆಧಾರಿತ ಜಮೀನಿನ ವಿಸ್ತೀರ್ಣದ ಪ್ರಕಾರ ಮಾತ್ರ ಮಾರಾಟ ಮಾಡಬೇಕು. ಒಂದು ಎಕರೆಗೆ ಒಂದು ತಿಂಗಳಿಗೆ ಒಂದು ಚೀಲದಂತೆ ಯೂರಿಯಾ ಮಾರಾಟ ಮಾಡುವ ನಿಯಮ ಪಾಲನೆ ಕಡ್ಡಾಯವಾಗಿದೆ. ಎಲ್ಲ ಮಾರಾಟಗಳು ಪಿಒಎಸ್ ಯಂತ್ರ ಮತ್ತು ಕೆ-ಕಿಸಾನ್ (ರೈತಮಿತ್ರ) ತಂತ್ರಾಂಶದ ಮೂಲಕವೇ ನಡೆಯಬೇಕು ಎಂದು ಅವರು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande