ಆತ್ಮನಿರ್ಭರ ಯೋಜನೆ ರೈತರ ಸಶಕ್ತಿಕರಣಕ್ಕೆ ಅನಕೂಲ : ಜಿಲ್ಲಾಧಿಕಾರಿ ಸ್ನೇಹಲ್. ಆರ್.
ಧಾರವಾಡ, 15 ಏಪ್ರಿಲ್ (ಹಿ.ಸ.) : ಆ್ಯಂಕರ್ : ಆತ್ಮನಿರ್ಭರ ಭಾರತ ಕಾರ್ಯಕ್ರಮದಡಿಯಲ್ಲಿ ಜಾರಿಯಾಗುತ್ತಿರುವ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಘಟಕಗಳ ಯೋಜನೆಗೆ ಸಂಬಂಧಿಸಿದಂತೆ ಇಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಮಿತಿ ಸಭೆಯು ಜಿಲ್ಲಾಧಿಕಾರಿ ಸ್ನೇಹಲ್
Dc


ಧಾರವಾಡ, 15 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಆತ್ಮನಿರ್ಭರ ಭಾರತ ಕಾರ್ಯಕ್ರಮದಡಿಯಲ್ಲಿ ಜಾರಿಯಾಗುತ್ತಿರುವ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಘಟಕಗಳ ಯೋಜನೆಗೆ ಸಂಬಂಧಿಸಿದಂತೆ ಇಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಮಿತಿ ಸಭೆಯು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರ ಅಧ್ಯಕ್ಷತೆಯಲ್ಲಿ ಜರುಗಿತ್ತು.

ಅವರು, ಆತ್ಮನಿರ್ಭರ ಭಾರತ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆದ್ಯತೆ ನೀಡಿ, ಮಾತನಾಡಿದರು. 2020-21 ರಿಂದ ಜಾರಿಯಲ್ಲಿರುವ ಪ್ರಸ್ತುತ ಕಾರ್ಯಕ್ರಮವು ಸ್ವಯಂ ಉದ್ಯೋಗ ಮಾಡುವ ಫಲಾನುಭವಿಗಳಿಗೆ ಅತ್ಯಂತ ಉಪಯುಕ್ತವಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಲು ಅರ್ಹ ಸಾರ್ವಜನಿಕರು ಮುಂದೆ ಬರಬೇಕೆಂದು ಅವರು ತಿಳಿಸಿದರು.

ಆತ್ಮನಿರ್ಭರ ಯೋಜನೆಯು ಗರಿಷ್ಠ 15 ಲಕ್ಷ ರೂಪಾಯಿಗೆ ಮಿತಿಗೊಳಪಟ್ಟು ಶೇ. 50 ರ ಸಹಾಯ ಧನದೊಂದಿಗೆ ಸಾಲ ನೀಡುವ ಕಾರ್ಯಕ್ರಮವಾಗಿದ್ದು, ಯಾವುದೇ ಸಿದ್ಧ ಆಹಾರ ಅಥವಾ ಮೌಲ್ಯವರ್ಧಿತ ಉತ್ಪನ್ನಗಳ ಘಟಕಗಳನ್ನು ಸ್ಥಾಪಿಸಲು ಅವಕಾಶ ಇರುತ್ತದೆ ಎಂದು ಹೇಳಿದರು.

ವೈಯಕ್ತಿಕ ಉದ್ದಿಮೆಗಳು, ಗುಂಪು ಚಟುಗಟಿಕೆಗಳು, ಪ್ರಾಥಮಿಕ ಬಂಡವಾಳ(ಬೀಜಧನ), ಸಾಮಾನ್ಯ ಮೂಲಭೂತ ಸೌಕರ್ಯ, ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕ ಕೆಲಸಕಾರ್ಯಗಳಿಗೆ ಸಾಲ ಕೊಡುವ ಯೋಜನೆ ಇದ್ದು, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಫಲಾನುಭವಿಗಳಿಗೆ ತಮ್ಮ ಹಂತದಲ್ಲಿಯೇ ಸಹಾಯ ಮಾಡಲು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು (ಡಿ.ಆರ್.ಪಿ.) ನೇಮಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಸಮನ್ವಯ ಸಂಸ್ಥೆಯಾಗಿ ಕಪೆಕ್ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಕೃಷಿ ಇಲಾಖೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಫಲಾನುಭವಿಗಳು ತಮ್ಮ ವಹಿವಾಟಿನ ಬ್ಯಾಂಕುಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಹೇಳಿದರು.

ಧಾರವಾಡ ಜಿಲ್ಲೆಯಲ್ಲಿ 540 ಘಟಕಗಳಿಗೆ ಸಾಲ ಮಂಜೂರಾಗಿದ್ದು, ಬಹಳಷ್ಟು ಕುಟುಂಬಗಳ ಜೀವನ ನಿರ್ವಹಣೆಗೆ ಆದಾಯ ದೊರೆತಂತಾಗಿದೆ. ಅಲ್ಲದೆ ಪ್ರತಿ ಘಟಕದಲ್ಲೂ ಹಲವಾರು ಜನರಿಗೆ ದೈನಂದಿನ ಕೆಲಸ ಸಿಗುವ ಮೂಲಕ ಕಾರ್ಮಿಕರಿಗೂ ಜೀವನಾಂಶ ಗಳಿಸಿಕೊಳ್ಳಲು ಅನುಕೂಲವಾಗಿದೆ.

100 ಕ್ಕೂ ಹೆಚ್ಚು ಪ್ರಸ್ತಾವನೆಗಳು ವಿವಿಧ ಬ್ಯಾಂಕುಗಳಲ್ಲಿ ಪರಿಶೀಲನೆಯಲ್ಲಿದ್ದು, ಇಷ್ಟರಲ್ಲೇ ಸಾಲ ಮಂಜೂರಾಗುತ್ತದೆ. ಇತರೆ ಯೋಜನೆಗೆ ಹೋಲಿಸಿದಲ್ಲಿ ಪ್ರಸ್ತುತ ಕಾರ್ಯಕ್ರಮದಲ್ಲಿ ಸಾಲ ನೀಡುವ ಪ್ರಕ್ರಿಯೆಯನ್ನು ಬಹಳಷ್ಟು ಸರಳೀಕೃತಗೊಳಿಸಿದೆ. ಇದಕ್ಕೆ ಸಂಬಂಧಿಸಿ ಜಿಲ್ಲಾ ಮಟ್ಟದ ಸಮಿತಿ (ಡಿ.ಎಲ್.ಸಿ.) ಉಸ್ತುವಾರಿ ವಹಿಸಿಕೊಂಡಿದ್ದು ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದರು.

ಫಲಾನುಭವಿಗಳ ಹಿತದೃಷ್ಟಿಯಿಂದ ಮತ್ತು ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸುವ ಆಶಯದಿಂದ ಪ್ರಸ್ತುತ ಸಾಲ ಸಂಪರ್ಕಿತ ಯೋಜನೆಯನ್ನು 2026ನೇ ಸಾಲಿನ ಸಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಆದ್ದರಿಂದ ನಿರುದ್ಯೋಗಿ ಯುವಕ-ಯುವತಿಯರು ವೈವಿಧ್ಯಮಯ ಮತ್ತು ಹೊಸ ಮಾದರಿಯ ಆಹಾರ ಘಟಕಗಳನ್ನು ಸ್ಥಾಪಿಸಲು ಮುಂದೆ ಬರಬೇಕೆಂದು ಹೇಳಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ಗಡಾದ, ನಬಾರ್ಡ ವ್ಯವಸ್ಥಾಪಕ ಮಯೂರ ಕಾಂಬಳೆ, ಡಿ.ಐ.ಸಿ. ಅಧಿಕಾರಿ ಶಿವಾನಂದ ಕಮ್ಮಾರ, ತೋಟಗಾರಿಕಾ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ಮತ್ತು ಇತರೆ ಸಿಬ್ಬಂದಿ ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande