



ಕೊಪ್ಪಳ, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಲ್ಡೋಟ ಕಾರ್ಖಾನೆ ಆಗಲು ಸಿಎಂ ಸಿದ್ದರಾಮಯ್ಯ ಬಿಡಬಾರದು, ಅವರಿಗೆ ಜನರ ಸೇವೆಗಿಂತ ದೊಡ್ಡ ಕೆಲಸ ಇನ್ನೇನಿದೆ, ಬಿಟ್ಟರೆ ಸ್ಮಶಾನ ಆಗುತ್ತದೆ ಮತ್ತೆ ಜನಪ್ರತಿನಿಧಿಗಳು ಬಾಂಬೆ ಸೇರಬೇಕಾಗುತ್ತದೆ ಎಂದು ಮಾಜಿ ಸಚಿವ, ಎಂಎಲ್ಸಿ ಹೆಚ್. ವಿಶ್ವನಾಥ ಆತಂಕ ವ್ಯಕ್ತಪಡಿಸಿದರು.
ಅವರು ನಗರಸಭೆ ಮುಂದುಗಡೆ ನಡೆಯುತ್ತಿರುವ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಹೋರಾಟದ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹದ 167ನೇ ದಿನ ವೇದಿಕೆಗೆ ಬಂದು ಹೋರಾಟ ಬೆಂಬಲಿಸಿ ಮಾತನಾಡಿದರು.
167 ದಿನ ನಿರಂತರ ಹೋರಾಟ ಮಾಡೋದು ಅಂದ್ರೆ ಸಾಮಾನ್ಯ ವಿಷಯ ಅಲ್ಲ, ಮಂತ್ರಿ ಶಿವರಾಜ ತಂಗಡಗಿ ಅವರು, ಶಾಸಕರು ತೀವ್ರವಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಆರೋಗ್ಯ ಬಹಳ ಮುಖ್ಯ ಮತ್ತು ಪ್ರಮುಖ ವಿಷಯ, ಅದೇ ಇಲ್ಲ ಅಂದ್ರೆ ಮಾಡೋಕೆ ಇನ್ನೇನಿದೆ, ಇಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಹೆಚ್ಚು ಬೆಂಬಲ ಕೊಡಬೇಕು ಎಂದರು.
ಸರ್ವೋಚ್ಚ ನ್ಯಾಯಾಲಯದ ಆದೇಶ ಒಂದಿದೆ, ಜಿಲ್ಲಾಧಿಕಾರಿ ಅವರು ಕೆರೆ ಸಂರಕ್ಷಣೆ ಮಾಡಲು ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ, ಇಲ್ಲಿ ಅವರೇ ಅದನ್ನು ಮಾರಿದ್ದಾರೆ ಕೂಡಲೇ ಒಂದು ಕೇಸ್ ಹಾಕಿ ಕಾನೂನು ಹೋರಾಟ ಮಾಡಬೇಕು, ವಿರೋಧ ಪಕ್ಷ ಏನು ಮಾಡ್ತಿವೆ, ಅಶೋಕ ಅವರು ಏನು ಮಾಡ್ತಾ ಇದಾರೆ, ಇದಕ್ಕಿಂತ ದೊಡ್ಡ ವಿಷಯ ಬೇಕಾ?, ಈ ಹೋರಾಟಕ್ಕೆ ಬೆಂಬಲ ಇದೆ, ಪರಿಣಾಮಕಾರಿ ಆಗಿ ಮಾಡಿ ಗೆಲ್ಲೋಣ ಎಂದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಅವರು ಮಾತನಾಡಿ, ಶಾಸಕ, ಸಂಸದ, ಸಚಿವರು ಇತ್ತ ಗಮನ ಕೊಡ್ತಿಲ್ಲ, ಗವಿಶ್ರೀಗಳು ಹೇಳಿದ ಹಾಗೆ ಸರಕಾರ ಅನುಮತಿ ಕೊಟ್ಟಿದೆ ಅವರೇ ಅದನ್ನು ಸರಿಪಡಿಸಿ ಎಂದರೂ ಕೇರ್ ಮಾಡ್ತಿಲ್ಲ, ಕೂಡಲೇ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗಬೇಕು ಎಂದರು.
ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮಹಿಳಾ ನಾಯಕಿಯರಾದ ಸರೋಜಾ ಬಾಕಳೆ, ಕಾವ್ಯಾ ಗಡಾದ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ವಕೀಲರಾದ ಬಿ.ಬಿ ಪಾಟೀಲ್, ಎಚ್.ವೈ ಕಮ್ಮಾರ, ಎನ್. ವಿ ಹಾಳಕೇರಿ, ನಿವೃತ್ತ ಕಾರ್ಮಿಕ ನಿರೀಕ್ಷಕ ಶಾಂತಯ್ಯ ಅಂಗಡಿ, ರಾಜಶೇಖರ ಏಳುಭಾವಿ, ರವಿ ಕಾಂತನವರ, ಬಸವರಾಜ ನರೇಗಲ್, ಎಸ್.ಎಂ ಕಂಬಾಳಿಮಠ, ಶರಣು ಪಾಟೀಲ್, ಶರಣು ಶೆಟ್ಟರ್, ಮಹಾದೇವಪ್ಪ ಮಾವಿನಮಡು, ನರೇಂದ್ರ ಪಾಟೀಲ್, ಯಮನೂರಪ್ಪ ಹಾಲಳ್ಳಿ ಬಸಾಪುರ, ಗರುರಾಜ ಬಸಾಪುರ, ಹನುಮಂತ ಬಸಾಪುರ, ಬಸವರಾಜಪ್ಪ ಶೆಟ್ಟರ್, ಬಸಪ್ಪ ಕಲಕೇರಿ, ನಾಗರಾಜ ಕುಷ್ಟಗಿ, ಶಿವಪ್ಪ ಹಲಗೇರಿ, ಗುರಪ್ಪ ಕಲಕೇರಿ, ಪತ್ರಕರ್ತ ರುದ್ರಪ್ಪ ಭಂಡಾರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಸಂಜೀವದಾಸ್ ಕೌಜಗೇರಿ, ರಾಮಲಿಂಗಯ್ಯ ಶಾಸ್ತ್ರಿ, ಚನ್ನಮ್ಮ ಕಲಕೇರಿ, ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್