
ಕೊಪ್ಪಳ, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಎರಡು ಧರ್ಮದ ನಡುವೆ ಪ್ರೀತಿ, ಪ್ರೇಮ, ಪ್ರಣಯಗಳಿಗೆ ಲವ್ ಜಿಹಾದ್ ಎನ್ನುವದು ಮೂರ್ಖತನ, ಎಲ್ಲಾ ಖುಕೃತ್ಯಕ್ಕೆ ಕಾರಣ ಕಾಂಗ್ರೆಸ್ ಕಡೆಗೆ ಬೊಟ್ಟು ಮಾಡಿ ತೋರಿಸುವದು ಕೇವಲ ರಾಜಕೀಯ ಆಪಾದನೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಎಂ. ಗೊಂಡಬಾಳ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಬಿಜೆಪಿಯ ಡಾ. ಬಸವರಾಜ ಕ್ಯಾವಟರ್ ಹೇಳಿಕೆಗೆ ಪ್ರತ್ಯಾರೋಪ ಮಾಡಿರುವ ಅವರು, ಬಿಜೆಪಿಯ ದೊಡ್ಡ ನಾಯಕರ ಮಕ್ಕಳು, ಮೊಮ್ಮಕ್ಕಳು ಮುಸ್ಲಿಂ ಮಹಿಳೆ ಪುರುಷರನ್ನು ಮದುವೆ ಆದಾಗ ಅದನ್ನು ಪ್ರಶ್ನೆ ಮಾಡದೇ ಸಾಮಾನ್ಯ ಜನರು ಮಾಡಿದಾಗ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ವ್ಯಾದಿ ಬೆಳೆಸಿಕೊಂಡಿದ್ದಾರೆ.
ನೈಸರ್ಗಿಕವಾಗಿ ಏರ್ಪಡುವ ಪ್ರೀತಿಗೆ ನಮ್ಮ ವಿರೋಧ ಇಲ್ಲ, ಆದರೆ ಉದ್ದೇಶ ಹೊಂದಿದ್ದರೆ ಅದನ್ನು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರೂ ಸಹ ಒಪ್ಪುವುದಿಲ್ಲ. ಮೇಲಾಗಿ ಇಂತಹ ಮಟ್ಕಾ ಬುಕ್ಕಿಗಳು, ದುಶ್ಚಟ ಮಾಡುವವರನ್ನು ಮುಸ್ಲಿಂ ಧರ್ಮ ಹಾಗೂ ಖುರಾನ್ ಒಪ್ಪುವದೇ ಇಲ್ಲ ಅಂತಾದ್ರಲ್ಲಿ ಲವ್ ಜಿಹಾದ್ ಪ್ರಶ್ನೆನೇ ಬರುವದಿಲ್ಲ. ಕಾಂಗ್ರೆಸ್ ಸರಕಾರ ಮಾಡುವ ಒಳ್ಳೆಯ ಕೆಲಸ ಸಹಿಸದೇ ಅಧಿಕಾರಕ್ಕಾಗಿ ಇಂತಹ ಹೇಳಿಕೆ ಕೊಡಬಾರದು ಹಾಗೂ ಇಂತಹ ಹೇಳಿಕೆಗೆ ಜವಾಬ್ದಾರಿಯುತ ಮಾಧ್ಯಮಗಳು ಸಹ ಬೆಂಬಲಿಸಬಾರದು ಎಂದು ವಿನಂತಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದು ಅಂತಹ ಕೃತ್ಯಗಳಿಗೆ ಅವಕಾಶ ನೀಡದೇ ಕೇಸ್ ದಾಖಲು ಮಾಡುತ್ತಿರುವದರಿಂದ ಬಯಲಿಗೆ ಬರುತ್ತಿವೆ. ರಾಜಕೀಯಕ್ಕಾಗಿ ಮುಸ್ಲಿಂ ತುಷ್ಟೀಕರಣ ಎನ್ನುವದು ಮತ ಬ್ಯಾಂಕಿಗಾಗಿ ಅಲ್ಲವೇ?. ಕಾಂಗ್ರೆಸ್ ಮುಖಂಡರು ಮಸೀದಿಗೆ ಹೋದರೆ ಮುಸ್ಲಿಂ ತುಷ್ಟೀಕರಣ ಎನ್ನುವದು ನೀವು ಹೋಗಿ ಬರುವುದಕ್ಕೆ ಏನೆಂದು ಹೆಸರು ಕೊಡಬೇಕು. ತಪ್ಪು ಮಾಡುವ ವ್ಯಕ್ತಿ ಯಾರೇ ಆದರೂ ಶಿಕ್ಷೆ ಆಗಲೇಬೇಕು. ದಾಖಲೆ ಇಲ್ಲದೇ ಕೇವಲ ಗಾಳಿಯಲ್ಲಿ ಗುಂಡು ಹಾರಿಸಬಾರದು. ಇನ್ನು ಮಾತನಾಡುವ ಮೊದಲು ಸಾಕ್ಷಿ ಕೊಟ್ಟು ಮಾತನಾಡಬೇಕು, ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್