ಕಚೇರಿಯ ಸಮಯ ಬದಲಾವಣೆ : ಸಿಇಒ ಈಶ್ವರ ಕುಮಾರ್ ಹಾಜರಾತಿ ಪರಿಶೀಲನೆ
ಬಳ್ಳಾರಿ, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : 2026ನೇ ಸಾಲಿನ ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನ ಹಿನ್ನಲೆಯಲ್ಲಿ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಪ್ರತಿದಿನ ಬೆಳಿಗ್ಗೆ 8 ಗಂಟೆಯಿ0ದ ಮಧ್ಯಾಹ್ನ 1.30 ಗಂಟೆಯವರೆಗೆ ಕಚೇರಿ ಸಮಯದಲ
ಕಚೇರಿಯ ಸಮಯ ಬದಲಾವಣೆ : ಸಿಇಒ ಈಶ್ವರ ಕುಮಾರ್ ಹಾಜರಾತಿ ಪರಿಶೀಲನೆ

ಕಚೇರಿಯ ಸಮಯ ಬದಲಾವಣೆ : ಸಿಇಒ ಈಶ್ವರ ಕುಮಾರ್ ಹಾಜರಾತಿ ಪರಿಶೀಲನೆ

ಕಚೇರಿಯ ಸಮಯ ಬದಲಾವಣೆ : ಸಿಇಒ ಈಶ್ವರ ಕುಮಾರ್ ಹಾಜರಾತಿ ಪರಿಶೀಲನೆ

ಕಚೇರಿಯ ಸಮಯ ಬದಲಾವಣೆ : ಸಿಇಒ ಈಶ್ವರ ಕುಮಾರ್ ಹಾಜರಾತಿ ಪರಿಶೀಲನೆ

ಕಚೇರಿಯ ಸಮಯ ಬದಲಾವಣೆ : ಸಿಇಒ ಈಶ್ವರ ಕುಮಾರ್ ಹಾಜರಾತಿ ಪರಿಶೀಲನೆ

ಕಚೇರಿಯ ಸಮಯ ಬದಲಾವಣೆ : ಸಿಇಒ ಈಶ್ವರ ಕುಮಾರ್ ಹಾಜರಾತಿ ಪರಿಶೀಲನೆ

ಕಚೇರಿಯ ಸಮಯ ಬದಲಾವಣೆ : ಸಿಇಒ ಈಶ್ವರ ಕುಮಾರ್ ಹಾಜರಾತಿ ಪರಿಶೀಲನೆ

ಬಳ್ಳಾರಿ, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : 2026ನೇ ಸಾಲಿನ ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನ ಹಿನ್ನಲೆಯಲ್ಲಿ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಪ್ರತಿದಿನ ಬೆಳಿಗ್ಗೆ 8 ಗಂಟೆಯಿ0ದ ಮಧ್ಯಾಹ್ನ 1.30 ಗಂಟೆಯವರೆಗೆ ಕಚೇರಿ ಸಮಯದಲ್ಲಿ ಬದಲಾವಣೆ ಹಿನ್ನಲೆಯಲ್ಲಿ ಬುಧವಾರ ದಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ ಅವರು ಜಿ.ಪಂ ಕಾರ್ಯಾಲಯದ ನಾನಾ ಶಾಖೆಗಳಿಗೆ ಭೇಟಿ ನೀಡಿ ಹಾಜರಾತಿಯನ್ನು ಪರಿಶೀಲನೆ ಮಾಡಿದರು.

ಈ ವೇಳೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ ಅವರು ಮಾತನಾಡಿ, ಬದಲಾದ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಎಂದಿನ0ತೆ ಯಾವುದೇ ಲೋಪ, ಅಡೆತಡೆ ಇಲ್ಲದೇ ಕರ್ತವ್ಯ ನಿರ್ವಹಿಸತಕ್ಕದ್ದು, ಸಾರ್ವಜನಿಕರಿಗೆ ಯಾವುದೇ ರೀತಿ ಅನಾನುಕೂಲತೆಯಾಗದಂತೆ ಹಾಗೂ ತುರ್ತು ಸಂದರ್ಭದಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶಿಸಿದಲ್ಲಿ ಸಮಯದ ಪರಿಮಿತಿ ಇಲ್ಲದೇ ಕರ್ತವ್ಯ ನಿರ್ವಹಿಸಬೇಕು ಎಂದು ಸಂಬ0ಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ ಕಾರ್ಯಾಲಯದ ವಿವಿಧ ವಿಭಾಗಗಳಾದ ಆಡಳಿತ ವಿಭಾಗ, ನರೇಗಾ ವಿಭಾಗ, ಎಸ್.ಬಿ.ಎಂ ವಿಭಾಗ, ಲೆಕ್ಕಾ ಶಾಖೆ ವಿಭಾಗ, ಯೋಜನಾ ವಿಭಾಗ, ಗ್ರಾಮೀಣಾ ಮತ್ತು ಕುಡಿಯುವ ನೀರು ಶಾಖೆಗಳಿಗೆ ಭೇಟಿ ನೀಡಿ ಸಿಬ್ಬಂದಿಗಳ ಹಾಜರಾತಿಯನ್ನು ಪರಿಶೀಲಿಸಿದರು. ಇನ್ನೂ ಕೆಲವು ಅಧಿಕಾರಿ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬಾರದೆ ಇರುವ ಕಾರಣ ಅವರಿಗೆ ಇನ್ನು ಮುಂದೆ ಈ ರೀತಿಯಾಗದಂತೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದರು.

ನಂತರ ಕೆಲವು ಶಾಖೆಗಳಲ್ಲಿ ಸ್ವಚ್ಚತೆ ಇಲ್ಲದಿರುವುದನ್ನು ಕಂಡು ಅಸಮಧಾನಗೊಂಡು ಸ್ವಚ್ಚವಾಗಿ ಇಟ್ಟುಕೊಳ್ಳಲು ಸಿಬ್ಬಂದಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಜಿ.ಪಂ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಯೋಜನಾ ನಿರ್ದೇಶಕರು ಶರಣಬಸವರಾಜ ಕೆ, ಮುಖ್ಯ ಯೊಜನಾ ಅಧಿಕಾರಿ ಡಾ.ಟಿ.ರೋಣಿ, ಲೆಕ್ಕಾಧಿಕಾರಿ ವಿಜಯ ಶಂಕರ, ಸಹಾಯಕ ಕಾರ್ಯದರ್ಶಿ ರಾಘವೇಂದ್ರ ಸೇರಿದಂತೆ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande