ವಿಶೇಷ ರೈಲುಗಳ ಅವಧಿ ವಿಸ್ತರಣೆ
ಬೆಂಗಳೂರು, 15 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು, ದಕ್ಷಿಣ ಮಧ್ಯ ರೈಲ್ವೆಯು ಈ ಕೆಳಗಿನ ವಿಶೇಷ ರೈಲುಗಳ ಸೇವೆ ವಿಸ್ತರಿಸಿದೆ. ಕಾಕಿನಾಡ ಟೌನ್ - ಮೈಸೂರು ನಡುವೆ ಸಂಚರಿಸುವ ದ್ವಿ-ಸಾಪ್ತಾಹಿಕ ವಿಶೇಷ ರೈಲು (ಸಂಖ್ಯೆ 07033) ಈ ಹಿಂದೆ ಏಪ್
ವಿಶೇಷ ರೈಲುಗಳ ಅವಧಿ ವಿಸ್ತರಣೆ


ಬೆಂಗಳೂರು, 15 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು, ದಕ್ಷಿಣ ಮಧ್ಯ ರೈಲ್ವೆಯು ಈ ಕೆಳಗಿನ ವಿಶೇಷ ರೈಲುಗಳ ಸೇವೆ ವಿಸ್ತರಿಸಿದೆ.

ಕಾಕಿನಾಡ ಟೌನ್ - ಮೈಸೂರು ನಡುವೆ ಸಂಚರಿಸುವ ದ್ವಿ-ಸಾಪ್ತಾಹಿಕ ವಿಶೇಷ ರೈಲು (ಸಂಖ್ಯೆ 07033) ಈ ಹಿಂದೆ ಏಪ್ರಿಲ್ 13ರವರೆಗೆ ಮಾತ್ರ ಸಂಚರಿಸಲು ನಿಗದಿಯಾಗಿತ್ತು. ಇದನ್ನು ಏಪ್ರಿಲ್ 17 ಮತ್ತು 20 ರಂದು ಎರಡು ಹೆಚ್ಚುವರಿ ಟ್ರಿಪ್ಗಳಿಗಾಗಿ ವಿಸ್ತರಿಸಲಾಗಿದೆ. ಅಂತೆಯೇ, ಮೈಸೂರು - ಕಾಕಿನಾಡ ಟೌನ್ ವಿಶೇಷ ರೈಲು (ಸಂಖ್ಯೆ 07034) ಏ. 14ರವರೆಗೆ ಮಾತ್ರ ಇತ್ತು; ಈಗ ಏಪ್ರಿಲ್ 18 ಮತ್ತು 21 ರಂದು ಹೆಚ್ಚುವರಿ ಸಂಚಾರ ನಡೆಸಲಿದೆ.

ಹೈದರಾಬಾದ್ - ಬೆಳಗಾವಿ ನಡುವಿನ ಸಾಪ್ತಾಹಿಕ ವಿಶೇಷ ರೈಲು (ಸಂಖ್ಯೆ 07043) ಈ ಹಿಂದೆ ಏಪ್ರಿಲ್ 16 ರಂದು ಕೊನೆಯ ಸಂಚಾರ ನಡೆಸಬೇಕಿತ್ತು. ಇದೀಗ ಈ ಸೇವೆಯನ್ನು ಏಪ್ರಿಲ್ 23 ರವರೆಗೆ (ಒಂದು ಟ್ರಿಪ್) ವಿಸ್ತರಿಸಲಾಗಿದೆ. ಇದರ ಪ್ರತಿಯಾಗಿ, ಬೆಳಗಾವಿ - ಹೈದರಾಬಾದ್ ರೈಲು (ಸಂಖ್ಯೆ 07044) ಏಪ್ರಿಲ್ 24 ರಂದು ಹೆಚ್ಚುವರಿ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande