ಲವ್ ಜಿಹಾದ್ ಹಿಂದೆ ಕಾಂಗ್ರೆಸ್ : ಬಸವರಾಜ ಕ್ಯಾವಟರ್
ಬಳ್ಳಾರಿ, 15 ಏಪ್ರಿಲ್ (ಹಿ.ಸ.) : ಆ್ಯಂಕರ್ : ತಾಲೂಕಿನ ಅಳವಂಡಿ ಗ್ರಾಮದ ಮುಸ್ತಫಾ ಖಾದ್ರಿ ಎಂಬಾತ ನಡೆಸುತ್ತಿರುವ ಲವ್ ಜಿಹಾದ್ ಹಿಂದೆ ಕಾಂಗ್ರೆಸ್ ಪಕ್ಷ ಹಾಗೂ ಸರಕಾರ ನೇರವಾಗಿ ಕೆಲಸ ಮಾಡುತ್ತಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಬಸವರಾಜ ಕ್ಯಾವಟರ್ ಆರೋಪಿಸಿದ್ದಾರೆ. ಈ ಕ
ಲವ್ ಜಿಹಾದ್ ಹಿಂದೆ ಕಾಂಗ್ರೆಸ್ - ಬಸವರಾಜ ಕ್ಯಾವಟರ್ ಆರೋಪ


ಬಳ್ಳಾರಿ, 15 ಏಪ್ರಿಲ್ (ಹಿ.ಸ.) :

ಆ್ಯಂಕರ್ : ತಾಲೂಕಿನ ಅಳವಂಡಿ ಗ್ರಾಮದ ಮುಸ್ತಫಾ ಖಾದ್ರಿ ಎಂಬಾತ ನಡೆಸುತ್ತಿರುವ ಲವ್ ಜಿಹಾದ್ ಹಿಂದೆ ಕಾಂಗ್ರೆಸ್ ಪಕ್ಷ ಹಾಗೂ ಸರಕಾರ ನೇರವಾಗಿ ಕೆಲಸ ಮಾಡುತ್ತಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಬಸವರಾಜ ಕ್ಯಾವಟರ್ ಆರೋಪಿಸಿದ್ದಾರೆ.

ಈ ಕುರಿತು, ರಾಜ್ಯದಲ್ಲಿ ಹಿಂದು ಯುವತಿಯರನ್ನು ಟಾರ್ಗೇಟ್ ಮಾಡಿ, ಖೆಡ್ಡಾಕ್ಕೆ ಕೆಡವಲಾಗುತ್ತಿದೆ. ಪ್ರೀತಿಯ ಹೆಸರಲ್ಲಿ ಬಲೆಗೆ ಬಿಳಿಸಿಕೊಂಡು ಯುವತಿಯರ ಜೀವನ ಹಾಳು ಮಾಡುವ ದಂಧೆ ಬೇರೂರಿದೆ. ಕಳೆದೊಂದು ವಾರದ ಅವಧಿಯಲ್ಲಿ ಹುಬ್ಬಳ್ಳಿಯಲ್ಲಿ ಮೂರು ಹಾಗೂ ಕೊಪ್ಪಳದಲ್ಲಿ ಒಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಇಂತಹ ಪ್ರಕರಣ ಯತೇಚ್ಛವಾಗಿ ಬೆಳಕಿಗೆ ಬರುತ್ತಿವೆ. ಈ ಮೂಲಕ ಕಾಂಗ್ರೆಸ್ ನಾಯಕರ ಕೃಪಾ ಕಟಾಕ್ಷದಿಂದಲೇ ಲವ್ ಜಿಹಾದ್ ಪ್ರಕರಣ ನಡೆಯುತ್ತಿವೆ. ಕೊಪ್ಪಳ ತಾಲೂಕಿನಲ್ಲಿ ನಡೆದ ಲವ್ ಜಿಹಾದ್ ನಡೆಸಿದ ಯುವಕನ ಬಳಿ ವಶ ಪಡೆದ ಎರಡು

ಮೊಬೈಲ್ಗಳ ಪೈಕಿ ಒಂದು ಮೊಬೈಲ್ ನಲ್ಲಿ 3 ಸಾವಿರ ಫೋಟೋ, 6 ಸಾವಿರ ವಿಡಿಯೋ ಮತ್ತು ಇನ್ನೊಂದು ಮೊಬೈಲ್ ನಲ್ಲಿ 4 ಸಾವಿರ ಫೋಟೋ ಹಾಗೂ 3700 ವಿಡಿಯೋ ಇದ್ದು, ಈ ಎಲ್ಲಾ ವಿಡಿಯೋ ಮತ್ತು ಫೋಟೋದಲ್ಲಿ ಹಿಂದು ಸಮುದಾಯದ 16 ಮಂದಿ ಮಹಿಳೆಯರ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋ ಸಂಗ್ರಹಿಸಿಕೊಂಡಿರುವುದು ಕಂಡುಬಂದಿದೆ.

ಇಷ್ಟೆಲ್ಲಾ ಸಾಕ್ಷ್ಯಾಧ್ಯಾರಗಳಿದ್ದರೂ ಪೊಲೀಸರು ಯುವಕನನ್ನು ಬಂಧಿಸದಿರುವುದು ಜಿಲ್ಲೆಯ ಕಾಂಗ್ರೆಸ್ ಶಾಸಕ- ಸಂಸದರ ಒತ್ತಡಕ್ಕೆ ಪೊಲೀಸರು ಮಣಿದಂತೆ ಕಾಣುತ್ತಿದೆ. ಹೀಗಾಗಿ ಹಿಂದು ಯುವತಿಯರು ಇನ್ನಾದರೂ ಜಾಗೃತಗೊಳ್ಳಬೇಕು. ಇಂತಹ ಲವ್ ಜಿಹಾದ್ ಷಡ್ಯಂತ್ರಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬಾರದು. ಅಲ್ಲದೆ, ಇಂತಹ ವಿಚಾರದಲ್ಲಿ ಮತ ಬ್ಯಾಂಕ್ ಗೋಸ್ಕರ ಕಾಂಗ್ರೆಸ್ ಸರಕಾರ, ತುಷ್ಠಿಕರಣ ನೀತಿ ಅನುಸರಿಸುವುದು ಸರಿಯಲ್ಲ.

ಲವ್ ಜಿಹಾದ್ ನಡೆಸುತ್ತಿರುವ ಆರೋಪಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮುಖಂಡರಾದ ಬಸವರಾಜ ಕ್ಯಾವಟರ್ ಅವರು ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande