
ಬಳ್ಳಾರಿ, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಪುಟ್ಪಾತ್ಗಳನ್ನು ಅತಿಕ್ರಮಣ ಮಾಡಿಕೊಂಡು ವ್ಯಾಪಾರಗಳನ್ನು ನಡೆಸುತ್ತಿದ್ದ 65 ಸ್ಥಳಗಳಲ್ಲಿ ಅತಿಕ್ರಮಣವನ್ನು ಪಾಲಿಕೆ ಅಧಿಕಾರಿಗಳು ತೆರವು ಮಾಡುವ ಕಾರ್ಯವನ್ನು ಬುಧವಾರ ನಡೆಸಿದ್ದಾರೆ.
ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮುನಾಫ್ ಪಟೇಲ್ ಅವರು, ನಗರದ ವಿವಿಧ ರಸ್ತೆಗಳ ಪಾದಾಚಾರಿಗಳ ರಸ್ತೆಗಳನ್ನು ಅಂಗಡಿಗಳವರು ಅತಿಕ್ರಮಣ ಮಾಡಿಕೊಂಡು, ರಸ್ತೆಗಳನ್ನು ಇಕ್ಕಟ್ಟಾಗಿಸಿದ್ದಾರೆ. ಇದನ್ನು ಗಮನಿಸಿ ಗಡಿಗೆ ಚೆನ್ನಪ್ಪ ವೃತ್ತದಿಂದ ಎಪಿಎಂಸಿ, ಸಂಗಂ ಸರ್ಕಲ್, ತಾರಾನಾಥ ಆಸ್ಪತ್ರೆ, ದುರ್ಗಮ್ಮ ಗುಡಿಯ ವರೆಗೆ ಮತ್ತು ತಾಳೂರು ರಸ್ತೆ ಕ್ರಾಸ್ ಎಲ್ಲಾ ಕಡೆ ಅತಿಕ್ರಮಣವನ್ನು ತೆರವುಗೊಳಿಸಲಾಗುತ್ತಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್