ತುರ್ತು ಸಂದರ್ಭದಲ್ಲಿ 112 ಕರೆ ಮಾಡಿ – ಪೊಲೀಸ್ ಇಲಾಖೆ ಮನವಿ
ಬಾಗಲಕೋಟ, 15 ಏಪ್ರಿಲ್ (ಹಿ.ಸ.) : ಆ್ಯಂಕರ್ : ಅಪಾಯದ ಕ್ಷಣದಲ್ಲಿ ಗಾಬರಿಯಾಗದೆ ತಕ್ಷಣ 112ಕ್ಕೆ ಕರೆ ಮಾಡುವಂತೆ ಬಾಗಲಕೋಟೆ ಜಿಲ್ಲೆಯ ಪೊಲೀಸ್ ಇಲಾಖೆ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದೆ. ಈ ಸೇವೆ 24x7 ಲಭ್ಯವಿದ್ದು, ನಾಗರಿಕರ ಸುರಕ್ಷತೆಗೆ ಸದಾ ಸಿದ್ಧವಾಗಿದೆ.112 ಸಹಾಯವಾಣಿ ಮೂಲಕ ಪೊಲ
ಪೊಲೀಸ್


ಬಾಗಲಕೋಟ, 15 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಅಪಾಯದ ಕ್ಷಣದಲ್ಲಿ ಗಾಬರಿಯಾಗದೆ ತಕ್ಷಣ 112ಕ್ಕೆ ಕರೆ ಮಾಡುವಂತೆ ಬಾಗಲಕೋಟೆ ಜಿಲ್ಲೆಯ ಪೊಲೀಸ್ ಇಲಾಖೆ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದೆ.

ಈ ಸೇವೆ 24x7 ಲಭ್ಯವಿದ್ದು, ನಾಗರಿಕರ ಸುರಕ್ಷತೆಗೆ ಸದಾ ಸಿದ್ಧವಾಗಿದೆ.112 ಸಹಾಯವಾಣಿ ಮೂಲಕ ಪೊಲೀಸ್ ಸಹಾಯ, ಅಗ್ನಿಶಾಮಕ ಸೇವೆ ಹಾಗೂ ಆಂಬುಲೆನ್ಸ್ ಸೌಲಭ್ಯಗಳನ್ನು ತಕ್ಷಣ ಪಡೆಯಬಹುದಾಗಿದೆ. ಅಪರಾಧ, ಗಲಾಟೆ, ಕಿರುಕುಳ ಸೇರಿದಂತೆ ಯಾವುದೇ ಕಾನೂನು ಸಮಸ್ಯೆಗಳಿಗೆ ಪೊಲೀಸರು ತ್ವರಿತವಾಗಿ ಸ್ಪಂದಿಸಲಿದ್ದಾರೆ.

ಅದೇ ರೀತಿ ಬೆಂಕಿ ಅವಘಡಗಳು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಅಗ್ನಿಶಾಮಕ ದಳದಿಂದ ತಕ್ಷಣದ ನೆರವು ಲಭ್ಯವಿದ್ದು, ಆರೋಗ್ಯ ಸಂಬಂಧಿತ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇವೆಯ ಮೂಲಕ ವೇಗವಾದ ಚಿಕಿತ್ಸೆ ಒದಗಿಸಲಾಗುತ್ತದೆ.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಅಪಾಯದ ಸಂದರ್ಭಗಳಲ್ಲಿ ತ್ವರಿತ ಸಹಾಯ ಒದಗಿಸಲಾಗುತ್ತದೆ.

ನಿಮ್ಮ ಒಂದು ಕರೆ ಜೀವ ಉಳಿಸಬಹುದು ಎಂಬುದನ್ನು ಮನಗಂಡು, ತುರ್ತು ಸಂದರ್ಭಗಳಲ್ಲಿ ಸಮಯ ವ್ಯರ್ಥ ಮಾಡದೆ ತಕ್ಷಣ 112ಕ್ಕೆ ಕರೆ ಮಾಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande